ಮೈಸೂರು: ಅಲ್ಜಮೈರ್ಸ್ ಕಾಯಿಲೆಗೆ ಸಂಬಂಧಿಸಿದಂತೆ ಜನರಿಗೆ ಜಾಗೃತಿ ಮೂಡಿಸಲು ಮೈಸೂರಿನ ನಜರ್‍ಬಾದ್‍ನಲ್ಲಿರುವ ಫೋರಂ ಸೆಂಟರ್ ಸಿಟಿ ಮಾಲ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪರ್ಪಲ್ ರನ್ ಹಾಫ್ ಮ್ಯಾರಥಾನ್‍ನಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಕರ್ನಾಟಕ ಪೊಲೀಸ್ ಅಕಾಡೆಮಿ ಬಳಿಯಿ ರುವ ಫೋರಂ ಮಾಲ್ ಬಳಿ ಇಂದು ಮುಂಜಾನೆ ಆಯೋಜಿಸಿದ್ದ ಆಫ್ ಮ್ಯಾರಥಾನ್ ಅನ್ನು ಅಲ್ಜಮೈರ್ಸ್ ಅಂಡ್ ರಿಲೇಟೆಡ್ ಡಿಸ್-ಆರ್ಡರ್ಸ್ ಸೊಸೈಟಿ ಅಧ್ಯಕ್ಷ ಡಾ. ಹನುಮಂತಾಚಾರ್ ಜೋಷಿ ಅವರು ಪರ್ಪಲ್ ರನ್ ಮ್ಯಾರಥಾನ್‍ಗೆ ಚಾಲನೆ ನೀಡಿದರು.
ವಿವಿಧ ವಯೋಮಾನದವರು ಪರ್ಪಲ್ ಕಲರ್ ಟೀ-ಶರ್ಟ್ ತೊಟ್ಟು ಓಟದಲ್ಲಿ ಪಾಲ್ಗೊಳ್ಳುವ ಮೂಲಕ ಅಲ್ಜಮೈರ್ಸ್ ಕಾಯಿಲೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.
ಪರ್ಪಲ್ ಹಾಫ್ ಮ್ಯಾರಥಾನ್ 4 ವಿಭಾಗಗಳಲ್ಲಿ ನಡೆಯಿತು. 3 ಕಿ.ಮೀ. ಕುಟುಂಬ ಓಟ, 5 ಕಿ.ಮೀ., 10 ಕಿ.ಮೀ. ಹಾಗೂ 21 ಕಿ.ಮೀ. ವಿಸ್ತೀರ್ಣ ಓಟದಲ್ಲಿ ಪ್ರತ್ಯೇಕವಾಗಿ ಪಾಲ್ಗೊಂಡು ಗಮನ ಸೆಳೆದರು. ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಪಟುಗಳು ಆಗಮಿಸಿ ಪರ್ಪಲ್ ರನ್ ಆಫ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದರು. ಆಫ್ ಮ್ಯಾರಥಾನ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಕೆಲವೆಡೆ ಪರ್ಯಾಯ ಮಾರ್ಗ ಕಲ್ಪಿಸಲಾಗಿತ್ತು. ಮುಂಜಾನೆಯೇ ಪಟುಗಳು ರಸ್ತೆಗಿಳಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಲಿಲ್ಲ. ಆದರೂ ಆಫ್ ಮ್ಯಾರಥಾನ್ ಸಾಗುವ ಮಾರ್ಗದುದ್ದಕ್ಕೂ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು.