ಮೈಸೂರು: ಮೈಸೂರಿನ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಇಂದು ನಡೆದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ತಡವಾಗಿ ಬಂದ ನೋಡಲ್ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಹೊರಗಿರಿ ಸಿದ ಪ್ರಸಂಗ ನಡೆಯಿತು.
ಬೆಳಿಗ್ಗೆ 11 ಗಂಟೆಗೆ ಕಾರ್ಯಾಗಾರ ಆರಂಭವಾಯಿತಾದರೂ, ಜಿಲ್ಲಾಧಿಕಾರಿ ಗಳು ಭಾರತ ಚುನಾವಣಾ ಆಯೋಗ ದಿಂದ ಆಗಿಂದಾಗ್ಗೆ ಬರುತ್ತಿರುವ ಮಾರ್ಗ ಸೂಚಿ ಹಾಗೂ ನೀತಿ ಸಂಹಿತೆ ಬಗ್ಗೆ ನೋಡಲ್ ಅಧಿಕಾರಿಗಳಿಗೆ ವಿವರಿಸಿದರು.
ನೋಡಲ್ ಅಧಿಕಾರಿಗಳು ಲೋಕ ಸಭಾ ಚುನಾವಣೆ ಕರ್ತವ್ಯ ನಿರ್ವಹಿಸು ವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸುತ್ತಿರುವಾಗ ಮಧ್ಯೆ-ಮಧ್ಯೆ ಬಾಗಿಲು ತೆಗೆದುಕೊಂಡು 11.30 ಗಂಟೆ ಯಾದರೂ ನೋಡಲ್ ಅಧಿಕಾರಿಗಳು ಬರುತ್ತಲೇ ಇದ್ದರು.
ಇದರಿಂದ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಡಿಸಿ ಅಭಿರಾಂ ಜಿ.ಶಂಕರ್ ಅವರು, `ನಿಮಗೆ ನಿಗದಿಯಾದ ಸಮಯಕ್ಕೆ ಏಕೆ ಬರುವುದಿಲ್ಲ. ಸರಿಯಾಗಿ ಮಾಹಿತಿ ನೀಡಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಚುನಾವಣಾ ಶಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ನಂತರವೂ ಬರುತ್ತಿದ್ದರಿಂದ ಕೋಪ ಗೊಂಡ ಜಿಲ್ಲಾಧಿಕಾರಿಗಳು, ಸೆನೆಟ್ ಭವನದ ಬಾಗಿಲು ಬಂದ್ ಮಾಡಿಸಿ ತಡವಾಗಿ ಬರುವವರನ್ನು ಬಿಡಬೇಡಿ ಎಂದು ತಾಕೀತು ಮಾಡಿದ ಹಿನ್ನೆಲೆಯಲ್ಲಿ ಸುಮಾರು 15 ಮಂದಿ ಒಳಗೆ ಬರಲಾ ರದೇ ಪರದಾಡುತ್ತಿದ್ದರು.
ಯಾರ್ಯಾರು ಗೈರು ಹಾಜರಾಗಿದ್ದಾರೆ ಅವರ ಹೆಸರು ಪಟ್ಟಿ ಮಾಡಿಕೊಂಡು ತಕ್ಷಣವೇ ನೋಟೀಸ್ ಜಾರಿ ಮಾಡಿ ಎಂದು ಚುನಾವಣಾ ಶಾಖೆ ಅಧಿಕಾರಿ ಗಳಿಗೆ ಡಿಸಿ ತಾಕೀತು ಮಾಡಿದರು. ಪ್ರತಿ ಯೊಬ್ಬರೂ, ಭಾರತ ಚುನಾವಣಾ ಆಯೋಗದಿಂದ ಬರುವ ನೀತಿ ಸಂಹಿತೆ ಕುರಿತ ಸೂಚನೆ, ಮಾರ್ಗಸೂಚಿಗಳನ್ನು ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿ ಕೊಂಡು ಅದರಂತೆ ಕಾರ್ಯೋನ್ಮುಖರಾಗ ಬೇಕು. ನಿಮಗೆ ಅರ್ಥವಾಗದ ಹಾಗೂ ಸಂಶಯವಿರುವ ವಿಷಯಗಳನ್ನು ತಮ್ಮ ಮೇಲಾಧಿಕಾರಿಗಳಿಂದ ಕೇಳಿ ತಿಳಿದು ಕೊಳ್ಳಬೇಕು ಎಂದು ಅಭಿರಾಂ ಶಂಕರ್ ತಿಳಿಸಿದರು.
ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. ಅಗತ್ಯ ಮಾಹಿತಿಗಳನ್ನು ಪಡೆದಿರುವ ನೀವು ಸರಿಯಾಗಿ ಕರ್ತವ್ಯ ನಿರ್ವಹಿಸಿ ಲೋಪವಿಲ್ಲದಂತೆ ಚುನಾ ವಣಾ ಕೆಲಸ ನಿರ್ವಹಿಸಬೇಕೆಂದೂ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.