ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ
ಮೈಸೂರು

ದಸರಾ ಕುಸ್ತಿ ಪಂದ್ಯಾವಳಿ: ಕುಸ್ತಿ ಕಟ್ಟುವ ಕಾರ್ಯಕ್ಕೆ ಚಾಲನೆ

October 1, 2018

ಮೈಸೂರು: ನಶಿಸಿ ಹೋಗುತ್ತಿರುವ ಕುಸ್ತಿ, ಕಬಡ್ಡಿ, ಖೋಖೋ ಸೇರಿದಂತೆ ಗ್ರಾಮೀಣ ಕ್ರೀಡೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಇವುಗಳ ರಕ್ಷಣೆಗೆ ಯುವ ಸಮುದಾಯ ಪಣ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಸಲಹೆ ನೀಡಿದ್ದಾರೆ.

ಮೈಸೂರಿನ ದಸರಾ ವಸ್ತು ಪ್ರದರ್ಶ ನದ ಆವರಣದಲ್ಲಿರುವ ಬಿ.ವಿ. ಕಾರಂತ ರಂಗಮಂದಿರದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿ ಯೇಷನ್ ವತಿಯಿಂದ ಆಯೋಜಿಸ ಲಾಗಿದ್ದ ದಸರಾ ಕುಸ್ತಿ ಪಂದ್ಯಾವಳಿಯ ಕುಸ್ತಿ ಕಟ್ಟುವ ಕಾರ್ಯಕ್ಕೆ ಗಧೆ ತಿರುಗಿಸಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕುಸ್ತಿ ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಒಳಗೊಂಡಂತೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷಕರ ಸಂಗತಿಯಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಪ್ರಚ ಲಿತದಲ್ಲಿದ್ದ ಕುಸ್ತಿ, ಕಬಡ್ಡಿ, ಖೋಖೋ ಕ್ರೀಡೆಗಳು ಆಧುನಿಕತೆಯ ಸೋಗಿನಿಂ ದಾಗಿ ಅವನತಿಯ ಹಾದಿಯತ್ತ ಸಾಗುತ್ತಿ ರುವ ಸಂದರ್ಭದಲ್ಲಿಯೇ ಇದೀಗ ನಗರ ಪ್ರದೇಶಗಳೂ ಸೇರಿದಂತೆ ವಿವಿಧೆಡೆಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಅನುಸರಿಸುವು ದಕ್ಕೆ ಮುಂದಾಗಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಕುಸ್ತಿಯನ್ನು ದೇಶದಲ್ಲಿಯೇ ಉತ್ತರ ಪ್ರದೇಶದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ. ಅದನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕುಸ್ತಿ ಕ್ರೀಡೆಯನ್ನು ಮಾತ್ರ ಕಾಣಬಹು ದಾಗಿದೆ. ಮೈಸೂರು ನಗರ ಕುಸ್ತಿಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನೇಗೌಡ ಕೊಪ್ಪಲಿನ ಪೈಲ್ವಾನ್ ಬಸ ವಯ್ಯ ದಾಖಲೆ ನಿರ್ಮಿಸಿದ್ದಾರೆ. ಮೈಸೂ ರಿನ ಹಲವೆಡೆ ಇರುವ ಗರಡಿ ಮನೆಗಳು ಇಂದಿಗೂ ಕುಸ್ತಿ ಕ್ರೀಡೆಯನ್ನು ಜೀವಂತ ವಾಗಿಸಿವೆ. ರಾಜರ ಕಾಲದಿಂದಲೂ ಕುಸ್ತಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಿರುವುದರಿಂದ ಮೈಸೂರು ಕುಸ್ತಿಗೆ ಹೆಸರುವಾಸಿಯಾಗಿದೆ. ಈ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು.

ಇದೇ ವೇಳೆ ಕುಸ್ತಿಪಟುಗಳಾದ ಕನಕ ಪುರದ ಸ್ವರೂಪ್‍ಗೌಡ, ಬಾಬುರಾಯನ ಕೊಪ್ಪಲಿನ ಕಿರಣ್ ಹಾಗೂ ರೆಹಮಾನ್, ಸುಹಾಶ್ ಜೋಡಿ ಕಟ್ಟಲಾಯಿತು. ಇದೇ ವೇಳೆ ಬಸ್ಕಿ, ದಂಡ, ಸಪೆÇೀರ್ಟ್ ಹಾಗೂ ಕಲ್ಲನ್ನು ಹೆಗಲ ಮೇಲೆ ಹೊತ್ತು ಬಸ್ಕಿ ಹೊಡೆ ಯುವ ಸ್ಪರ್ಧೆಗಳು ನಡೆದವು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಕರ್ನಾಟಕ ಕುಸ್ತಿ ಅಸೋಸಿಯೇಷನ್ ಕಾರ್ಯದರ್ಶಿ ಪೆÇ್ರ.ರಂಗಯ್ಯ, ಕುಸ್ತಿ ಉಪ ವಿಶೇಷಾಧಿಕಾರಿ ಸ್ನೇಹ.ಪಿ.ವಿ, ಕಾರ್ಯಾ ಧ್ಯಕ್ಷ ಅರುಣಾಂಶು ಗಿರಿ, ಕುಸ್ತಿ ಪೈಲ್ವಾನರು ಗಳಾದ ಕೆಂಪೇಗೌಡ, ಗಣೇಶ್, ಅಮೃತ್ ಸೇನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅ.14ರಂದು ಅರಮನೆಯಿಂದ ಬನ್ನಿಮಂಟಪದವರೆಗೆ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆ

ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾದ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಒಳಗೊಂಡಂತೆ ಸ್ಥಳೀ ಯರು ಮುಗಿ ಬೀಳಲಿದ್ದಾರೆ. ಆದರೆ ಅರಮನೆ ಆವರಣದಲ್ಲಿ ಕೇವಲ 29 ಸಾವಿರ ಮಂದಿ ಮಾತ್ರ ಕೂರಲು ಸ್ಥಳಾವಕಾಶ ಇರುತ್ತದೆ. ಎಲ್ಲರಿಗೂ ಜಂಬೂ ಸವಾರಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿರಾಸೆ ಪಟ್ಟುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜಂಬೂಸವಾರಿ ಮಾದರಿಯಂತೆ ಅ.14ರಂದು ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಆನೆಗಳೊಂದಿಗೆ ಪಾಲ್ಗೊಳ್ಳುತ್ತವೆ. ಆದರೆ ಚಿನ್ನದ ಅಂಬಾರಿ ಹಾಗೂ ಸ್ತಬ್ಧಚಿತ್ರಗಳು ಮಾತ್ರ ಈ ಮೆರವಣಿಗೆಯಲ್ಲಿರುವುದಿಲ್ಲ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.

Translate »