ಖ್ಯಾತ ವಿಮರ್ಶಕರಿಂದ ಡಾ.ಎಸ್.ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ದ ಬಗ್ಗೆ ಪ್ರಬಂಧ ಮಂಡನೆ
ಮೈಸೂರು

ಖ್ಯಾತ ವಿಮರ್ಶಕರಿಂದ ಡಾ.ಎಸ್.ಎಲ್.ಭೈರಪ್ಪ ಅವರ ‘ಉತ್ತರ ಕಾಂಡ’ದ ಬಗ್ಗೆ ಪ್ರಬಂಧ ಮಂಡನೆ

October 1, 2018

ಮೈಸೂರು: ರಾಮಾಯಣ ಆಧ ರಿಸಿ ಪ್ರಸಿದ್ಧ ಕಾದಂಬರಿಕಾರರಾದ ಸರಸ್ವತಿ ಸಮ್ಮಾನಿತ ಡಾ.ಎಸ್.ಎಲ್.ಭೈರಪ್ಪ ಅವರು ರಚಿಸಿರುವ ‘ಉತ್ತರ ಕಾಂಡ’ ಕಾದಂಬರಿ ಕುರಿತಂತೆ ಖ್ಯಾತ ವಿಮರ್ಶಕರು ಇಂದು ಮೈಸೂರಿನಲ್ಲಿ ಪ್ರಬಂಧ ಮಂಡಿಸಿದರು.

ಶ್ರೀರಂಗಪಟ್ಟಣದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ವತಿಯಿಂದ ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿ ರುವ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ಏರ್ಪಡಿಸಿದ್ದ ಡಾ.ಎಸ್.ಎಲ್. ಭೈರಪ್ಪನವರ ‘ಉತ್ತರ ಕಾಂಡ’ ಕಾದಂಬರಿ ಕುರಿತ ವಿಚಾರ ಸಂಕಿರಣದಲ್ಲಿ ಖ್ಯಾತ ವಿಮರ್ಶಕರಾದ ಬೆಂಗಳೂರಿನ ಸಹನ ವಿಜಯಕುಮಾರ್, ಮಂಗಳೂರಿನ ಡಾ.ಅಜಕ್ಕಳ ಗಿರೀಶ್ ಭಟ್, ಮೈಸೂರಿನ ಆಶಾ ರಘು ಹಾಗೂ ಶ್ರೀರಂಗಪಟ್ಟಣದ ವಿದ್ವಾನ್ ಹ.ನಾ.ಭಟ್ ಅವರು ಪಾಲ್ಗೊಂಡು ಪ್ರಬಂಧ ಮಂಡಿಸಿದರು.

ಸರಸ್ವತಿ ಸಮ್ಮಾನ್ ಪುರಸ್ಕøತ ಖ್ಯಾತ ಕಾದಂಬರಿ ಕಾರ ಡಾ.ಎಸ್.ಎಲ್.ಭೈರಪ್ಪ ಅವರು ಉಪಸ್ಥಿತರಿದ್ದ ವಿಚಾರ ಸಂಕಿರಣವನ್ನು ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷರಾದ ಪ್ರಸಿದ್ಧ ವಿದ್ವಾಂಸ ಡಾ. ಪ್ರಧಾನ ಗುರುದತ್ ಅವರು ಉದ್ಘಾಟಿಸಿದರು.

ನಂತರ ‘ಉತ್ತರ ಕಾಂಡ’ ಕಾದಂಬರಿ ಕುರಿತು ಮಾತ ನಾಡಿದ ಅವರು, ಡಾ.ಎಸ್.ಎಲ್.ಭೈರಪ್ಪ ಅವರು ಕಾದಂಬರಿ ಬರೆದು ಲೋಕಾರ್ಪಣೆ ಮಾಡಿದ ಪ್ರತೀ ಸಂದರ್ಭದಲ್ಲೂ ಸಮಾಜದಲ್ಲಿ ಅವುಗಳ ಮೇಲೆ ಚರ್ಚೆ, ವಿಚಾರ ಸಂಕಿರಣಗಳು ನಡೆಯುತ್ತವೆ ಹಾಗೂ ಮಾಧ್ಯ ಮದ ಮೂಲಕ ಭಾರೀ ಸುದ್ದಿಯಾಗುತ್ತವೆ ಎಂದರು.

ಅವರ ‘ಯಾನ’ ಕಾದಂಬರಿಯು ಯಾವ ವೈಜ್ಞಾ ನಿಕ ತಜ್ಞರನ್ನೂ ನಿಬ್ಬೆರಗಾಗಿಸುವಂತಹ ವಿಜ್ಞಾನದ ವಿಚಾರವನ್ನೊಳಗೊಂಡಿದೆ. ‘ಉತ್ತರ ಕಾಂಡ’ದಲ್ಲಿ ಡಾ. ಎಸ್.ಎಲ್.ಭೈರಪ್ಪ ಅವರು ರಾಮಾಯಣದ ನೈಜ ಕಥೆಯನ್ನು ತಮ್ಮದೇ ಆದ ಆಲೋಚನೆಯೊಂ ದಿಗೆ ಅರ್ಥಗರ್ಭಿತವಾಗಿ ಚಿತ್ರಿಸಿದ್ದಾರೆ ಎಂದು ಡಾ. ಪ್ರಧಾನ ಗುರುದತ್ ಅವರು ವರ್ಣಿಸಿದರು.

ಸದಾ ಕಾಲ ಕುತೂಹಲ ಸೃಷ್ಟಿಸುವ ಡಾ.ಭೈರಪ್ಪ ಅವರು, ಪ್ರವಾಸಶೀಲ ಕಾದಂಬರಿಕಾರ. ಅವರು ವಿಶ್ವದಲ್ಲಿ ಭೇಟಿ ನೀಡದ ದೇಶಗಳೇ ಇಲ್ಲ. ಪ್ರವಾಸದ ಅನುಭವಗಳನ್ನು ಸಾಹಿತ್ಯ ರೂಪದಲ್ಲಿ ಕಾದಂಬರಿಗಳ ಮೂಲಕ ತಿಳಿಸುವುದು ವಿಶೇಷ ಎಂದೂ ಅವರು ಇದೇ ವೇಳೆ ನುಡಿದರು.

ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳೂ ಸಹ ಡಾ.ಭೈರಪ್ಪ ಅವರ ಕಾದಂಬರಿಗಳಿಂದ ಆಕರ್ಷಿತರಾಗಿದ್ದಾರೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೂ ಸಹ ಆಕರ್ಷಿತರಾಗಿದ್ದಾರೆ ಎಂದ ಡಾ.ಗುರುದತ್ ಅವರು, ಒಮ್ಮೆ ಮಾತನಾಡುತ್ತಿದ್ದಾಗ, ‘ಡಾ.ಎಸ್.ಎಲ್.ಭೈರಪ್ಪನವರು ಆರ್‍ಎಸ್‍ಎಸ್‍ನವರಾ?’ ಎಂದು ಹೆಚ್.ಡಿ.ದೇವೇ ಗೌಡರು ನನ್ನನ್ನು ಕೇಳಿದರು. ಅದಕ್ಕೆ ನಾನು ‘ಅವರು ಆರ್‍ಎಸ್‍ಎಸ್‍ನವರೂ ಅಲ್ಲ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನವರೂ ಅಲ್ಲ. ಎಲ್ಲ ರಿಗೂ ಪ್ರಿಯವಾದ ಸತ್ಯಪ್ರಿಯ ಸಂಘಟನೆಯ ಸದ ಸ್ಯರು’ ಎಂದು ಹೇಳಿದೆ ಎಂದು ತಿಳಿಸಿದರು.

ಕಾದಂಬರಿಯಲ್ಲಿನ ‘ಸೀತೆಯ ಮನೋಮಂಥನ’ ಕುರಿತು ಅಂಕಣಕಾರ್ತಿ, ಲೇಖಕಿ ಸಹನಾ ವಿಜಯ ಕುಮಾರ್, ‘ಭೈರಪ್ಪ ಚಿತ್ರಿತ ರಾಮ’ ವಿಷಯ ಕುರಿತು ಚಿಂತಕ, ವಿಮರ್ಶಕರಾದ ಪ್ರಿಯದರ್ಶನ ಸಾಂಸ್ಕøತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಹ.ನಾ.ಭಟ್ಟ್ ಅವರು ಪ್ರಬಂಧ ಮಂಡಿಸಿದರು.

‘ಭೈರಪ್ಪನವರ ಸೃಷ್ಟಿಶೀಲತೆಯಲ್ಲಿ ಲಕ್ಷ್ಮಣ, ಊರ್ಮಿಳೆ, ತಾರೆ ಮೊದಲಾದವರು’ ಎಂಬುದರ ಕುರಿತಂತೆ ವಿಮ ರ್ಶಕಿ ಆಶಾ ರಘು ಹಾಗೂ ‘ಉತ್ತರ ಕಾಂಡದಲ್ಲಿ ಮನುಷ್ಯ-ನಿಸರ್ಗ ಸಂಬಂಧ’ದ ಬಗ್ಗೆ ಮಂಗಳೂರಿನ ಚಿಂತನ ಬಯಲು ಸಂಪಾದಕರಾದ ಕನ್ನಡ ಪ್ರಾಧ್ಯಾ ಪಕ ಡಾ.ಅಜಕ್ಕಳ ಗಿರೀಶ್ ಭಟ್ ಅವರು ತಮ್ಮದೇ ಆದ ದಾಟಿಯಲ್ಲಿ ವಿಷಯ ಪ್ರಸ್ತುತಪಡಿಸಿದರು.
ನಂತರ ಮಧ್ಯಾಹ್ನ ಪ್ರಬಂಧ ಮಂಡಿಸಿದ ವಿಮರ್ಶಕ ರೊಂದಿಗೆ ಸಭಿಕರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಅಲ್ಲಿಯವರೆಗೂ ಸಭಿಕರ ಆಸನದಲ್ಲಿ ಕುಳಿರು ಆಲಿಸಿದ ಡಾ.ಎಸ್.ಎಲ್.ಭೈರಪ್ಪ ಅವರು, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

Translate »