ಕೊಡಗು ಸಂತ್ರಸ್ತರಿಗಾಗಿ ನಾಳೆ ಸಂಗೀತ ಸಂಜೆ
ಮೈಸೂರು

ಕೊಡಗು ಸಂತ್ರಸ್ತರಿಗಾಗಿ ನಾಳೆ ಸಂಗೀತ ಸಂಜೆ

September 26, 2018

ಮೈಸೂರು: ಕೊಡಗು ಸಂತ್ರಸ್ತರ ನಿಧಿ ಸಂಗ್ರಹಕ್ಕಾಗಿ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಡಾ.ಶ್ರೀನಿವಾಸ್ ನೇತೃತ್ವದಲ್ಲಿ ವಿದ್ಯುಲ್ಲಹರಿ ಇಂಜಿನಿಯರ್‍ಗಳ ಸಮೂಹದಿಂದ ಸೆ.27ರಂದು ಸಂಜೆ 5.30 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ `ಮೆಲ್ಲುಸಿರೆ ಸವಿಗಾನ’ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿರುವುದಾಗಿ ವಿದ್ಯುಲ್ಲಹರಿ ಅಧ್ಯಕ್ಷ ಶಶಿಕುಮಾರ್ ಇಂದಿಲ್ಲಿ ತಿಳಿಸಿದರು.

ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಉಪಕುಲಪತಿ ಡಾ.ಬಿ.ಜಿ. ಸಂಗಮೇಶ್ವರ್ ಅಧ್ಯಕ್ಷತೆ ವಹಿಸುವರು ಎಂದರು. ಕನ್ನಡ, ಹಿಂದಿ, ತಮಿಳು, ತೆಲುಗಿನ ಹಳೆಯ ಚಿತ್ರಗೀತೆಗಳು ಸೇರಿದಂತೆ ಅಯ್ದ ಭಾವಗೀತೆಗಳನ್ನು ಲೈವ್ ವಾದ್ಯಗೋಷ್ಠಿಯೊಂದಿಗೆ 15 ಮಂದಿ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯುಲ್ಲಹರಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »