ರವಿವರ್ಮ ಕಲಾ ಸಂಸ್ಥೆಯಿಂದ ಮಣ್ಣಿನ ಮೂರ್ತಿ ತಯಾರಿಕಾ ಪ್ರಾತ್ಯಕ್ಷಿಕೆ
ಮೈಸೂರು

ರವಿವರ್ಮ ಕಲಾ ಸಂಸ್ಥೆಯಿಂದ ಮಣ್ಣಿನ ಮೂರ್ತಿ ತಯಾರಿಕಾ ಪ್ರಾತ್ಯಕ್ಷಿಕೆ

September 26, 2018

ಮೈಸೂರು: ಮೈಸೂರಿನ ಬಲ್ಲಾಳ್ ಸರ್ಕಲ್‍ನಲ್ಲಿರುವ ರವಿವರ್ಮ ಕಲಾ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಮಣ್ಣಿನ ಕಲಾಕೃತಿ ತಯಾರಿಕೆ ಕಾರ್ಯಾಗಾರÀ ನಡೆಯಿತು.

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಮಣ್ಣಿನ ಮೂರ್ತಿ ತಯಾರಿಕೆ ಬಗ್ಗೆ ತಿಳಿದುಕೊಂಡರು. ಕಲಾಕೃತಿಗಳ ತಯಾರಿಕೆ, ಬಣ್ಣ ಹಚ್ಚುವುದು ಹಾಗೂ ಕಲೆಗೆ ಸಂಬಂಧಪಟ್ಟ ವಿಚಾರಗಳ ಕುರಿತು ತರಬೇತಿ ನೀಡಲಾಯಿತು.
ಸ್ಟೆನ್ಸಿಲ್‍ನಲ್ಲಿ ಕಲಾಕೃತಿಗಳನ್ನು ಬಿಡಿಸುವುದು, ಮೂರ್ತಿಗಳ ನಿರ್ಮಾಣದಲ್ಲಿ ಬಳಸಲಾಗುವ ವಸ್ತುಗಳು, ವಿನ್ಯಾಸ ಹಾಗೂ ತಾಂತ್ರಿಕತೆ ಬಗ್ಗೆ ಮಾಹಿತಿ ನೀಡಲಾಯಿತು. ಆಯಿಲ್ ಪೇಂಟಿಂಗ್, ವಾಟರ್ ಕಲರಿಂಗ್, ಡಿಜಿಟಲ್ ಹಾಗೂ ಅಕ್ರಾಲಿಕ್ ಪೇಂಟಿಂಗ್ ಬಗ್ಗೆ ಇದೇ ವೇಳೆ ತರಬೇತಿ ನೀಡಲಾಯಿತು.

ಸಾಮಾಜಿಕ ಮಾಧ್ಯಮ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪಿ.ಸಿ. ಸುಮಂತ್ ಕುಮಾರ್ ಹಾಗೂ ಬಿ. ಚಂದನ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಆಸಕ್ತರಿಂದ ಮೂಡಿ ಬಂದ ಉತ್ತಮ ಕಲಾಕೃತಿಗಳನ್ನು ಫೇಸ್‍ಬುಕ್ ಪೇಜಿಗೆ ಹಾಕಿ ಸಾರ್ವಜನಿಕರಿಂದ ಬಂದ ಲೈಕ್ಸ್ ಆಧಾರದಲ್ಲಿ ಪ್ರಶಸ್ತಿ ವಿತರಿಸಲಾಯಿತು.

ಚಿಕ್ಕಮಗಳೂರು ಮೂಲದ ಶಾಂತಿನಿಕೇತನ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಅವರು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ವಕೀಲ ಎಸ್.ಅರುಣ್‍ಕುಮಾರ್ ಅವರ ತದ್ರೂಪ ಜೇಡಿ ಮಣ್ಣಿನ ಪ್ರತಿರೂಪ ರಚಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು. ಕಾರ್ಯಾಗಾರದ ನಿರ್ದೇಶಕ ಮನುಚಕ್ರವರ್ತಿ, ಮಂಜುನಾಥ್ ಹೊನ್ನಾಪುರ, ರವಿವರ್ಮ ಕಲಾ ಶಾಲೆಯ ಪ್ರಾಂಶುಪಾಲ ಶಿವಕುಮಾರ್ ಕೇಸರಮಡು ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Translate »