ಬೆಂಗಳೂರು: ರಾಜ್ಯ ಸರ್ಕಾರವು sಕಾಂಪೀಟ್ ವಿತ್ ಚೈನಾ ಯೋಜನೆ ಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ. ಗಳನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಿಳಿಸಿದರು. ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಪೀಟ್ ವಿತ್ ಚೈನಾ ಯೋಜನೆಯಡಿ ಸ್ಥಾಪಿಸಲಾದ ವಿವಿಧ ವಲಯಗಳ ಉದ್ಯಮಿಗಳನ್ನೊಳಗೊಂಡ 6 ವಿಷನ್ ಗ್ರೂಪ್‍ಗಳ ಸದಸ್ಯರೊಂದಿಗೆ ಸಂವಾದ…
ಮೈಸೂರು, ಮಂಡ್ಯ ಭಾಗದ ಜನರ ತಲ್ಲಣಗೊಳಿಸಿದ ಭಾರೀ ಸದ್ದು
September 26, 2018ಮೈಸೂರು: ಇತ್ತೀಚೆಗೆ ತಾನೆ ಕೊಡಗಿನಲ್ಲಿ ಉಂಟಾದ ಭೂಕಂಪನ ಹಾಗೂ ಪ್ರವಾಹದ ಭೀಕರತೆಯಿಂದ ಚೇತರಿಸಿಕೊಳ್ಳುವ ಮುನ್ನವೇ ಇಂದು ಮಧ್ಯಾಹ್ನ 2 ಬಾರಿ ಕೇಳಿ ಬಂದ ಭಾರೀ ಸದ್ದಿನಿಂದಾಗಿ ಮೈಸೂರು ಮತ್ತು ಮಂಡ್ಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಕೊಡಗಿನಲ್ಲಿ ಕೂಡ ದುರಂತ ಸಂಭವಿ ಸುವ ಮುನ್ನ ಭಾರೀ ಶಬ್ದ ಕೇಳಿಬಂದಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೈಸೂರು ಸುತ್ತಮುತ್ತ ಭೂ ಕಂಪನ ಉಂಟಾಗಿರಬಹುದೆಂದು ಜನರು ಆತಂಕಕ್ಕೊಳಗಾಗಿದ್ದರು. `ಮೈಸೂರು ಮಿತ್ರ’ ಕಾರ್ಯಾಲಯಕ್ಕೆ ಕರೆ ಮಾಡಿದ ಮಂಡ್ಯ ಹಾಗೂ ಮೈಸೂರಿನ ಹಲವರು, ತಮಗೆ ಉಂಟಾದ…
ಡಾ. ರಾಜ್‍ಕುಮಾರ್ ಅಪಹರಣ ಪ್ರಕರಣ ಎಲ್ಲಾ 9 ಆರೋಪಿಗಳು ಖುಲಾಸೆ
September 26, 2018ಈರೋಡ್: ಕನ್ನಡ ವರನಟ ಡಾ. ರಾಜ್‍ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ 9 ಮಂದಿಯನ್ನು ಖುಲಾಸೆಗೊಳಿಸಿ ಈರೋಡು ಜಿಲ್ಲೆಯ ಗೋಪಿಚೆಟ್ಟಿ ಪಾಳ್ಯಂ ನ್ಯಾಯಾಲಯದ ನ್ಯಾಯಾಧೀಶರಾದ ಮಣಿ ಅವರು ಇಂದು ತೀರ್ಪು ನೀಡಿದರು. ರಾಜ್‍ಕುಮಾರ್ ಅಪಹರಣ ಪ್ರಕರಣ ವನ್ನು ದಾಖಲಿಸಿಕೊಂಡಿದ್ದ ತಾಳವಾಡಿ ಪೊಲೀಸರು, ವೀರಪ್ಪನ್ ಸೇರಿದಂತೆ 14 ಮಂದಿ ವಿರುದ್ಧ ಕಳೆದ 7 ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವೀರಪ್ಪನ್, ಸೇತುಕುಳಿ ಗೋವಿಂದ ಮತ್ತು ಚಂದ್ರೇಗೌಡ 2004ರಲ್ಲಿ ಎಸ್‍ಟಿಎಫ್ ಗುಂಡಿಗೆ ಬಲಿಯಾಗಿದ್ದರು….
ರವಿವರ್ಮ ಕಲಾ ಸಂಸ್ಥೆಯಿಂದ ಮಣ್ಣಿನ ಮೂರ್ತಿ ತಯಾರಿಕಾ ಪ್ರಾತ್ಯಕ್ಷಿಕೆ
September 26, 2018ಮೈಸೂರು: ಮೈಸೂರಿನ ಬಲ್ಲಾಳ್ ಸರ್ಕಲ್‍ನಲ್ಲಿರುವ ರವಿವರ್ಮ ಕಲಾ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಮಣ್ಣಿನ ಕಲಾಕೃತಿ ತಯಾರಿಕೆ ಕಾರ್ಯಾಗಾರÀ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಮಣ್ಣಿನ ಮೂರ್ತಿ ತಯಾರಿಕೆ ಬಗ್ಗೆ ತಿಳಿದುಕೊಂಡರು. ಕಲಾಕೃತಿಗಳ ತಯಾರಿಕೆ, ಬಣ್ಣ ಹಚ್ಚುವುದು ಹಾಗೂ ಕಲೆಗೆ ಸಂಬಂಧಪಟ್ಟ ವಿಚಾರಗಳ ಕುರಿತು ತರಬೇತಿ ನೀಡಲಾಯಿತು. ಸ್ಟೆನ್ಸಿಲ್‍ನಲ್ಲಿ ಕಲಾಕೃತಿಗಳನ್ನು ಬಿಡಿಸುವುದು, ಮೂರ್ತಿಗಳ ನಿರ್ಮಾಣದಲ್ಲಿ ಬಳಸಲಾಗುವ ವಸ್ತುಗಳು, ವಿನ್ಯಾಸ ಹಾಗೂ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಲಾಯಿತು. ಆಯಿಲ್ ಪೇಂಟಿಂಗ್, ವಾಟರ್ ಕಲರಿಂಗ್,…
ಸರ್ಕಾರಿ ಶಾಲೆಗಳ ಶೂ ಖರೀದಿಯಲ್ಲಿ ಭಾರೀ ಅವ್ಯವಹಾರ ಆರೋಪ, ತೀವ್ರ ಚರ್ಚೆ ತನಿಖೆ ನಡೆಸುವುದಾಗಿ ಸಿಇಓ ಭರವಸೆ
September 26, 2018ಮೈಸೂರು ಜಿಪಂ ಸಾಮಾನ್ಯ ಸಭೆ ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯೀಮಾ ಸುಲ್ತಾನಾ ನಜೀರ್‍ಸಾಬ್ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ಕಾರಿ ಶಾಲೆಗಳ ಶೂ ಮತ್ತು ಸಾಕ್ಸ್ ಯೋಜನೆಯಡಿ ಶೂ ಖರೀದಿ ವಿಚಾರ ತೀವ್ರ ಚರ್ಚೆಗೆ ಕಾರಣವಾಯಿತು. ಜಿಲ್ಲಾ ಪಂಚಾಯಿತಿಯ ಹಂಪಾಪುರ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಶೂ ಮತ್ತು ಸಾಕ್ಸ್ ಯೋಜನೆಯಡಿ ಶೂ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಜಿಪಂ ಸದಸ್ಯ ಎಸ್.ಶ್ರೀಕೃಷ್ಣ ಗಂಭೀರವಾಗಿ ಆರೋಪಿಸಿ, ಸಭೆಯ ಗಮನ…
ದೇವರಾಜ್, ಪ್ರಜ್ವಲ್ ದೇವರಾಜ್ ಆಸ್ಪತ್ರೆಯಿಂದ ಬಿಡುಗಡೆ
September 26, 2018ಮೈಸೂರು: ಕಾರು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಟರಾದ ದೇವರಾಜ್ ಮತ್ತು ಪುತ್ರ ಪ್ರಜ್ವಲ್ ದೇವರಾಜ್ ಅವರು ಇಂದು ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಸೋಮವಾರ ಮುಂಜಾನೆ ಮೈಸೂರಿನ ಜೆಎಸ್‍ಎಸ್ ಅರ್ಬನ್ ಹಾತ್ ಎದುರಿನ ರಿಂಗ್ ರಸ್ತೆ ತಿರುವಿನಲ್ಲಿ ಆಡಿ ಕ್ಯೂ-7 ಕಾರು ಮೀಡಿಯನ್‍ಗೆ ಡಿಕ್ಕಿ ಹೊಡೆದು, ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ನಟರಾದ ದರ್ಶನ್, ಹಿರಿಯ ನಟ ದೇವರಾಜ್, ಅವರ ಪುತ್ರ ಪ್ರಜ್ವಲ್ ದೇವರಾಜ್ ಹಾಗೂ ಆಂಟನಿ ರಾಯ್ ಗಾಯಗೊಂಡಿದ್ದರು. ಸೋಮವಾರ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ…
ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರ ಮಾಡಿ: ಜನತೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮನವಿ
September 26, 2018ಮೈಸೂರು: ಸ್ವಚ್ಛತೆಗೆ ಹೆಸರುವಾಸಿಯಾಗಿರುವ ಸಾಂಸ್ಕøತಿಕ ನಗರಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸಿ ಎಂದು ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಜನತೆಯಲ್ಲಿ ಮನವಿ ಮಾಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ದೇವರಾಜ ಮಾರುಕಟ್ಟೆಯ ಚಿಕ್ಕಗಡಿಯಾರದ ಬಳಿ ಏರ್ಪಡಿಸಿದ್ದ ಸ್ವಚ್ಛ ಸರ್ವೇಕ್ಷಣಾ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡದಂತೆ ತಡೆಯಬೇಕು. ಪ್ಲಾಸ್ಟಿಕ್ ತಿಂದು ದನ-ಕರುಗಳು ಅನಾರೋಗ್ಯಕ್ಕೊಳಗಾಗುವುದಲ್ಲದೆ ಪರಿಸರ ಹಾನಿಯಾಗಲಿದೆ ಎಂದರು. ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸ್ವಚ್ಛತೆಗೆ ಪ್ರಶಸ್ತಿ ಬಂದಿರುವುದರಿಂದ ಈ ಬಾರಿಯೂ ಸ್ವಚ್ಛತೆ ಕಾಪಾಡುವ ಮೂಲಕ…
ಮೋದಿ ವಿರುದ್ಧ ಜನ ಜಾಗೃತಿಗಾಗಿ ಅ.2ರಿಂದ ಕಾಂಗ್ರೆಸ್ `ಲೋಕ ಸಂಪರ್ಕ ಅಭಿಯಾನ’
September 26, 2018ಮೈಸೂರು: ಅ.2ರ ಗಾಂಧಿ ಜಯಂತಿ ದಿನದಿಂದ ನ.19ರವರೆಗೆ ಕಾಂಗ್ರೆಸ್‍ನಿಂದ `ಲೋಕ ಸಂಪರ್ಕ ಅಭಿಯಾನ’ ಹಮ್ಮಿಕೊಂಡಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ತಿಳಿಸಿದರು. ರಫೇಲ್ ಯುದ್ಧ ವಿಮಾನ ಖರೀದಿ ಸೇರಿದಂತೆ ಅನೇಕ ಭ್ರಷ್ಟಾಚಾರದಲ್ಲಿ ನರೇಂದ್ರ ಮೋದಿ ತೊಡಗಿದ್ದಾರೆ. ಜನರನ್ನು ಮರಳು ಮಾಡುತ್ತಿರುವ ಮೋದಿ, ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಯಾವ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಈ ಬಗ್ಗೆ…
ಕೊಡಗು ಸಂತ್ರಸ್ತರಿಗಾಗಿ ನಾಳೆ ಸಂಗೀತ ಸಂಜೆ
September 26, 2018ಮೈಸೂರು: ಕೊಡಗು ಸಂತ್ರಸ್ತರ ನಿಧಿ ಸಂಗ್ರಹಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಡಾ.ಶ್ರೀನಿವಾಸ್ ನೇತೃತ್ವದಲ್ಲಿ ವಿದ್ಯುಲ್ಲಹರಿ ಇಂಜಿನಿಯರ್‍ಗಳ ಸಮೂಹದಿಂದ ಸೆ.27ರಂದು ಸಂಜೆ 5.30 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ `ಮೆಲ್ಲುಸಿರೆ ಸವಿಗಾನ’ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿರುವುದಾಗಿ ವಿದ್ಯುಲ್ಲಹರಿ ಅಧ್ಯಕ್ಷ ಶಶಿಕುಮಾರ್ ಇಂದಿಲ್ಲಿ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಉಪಕುಲಪತಿ ಡಾ.ಬಿ.ಜಿ. ಸಂಗಮೇಶ್ವರ್ ಅಧ್ಯಕ್ಷತೆ ವಹಿಸುವರು ಎಂದರು. ಕನ್ನಡ, ಹಿಂದಿ, ತಮಿಳು, ತೆಲುಗಿನ ಹಳೆಯ ಚಿತ್ರಗೀತೆಗಳು ಸೇರಿದಂತೆ…
ಸೆ.28ರಿಂದ ವಿದ್ಯಾವರ್ಧಕ ಕಾಲೇಜಿನಲ್ಲಿ ಕಲಾ ಸಂಭ್ರಮ
September 26, 2018ಮೈಸೂರು: ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ 40ನೇ ವರ್ಷಾಚರಣೆ ಅಂಗವಾಗಿ ಸೆ.28 ಮತ್ತು 29ರಂದು ಕಾಲೇಜು ಸಭಾಂಗಣದಲ್ಲಿ ರಾಜ್ಯಮಟ್ಟದ ಅಂತರ ಕಲಾ ಕಾಲೇಜುಗಳ ಕಲಾ ಉತ್ಸವ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮರೀಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಸೆ.28ರಂದು ಬೆಳಿಗ್ಗೆ 10 ಗಂಟೆಗೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳಿಂದಾಗಿ ಯುವ ಜನತೆಯ ಸೃಜನಶೀಲತೆ ಕುಂಠಿತವಾಗುತ್ತಿದೆ ಎಂಬ…