ಮೈಸೂರು: ಮೈಸೂರಿನ ಲೈಫ್ ಈಸ್ ಕಾಲಿಂಗ್ ಸಂಸ್ಥೆಯು ಓಟದ ಉತ್ಸವದ ಅಂಗವಾಗಿ ಸೆ.9ರಂದು ಮೈಸೂರಿನಲ್ಲಿ ಸೆಲಬ್ರೆಷನ್ ಮೈಸೂರು ಹಾಫ್ ಮ್ಯಾರಥಾನ ಮತ್ತು 10ಕೆ ಕಾರ್ಯಕ್ರಮ ಆಯೋಜಿಸಿದೆ.
ಅಂದು ಬೆಳಿಗ್ಗೆ 5.45 ಗಂಟೆಗೆ ಮೈಸೂರು ಅರಮನೆ ಬಲರಾಮ ದ್ವಾರದ ಬಳಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಗುವುದು. 30ಕೆ, ಹಾಫ್ ಮ್ಯಾರಥಾನ್, 16 ವರ್ಷ ಮತ್ತು ಮೇಲ್ಪ ಟ್ಟವರಿಗೆ 10 ಕಿ.ಮೀ. ಓಟ ಹಾಗೂ 10 ವರ್ಷ ಮತ್ತು ಮೇಲ್ಪಟ್ಟವರಿಗೆ ಕೋಟಕ್ ಮಹೀಂದ್ರ ಬ್ಯಾಂಕ್‍ನ 6 ಕಿ.ಮೀ. ಓಟ/ನಡಿಗೆ ವಿಭಾಗಗಳಿವೆ. 30ಕೆ ಹಾಫ್ ಮ್ಯಾರಥಾನ್ ಮತ್ತು 10 ಕಿ.ಮೀ ಓಟಗಳು ಸ್ಪರ್ಧಾತ್ಮಕವಾಗಿರುತ್ತವೆ. ದೇಶದ ಹಲ ವಾರು ಪಟ್ಟಣ/ನಗರಗಳಿಂದ ಸ್ಪರ್ಧಿಗಳು ಆಗಮಿ ಸುವ ನಿರೀಕ್ಷೆಯಿದೆ ಎಂದು ಲೈಫ್ ಈಸ್ ಕಾಲಿಂಗ್ ಕ್ರೀಡಾ ನಿರ್ವಹಣೆ ಸಂಸ್ಥೆಯ ನಿರ್ದೇಶಕ ಪಿ.ಬಿ. ಮಿತ್ರ ಶುಕ್ರವಾರ ಖಾಸಗಿ ಹೊಟೇಲ್‍ನಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಕೋಟಕ್ ಮಹೀಂದ್ರ ಬ್ಯಾಂಕ್ 6 ಕಿ.ಮೀ. ಉತ್ಸವ ಓಟ/ನಡಿಗೆಯು ಸ್ಪರ್ಧಾತ್ಮಕವಲ್ಲ. ಅದನ್ನು ಮೈಸೂರು ನಗರದ ಸಹಸ್ರಾರು ಸಹ ಭಾಗಿಗಳಲ್ಲಿ ಕ್ಷಮತೆ ಮತ್ತು ಆರೋಗ್ಯಕರ ಜೀವನ ಕ್ರಮವನ್ನು ಉತ್ತೇಜಿಸುವುದಕ್ಕಾಗಿ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನೀರೀಕ್ಷೆ ಇದೆ. ಸ್ಪರ್ಧಿ ಗಳಿಗೆ ಟೀಶರ್ಟ್, ಪಿನಿಷರ್ ಮೆಡಲ್, ಬೆಳಗಿನ ಉಪಹಾರ ನೀಡಲಾಗುತ್ತದೆ. ಕೋಟಕ್ 6ಕೆ ಓಟ/ನಡಿಗೆಯಲ್ಲಿ ಪಾಲ್ಗೊಳ್ಳುವವರಿಗೆ ಭಾಗವಹಿ ಸುವಿಕೆ ಪ್ರಮಾಣ ಪತ್ರ ನೀಡಲಾಗುತ್ತದೆ. 30ಕೆ ಮುಕ್ತ ವಿಭಾಗ, ಹಾಫ್ ಮ್ಯಾರಥಾನ್ ಮತ್ತು 10 ಕಿ.ಮೀ (ಮುಕ್ತ, ಹಿರಿಯ, ನುರಿತ) ವಿಭಾಗಗಳಲ್ಲಿ ಭಾಗವಹಿಸುವ ಪುರುಷ ಮತ್ತು ಮಹಿಳೆಯರಲ್ಲಿ ಅಗ್ರ ಸ್ಥಾನದ ಮೂವರಿಗೆ ಪಾರಿತೋಷಕ ನೀಡ ಲಾಗುತ್ತದೆ. ಓಟ ಪೂರೈಸಿದ ಎಲ್ಲರೂ ಲೈಫ್ ಈಸ್ ಕಾಲಿಂಗ್ ಅಂತರ್ಜಾಲದಿಂದ ತಮ್ಮ ತರಬೇತಿ ಪ್ರಮಾಣ ಪತ್ರ ಡೌನ್‍ಲೋಡ್ ಮಾಡಿಕೊಳ್ಳ ಬಹುದು ಎಂದು ವಿವರಿಸಿದರು.
ಸ್ಪರ್ಧೆಗಳಿಗೆ ಪ್ರವೇಶ ಶುಲ್ಕ 6 ಕಿ.ಮೀ.ಗೆ ರೂ. 300, 10 ಕಿ.ಮೀ.ಗೆ ರೂ.850, ಹಾಫ್ ಮ್ಯಾರ ಥಾನ್‍ಗೆ 950 ಹಾಗೂ 30ಕೆಗೆ ರೂ.1200 ನಿಗದಿ ಪಡಿಸಲಾಗಿದೆ. ಭಾಗವಹಿಸಲಿಚ್ಛಿಸುವವರು www. eventzalley.com ಇಲ್ಲಿ ಲಾಗಿನ್ ಆಗ ಬಹುದು ಅಥವಾ ಮೊ- 9980744332 ಸಂಖ್ಯೆ ಯನ್ನು ಸಂಪರ್ಕಿಸಬಹುದು. ಗುಂಪು ನೋಂದಣಿ ಹಾಗೂ ಕಾರ್ಪೊರೇಟ್ ರಿಯಾಯಿತಿಗೆ ಇ ಮೇಲ್- [email protected] ಸಂಪರ್ಕಿಸಬಹುದು ಎಂದರು.
ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ಮೈಸೂರು ನಗರ ಪೊಲೀಸ್, ಯಂಗ್ ಇಂಡಿ ಯನ್ಸ್ ಮೈಸೂರು ಛಾಪ್ಟರ್, ಸ್ಟಾರ್ ಆಫ್ ಮೈಸೂರ್, ಥಾಟ್ ಫೋಕಸ್ ಟೆಕ್ನಾಲಜೀಸ್, ರಾಜ್ಯ ಪ್ರವಾ ಸೋದ್ಯಮ ಅಭಿವೃದ್ಧಿ ನಿಗಮ, ಅಪೋಲೋ ಆಸ್ಪತ್ರೆ, ಕೋಟಕ್ ಮಹೀಂದ್ರ ಬ್ಯಾಂಕ್, ಪಾಠಕ್ ಡೆವಲಪರ್ಸ್, ಚಿರಾಗ್ ಆಡ್ಸ್, ಭಾರತ್ ಇಂಟರ್ ನ್ಯಾಷನಲ್ ಟ್ರಾವೆಲ್ಸ್, 3ಡಿ ಫ್ರೆಷ್ ಫುಡ್ಸ್, ಇವೆಂಟ್ಸ್ ಜೆಲ್ಲಿ, ಲೋಮೋ ರನ್‍ಕ್ಲಬ್, ಡೆಕಥ್ಲಾನ್ ಇನ್ನಿತರ ಸಂಸ್ಥೆಗಳು ಸಹಯೋಗ ನೀಡಿವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೆಲಬ್ರೇಷನ್ ಮೈಸೂರು ಹಾಫ್ ಮ್ಯಾರಥಾನ್‍ನ ಟೀಶರ್ಟ್ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿ ಗೋಷ್ಠಿಯಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್‍ನ ರೀಜನಲ್ ಬ್ಯುಸಿನೆಸ್ ಮ್ಯಾನೇಜರ್ ಪ್ರಭಾಂ ಜನ್, ಥಾಟ್ ಫೋಕಸ್ ಟೆಕ್ನಾಲಜೀಸ್ ಸಂಸ್ಥಾ ಪಕ ಕೆ.ಶೈಲೇಶ್, ಅಪೋಲೊ ಆಸ್ಪತ್ರೆಯ ಮಾರು ಕಟ್ಟೆ ವ್ಯವಸ್ಥಾಪಕ ದಕ್ಷ್ ಬೆಟ್‍ಸೂರ್‍ಮಠ್, ಯಂಗ್ ಇಂಡಿಯನ್ಸ್ ಮೈಸೂರು ಛಾಪ್ಟರ್ ಛೇರ್ಮನ್ ರವಿಶಂಕರ್ ಉಪಸ್ಥಿತರಿದ್ದರು.