ಮೈಸೂರು: ಆಷಾಡ ಮಾಸದ ಕೊನೆ ಶುಕ್ರವಾರವಾದ ಇಂದು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ ನಡೆದ ವಿಶೇಷ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ನಾಡದೇವಿ ದರ್ಶನ ಪಡೆದು ಸಂಭ್ರಮಿಸಿದರು. ಮೋಡ ಮುಸುಕಿದ ವಾತಾವರಣ, ಕೊರೆಯುವ ಚಳಿ ಹಾಗೂ ತುಂತುರು ಮಳೆಯ ನಡುವೆ ಮುಂಜಾನೆ 3 ಗಂಟೆಯಿಂದಲೇ ಭಕ್ತರು ದೇವಾಲಯದ ಮುಂದೆ ಸರದಿ ಸಾಲಿನಲ್ಲಿ ನಿಂತು ಆಷಾಡ ಮಾಸದ ಕೊನೆ ಶುಕ್ರವಾರ ಪೂಜಾ ಸಂಭ್ರಮವನ್ನು ಕಣ್ತುಂಬಿಕೊಂಡು ಹರ್ಷ ವ್ಯಕ್ತಪಡಿಸಿದರು. ಸರದಿ ಸಾಲಿನಲ್ಲಿದ್ದ ನೂರಾರು ಭಕ್ತರು ನಾಡದೇವಿಗೆ ಜೈಕಾರ ಹಾಕಿ,…
ನಾಡದೇವಿ ಕೃಪೆಯಿಂದ ಎಲ್ಲಾ ಜಲಾಶಯಗಳೂ ಭರ್ತಿ: ಡಿಕೆಶಿ
August 11, 2018ಮೈಸೂರು: ನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕಬಿನಿಯಿಂದ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವುದರಿಂದ ನದಿ ಪಾತ್ರ ಹಾಗೂ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಚಾಮುಂಡಿಬೆಟ್ಟದಲ್ಲಿ ದೇವಿಯ ದರ್ಶನ ಪಡೆದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಷಾಡ ಮಾಸದ ಕೊನೆ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದಿದ್ದೇನೆ. ದೇವಿಯ ಕೃಪೆ ರಾಜ್ಯದ ಮೇಲಿದೆ. ಚಾಮುಂಡೇಶ್ವರಿ ತಾಯಿ…
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ, ಚಾ.ಬೆಟ್ಟದಲ್ಲಿ ಬಿಜೆಪಿ ಯುವ ಮೋರ್ಚಾ ವಿಶೇಷ ಪೂಜೆ
August 11, 2018ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲೆಂದು ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲೆಂದು ಪ್ರಾರ್ಥಿಸಿ ಇಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ತಮ್ಮ ಬೆಂಬಲಿಗರೊಂದಿಗೆ ಮೆಟ್ಟಿಲುಗಳ ಮೂಲಕ ಚಾಮುಂಡಿಬೆಟ್ಟ ಹತ್ತಿ ವಿಶೇಷ ಪೂಜೆ ಸಲ್ಲಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಯುವ ಮೋರ್ಚಾದ ಕಾರ್ಯಕರ್ತರು ಹಾಗೂ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಇಂದು ಬೆಳಿಗ್ಗೆ ಪೂಜೆ ಸಲ್ಲಿಸಿ ವಿಜಯೇಂದ್ರ ಬೆಟ್ಟ ಹತ್ತಿದರು. ನಂತರ ದೇವಾಲಯಕ್ಕೆ ತೆರಳಿ…
ಸೆ.9ರಂದು ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ್
August 11, 2018ಮೈಸೂರು: ಮೈಸೂರಿನ ಲೈಫ್ ಈಸ್ ಕಾಲಿಂಗ್ ಸಂಸ್ಥೆಯು ಓಟದ ಉತ್ಸವದ ಅಂಗವಾಗಿ ಸೆ.9ರಂದು ಮೈಸೂರಿನಲ್ಲಿ ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ ಮತ್ತು 10ಕೆ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಿಗ್ಗೆ 5.45 ಗಂಟೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಬಳಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು. 30ಕೆ, ಹಾಫ್ ಮ್ಯಾರಥಾನ್, 16 ವರ್ಷ ಮತ್ತು ಮೇಲ್ಪ ಟ್ಟವರಿಗೆ 10 ಕಿ.ಮೀ. ಓಟ ಹಾಗೂ 10 ವರ್ಷ ಮತ್ತು ಮೇಲ್ಪಟ್ಟವರಿಗೆ ಕೋಟಕ್ ಮಹೀಂದ್ರ ಬ್ಯಾಂಕ್‍ನ 6 ಕಿ.ಮೀ. ಓಟ/ನಡಿಗೆ ವಿಭಾಗಗಳಿವೆ….
ಸೇವೆಯಿಂದ ನಿವೃತ್ತಿ: ಪ್ರೊ.ಅರವಿಂದ ಮಾಲಗತ್ತಿ ಅವರಿಗೆ ಅಭಿನಂದನೆ
August 11, 2018ಮೈಸೂರು: ಮಂಗಳೂರು ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ 34 ವರ್ಷಗಳ ಕಾಲ ಅಧ್ಯಾಪಕ, ಪ್ರಾಧ್ಯಾಪಕರಾಗಿ ಸಾರ್ಥಕ ಸೇವೆ ಸಲ್ಲಿಸಿ, ಜು.31ರಂದು ನಿವೃತ್ತರಾದ ಹಿರಿಯ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಅವರಿಗೆ ಅವರ ಗೆಳೆಯರು, ಅಭಿಮಾನಿಗಳು ಮೈಸೂರು ವಿವಿ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಆತ್ಮೀಯವಾಗಿ ಅಭಿನಂದಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್, ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಹಿರಿಯ ಸಾಹಿತಿ ಡಾ..ಸಿ.ಪಿ.ಕೃಷ್ಣಕುಮಾರ್, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಟಿ.ಕೆ.ಉಮೇಶ್, ಕುಲಸಚಿವ ಪ್ರೊ.ಆರ್.ರಾಜಣ್ಣ, ಚಲನಚಿತ್ರ ಸಾಹಿತಿ,…
ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ ಕಲಾ ವೈಭವ, ವಸ್ತ್ರ ಉತ್ಸವ
August 11, 2018ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ವಲಯ ರಿಂಗ್ ರಸ್ತೆಯಲ್ಲಿರುವ ಜೆಎಸ್‍ಎಸ್ ಅರ್ಬನ್ ಹಾತ್‍ನಲ್ಲಿ `ಕಲಾ ವೈಭವ’ದೊಂದಿಗೆ `ವಸ್ತ್ರ ಉತ್ಸವ’ ಮೈದಳೆದಿದೆ. ಅರ್ಬನ್ ಹಾತ್ ವತಿಯಿಂದ ವರ ಮಹಾಲಕ್ಷ್ಮೀ ಹಬ್ಬದ ಅಂಗವಾಗಿ `ವಸ್ತ್ರ ಉತ್ಸವ’ವನ್ನು ಹಾಗೂ ರಾಜ್ಯ ಸರ್ಕಾರದ ಬೃಹತ್ ಹಾಗೂ ಮೆಗಾ ಕೈಗಾರಿಕಾ ನಿರ್ದೇಶನಾಲಯ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದೊಂದಿಗೆ `ಕಲಾ ವೈಭವ’ ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ. ಇಂದಿನಿಂದ ಆ.9ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೂ ಭೇಟಿ ನೀಡಬಹುದಾಗಿದೆ. ಸಣ್ಣ ಕೈಗಾರಿಕೆಗಳು, ಸ್ವಸಹಾಯ…
ತಮಿಳ್ನಾಡಿಗೆ ನಿಗದಿಗಿಂತ 80 ಟಿಎಂಸಿ ಅಧಿಕ ನೀರು
August 10, 2018ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದರೂ, ತಮಿಳುನಾಡಿಗೆ ರಾಜ್ಯದಿಂದ ನಿಗದಿ ಪಡಿಸಿದ್ದಕ್ಕಿಂತ 80 ಟಿಎಂಸಿ ಹೆಚ್ಚು ನೀರು ಹರಿದಿದೆ. ಪ್ರಾಧಿಕಾರದ ಆದೇಶದಂತೆ ಜೂನ್‍ನಿಂದ ನವೆಂಬರ್ ಅಂತ್ಯದವರೆಗೂ 156 ಟಿಎಂಸಿ ನೀರು ತಮಿಳುನಾಡಿಗೆ ನಮ್ಮ ಜಲಾನಯನ ಭಾಗದಿಂದ ಹರಿಸಬೇಕು. ಆದರೆ ಇಂದಿಗೆ ಆ ಪ್ರಮಾಣ ಪೂರ್ಣಗೊಂಡಿದೆ. ನಾವು ಆಗಸ್ಟ್ ಅಂತ್ಯಕ್ಕೆ ನೀಡಬೇಕಾಗಿ ದ್ದಕ್ಕಿಂತ ಹೆಚ್ಚುವರಿಯಾಗಿ 80 ಟಿಎಂಸಿಯಷ್ಟು ನೀರು ಹರಿದಿದೆ. ಈಗಾಗಲೇ ಉಭಯ ರಾಜ್ಯಗಳ ಜಲಾನಯನ ಭಾಗದಲ್ಲಿ ಬರುವ ಕೆಆರ್‌ಎಸ್,…
ಆ.31 ಮೈಸೂರು ಮಹಾನಗರ ಪಾಲಿಕೆ ಚುನಾವಣೆ
August 10, 2018ಅದರಂತೆ ಆಗಸ್ಟ್ 13ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 20 ನಾಮಪತ್ರ ಸಲ್ಲಿಸಲು ಕಡೇ ದಿನವಾಗಿರುತ್ತದೆ. ಆಗಸ್ಟ್ 21 ನಾಮಪತ್ರಗಳ ಪರಿಶೀಲನೆ, 23ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೇ ದಿನವಾಗಿರುತ್ತದೆ. ಆಗಸ್ಟ್ 31ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದಲ್ಲಿ ಸೆ.2ರಂದು ಮರು ಮತದಾನವಾಗಬೇಕಿದೆ. ಸೆಪ್ಟೆಂಬರ್ 3ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಮಹಾನಗರಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಸೆಪ್ಟೆಂಬರ್…
ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ
August 10, 2018ಬೆಂಗಳೂರು: ಸಹಕಾರಿ ಬ್ಯಾಂಕಿನ 10-7-2018ರವರೆ ಗಿನ ರೈತರ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಇಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು, ಒಟ್ಟು 10,734 ಕೋಟಿ ಸಾಲದಲ್ಲಿ 9448 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಇದರಿಂದ ಸಹಕಾರಿ ಸಂಘಗಳ ಸದಸ್ಯರಾಗಿ ರುವ 22 ಲಕ್ಷ ರೈತರಲ್ಲಿ 20.38 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಸಾಲ…
‘ಮುಕ್ತ ವಿವಿಗೆ ಮುಕ್ತಿ’ 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ
August 10, 2018ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯಕ್ಕೆ ಕವಿದಿದ್ದ ಕಾರ್ಮೋಡ ಸರಿದಿದ್ದು, ಒಟ್ಟು 17 ಕೋರ್ಸ್‍ಗಳಿಗೆ ಯುಜಿಸಿ ಮಾನ್ಯತೆ ದೊರೆತಿದೆ. ಬ್ಯಾಚುಲರ್ ಆಫ್ ಆಟ್ರ್ಸ್ (ಬಿಎ), ಬ್ಯಾಚುಲರ್ ಆಫ್ ಕಾಮರ್ಸ್ (ಬಿ.ಕಾಂ), ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ(ಬಿ.ಲಿಬ್), ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಅರ್ಥಶಾಸ್ತ್ರ, ಇಂಗ್ಲಿಷ್, ಹಿಂದಿ, ಇತಿಹಾಸ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಕನ್ನಡ, ರಾಜ್ಯಶಾಸ್ತ್ರ, ಸಾರ್ವ ಜನಿಕ ಆಡಳಿತ, ಸಮಾಜಶಾಸ್ತ್ರ, ಉರ್ದು, ವಾಣಿಜ್ಯ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಹಾಗೂ ಪರಿಸರ ವಿಜ್ಞಾನ…










