ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ  ಖಾಸಗಿಯವರಿಗೆ ವಹಿಸುವ ಸಂಬಂಧ ತಿಂಗಳಲ್ಲಿ ಟೆಂಡರ್
ಮೈಸೂರು

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ವಹಿಸುವ ಸಂಬಂಧ ತಿಂಗಳಲ್ಲಿ ಟೆಂಡರ್

December 9, 2018

ಮೈಸೂರು:  ಕೆ.ಆರ್. ನಗರ ತಾಲೂಕು ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಯನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿಯವ ರಿಗೆ ವಹಿಸುವ ನಿಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದು ರೇಷ್ಮೆ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.

ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭ ಸಂಬಂಧ ಶನಿವಾರ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ಕ್ಷೇತ್ರದಿಂದ ನಿರ್ವಹಿಸು ತ್ತಿರುವ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ. ಹಾಗಾಗಿ ಈ ಹಿಂದೆಯೇ ಶ್ರೀರಾಮ ಸಹ ಕಾರ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಆ ಭಾಗದ ರೈತರು ಭಾವನಾತ್ಮಕ ಸಂಬಂಧ ಹೊಂದಿರುವುದರಿಂದ ನಾನು ಮಾರಾಟಕ್ಕೆ ಅವಕಾಶ ನೀಡಲಿಲ್ಲ. ಈಗ ರೈತರ ಹಿತದೃಷ್ಟಿ ಯಿಂದ 40 ವರ್ಷಗಳ ಅವಧಿಗೆ ಖಾಸಗಿ ಯವರಿಗೆ ವಹಿಸುವ ಸಂಬಂಧ ಲೀಸ್ ಟೆಂಡರ್ ಕರೆಯಲು ತೀರ್ಮಾನಿಸಿ, ಸರ್ಕಾ ರದ ಒಪ್ಪಿಗೆಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದರು.

ಕೆಂಚೇಗೌಡರ ಪರಿಶ್ರಮದಿಂದ ಆರಂಭ ಗೊಂಡ ಶ್ರೀರಾಮ ಸಕ್ಕರೆ ಕಾರ್ಖಾನೆ ಅನಿ ವಾರ್ಯ ಪರಿಸ್ಥಿತಿಯಿಂದ ಮುಚ್ಚಿದೆ. ಪುನ ರಾರಂಭ ಸಂಬಂಧ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಳೆದ ಆಗಸ್ಟ್‍ನಲ್ಲಿ ಸಭೆ ನಡೆಸಿ, ಸ್ಥಳೀಯ ಶಾಸ ಕರ ನೇತೃತ್ವದಲ್ಲಿ ಸಭೆ ಮಾಡಿ, ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆ ಸಂದರ್ಭ ದಲ್ಲಿ ಕೊಡಗಿನಲ್ಲಿ ನೆರೆ ಹಾವಳಿ, ಭೂ ಕುಸಿತ ದಿಂದ ಅನಾಹುತ ಸಂಭವಿಸಿದ್ದ ಕಾರಣ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಸಭೆ ನಡೆಸಿ, ಚರ್ಚಿಸಲಾಗಿದ್ದು, ಲೀಸ್ ಟೆಂಡರ್ ಕರೆಯುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

30ರ ಬದಲು 40 ವರ್ಷ: ಶ್ರೀರಾಮ ಸಕ್ಕರೆ ಕಾರ್ಖಾನೆಯಲ್ಲಿದ್ದ 215 ನೌಕರರು ಸ್ವಯಂ ನಿವೃತ್ತರಾಗಿದ್ದು, ಅವರಿಗೆ ನೀಡಬೇಕಿ ರುವ ಭತ್ಯೆಯಲ್ಲಿ 3.05 ಕೋಟಿ ರೂ. ಹಣ ವನ್ನು ಮುಖ್ಯಮಂತ್ರಿಗಳ ಸೂಚನೆಯಂತೆ ಆದಷ್ಟು ಬೇಗ ಕೊಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಈ ಹಿಂದೆ ಅಂಬಿಕಾ ಶುಗರ್ಸ್ ಸಂಸ್ಥೆಗೆ ಕಾರ್ಖಾನೆಯನ್ನು 30 ವರ್ಷಕ್ಕೆ ಲೀಸ್ ನೀಡಲಾಗಿತ್ತು. ನಂತರ ಲೀಸ್ ಅವಧಿ ಯನ್ನು 10 ವರ್ಷ ವಿಸ್ತರಿಸಬೇಕೆಂಬ ಸಂಸ್ಥೆಯ ಬೇಡಿಕೆಗೆ ಅಂದಿನ ಸರ್ಕಾರ ಸ್ಪಂದಿಸಲಿಲ್ಲ. ಮತ್ತೊಂದು ಅವಧಿಗೆ ಲೀಸ್ ಪಡೆಯಬೇಕಾ ದರೆ ಅಭಿವೃದ್ಧಿ ಕಾರ್ಯಗಳಿಗೆ ಮತ್ತೆ 100 ಕೋಟಿ ರೂ. ವಿನಿಯೋಗಿಸಬೇಕೆಂಬ ಕಾರ ಣಕ್ಕೆ ಸಂಸ್ಥೆ ಹಿಂದೆ ಸರಿಯಿತು. ನಂತರ 2 ಬಾರಿ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಭಾಗವಹಿಸಿರಲಿಲ್ಲ. 30ರ ಬದಲು 40 ವರ್ಷಕ್ಕೆ ಲೀಸ್ ಅವಧಿ ವಿಸ್ತರಿಸಬೇಕೆಂ ಬುದು ಸಾಮಾನ್ಯ ಬೇಡಿಕೆಯಾಗಿತ್ತು. ಹಾಗಾಗಿ 40 ವರ್ಷಕ್ಕೆ ವಿಸ್ತರಿಸಲಾಗಿದ್ದು, ತುರ್ತು ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. ಈ ಬಾರಿ ಹಲವು ಸಂಸ್ಥೆಗಳು ಟೆಂಡರ್ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಹೆಗ್ಗಣಗಳು ಸೇರಿಕೊಂಡಿವೆ: ಚುಂಚನ ಕಟ್ಟೆ, ಪಾಂಡವಪುರ, ರಾಯಚೂರು ಸೇರಿ ದಂತೆ ಸಹಕಾರಿ ಕ್ಷೇತ್ರದಲ್ಲಿÀ ನಿರ್ವಹಿಸಲಾಗು ತ್ತಿರುವ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ. ಖಾಸಗಿ ಸಂಸ್ಥೆ ನಿರ್ವಹಿಸುತ್ತಿರುವ ಕಾರ್ಖಾನೆ ಗಳು ಸುಸ್ಥಿತಿಯಲ್ಲಿವೆ. ಅಂಬಿಕಾ ಶುಗರ್ಸ್‍ಗೆ ಲೀಸ್ ನೀಡಿದ್ದ ಅವಧಿಯಲ್ಲಿ ಶ್ರೀರಾಮ ಸಕ್ಕರೆ ಕಾರ್ಖಾನೆಯೂ ಚೆನ್ನಾಗಿ ನಡೆಯುತ್ತಿತ್ತು. ಸಹ ಕಾರಿ ಕ್ಷೇತ್ರದಲ್ಲಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಹೆಗ್ಗಣಗಳು ಸೇರಿ ಕೊಂಡಿವೆ. ಹೆಗ್ಗಣಗಳೆಂ ದರೆ ನಮ್ಮಂತಹ ರಾಜಕಾರಣಿಗಳಿರಬಹುದು ಅಥವಾ ಅಧಿಕಾರಿಗಳಿರಬಹುದು. ಆದ್ದರಿಂ ದಲೇ ಕಾರ್ಖಾನೆಗಳು ಸುಸ್ಥಿತಿಯಲ್ಲಿರಲು ಸಾಧ್ಯವಾಗಿಲ್ಲ. ಹಾಗಾಗಿ ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯನ್ನೊ ಳಗೊಂಡ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ರೈತರ ಹಿತದೃಷ್ಟಿಯಿಂದ ಖಾಸಗಿಯವರಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದರು. ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ವಿಶೇ ಷಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಜಿ.ಉಮೇಶ್ ಮತ್ತಿತರರು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದರು.

Translate »