ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು
ಮೈಸೂರು

ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಬಿಟ್ಟರೆ ಡಾ. ಭೈರಪ್ಪರ `ಪರ್ವ’ವೇ ಮೇರು

January 31, 2020

ಮೈಸೂರು: ರವೀಂದ್ರನಾಥ್ ಠಾಗೋರರ ಗೀತಾಂ ಜಲಿ ಕೃತಿಯನ್ನು ಹೊರತುಪಡಿಸಿದರೆ, ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂ ಬರಿ 40ನೇ ವರ್ಷಾಚರಣೆ ಆಚರಿಸಿಕೊಳ್ಳು ತ್ತಿದೆ. ಇದರಿಂದ ಸಾಹಿತ್ಯ ಲೋಕಕ್ಕೆ ಭೈರಪ್ಪ ನವರ ಕೊಡುಗೆ ಏನೆಂಬುದು ತಿಳಿಯು ತ್ತದೆ ಎಂದು ಹೆಸರಾಂತ ವಿದ್ವಾಂಸ ಡಾ. ಪ್ರಧಾನ ಗುರುದತ್ ಅಭಿಪ್ರಾಯಪಟ್ಟರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್, ಕನ್ನಡ ಸಾಹಿತ್ಯ ಕಲಾಕೂಟ ಸಂಯು ಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸಾಹಿತ್ಯ ಸಂಜೆ ಸರಸ್ವತಿ ಸಮ್ಮಾನ್ ಪುರ ಸ್ಕøತ ಡಾ.ಎಸ್.ಎಲ್.ಭೈರಪ್ಪರವರ ಕಾದಂ ಬರಿ `ಪರ್ವ-40’ ಅವಲೋಕನ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪರ್ವ 780 ಪುಟಗಳ ಸುದೀರ್ಘ ಕಾದಂ ಬರಿ. ಭಾರತೀಯ ಸಾಹಿತ್ಯದ ಇತಿಹಾಸ ದಲ್ಲೇ 40-50 ವರ್ಷವೆಂದು ಆಚರಿಸಿಕೊಳ್ಳು ವುದು ವಿರಳ. ಆದರೆ, ರವೀಂದ್ರನಾಥ್ ಠಾಗೋರರ `ಗೀತಾಂಜಲಿ’ ಕೃತಿಯು 100ನೇ ವರ್ಷ ಆಚರಿಸಿಕೊಂಡಿದ್ದು ಹೊರತುಪಡಿಸಿ ದರೆ, ಭೈರಪ್ಪರವರ ಪರ್ವ 40ನೇ ವರ್ಷಾ ಚರಣೆ ಆಚರಿಸಿಕೊಳ್ಳುತ್ತಿದೆ. ಇದರಿಂದ ಸಾಹಿತ್ಯ ಲೋಕಕ್ಕೆ ಭೈರಪ್ಪನವರ ಕೊಡುಗೆ ಏನೆಂ ಬುದು ತಿಳಿಯುತ್ತದೆ ಎಂದು ಹೇಳಿದರು.

ನಾನು ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ದಾಗ ಸಾಹಿತಿ ಎಂ.ಟಿ.ವಾಸುದೇವ ನಾಯರ್ ಎಂಬುವರನ್ನು ಭೇಟಿ ಮಾಡಿದ್ದೆ. ಈ ವೇಳೆ ನೀವು ಬರೆದ ಮಹಾಭಾರತಕ್ಕೂ ಭೈರಪ್ಪ ರವರ ಮಹಾಭಾರತಕ್ಕೂ ಇರುವ ವ್ಯಾತ್ಯಾಸ ವೇನೆಂದು ಕೇಳಿದೆ. ಆಗ ಅವರು, ಭೈರಪ್ಪ ನಮ್ಮನ್ನೆಲ್ಲಾ ಕೊಂದು ಹಾಕಿದರು. ಅವರ ಕೃತಿಯ ಮುಂದೆ ನಮ್ಮ ಯಾವ ಕೃತಿ ಗಳಿಗೆ ಸ್ಥಾನ ಸಿಗಲ್ಲ ಎಂಬುದನ್ನು ಒಪ್ಪಿ ಕೊಂಡರು ಎಂದು ಹೇಳಿದರು.

ಒಂದು ಬರಹವನ್ನು ಬೇರೆ, ಬೇರೆ ಭಾಷೆಯ ಬರಹಗಾರರು, ಓದುಗರು ಒಪ್ಪಿ ಕೊಳ್ಳುವುದು ತೀರಾ ಕಡಿಮೆ. ಆದರೆ ಅದು, ಭೈರಪ್ಪನವರ ವಿಷಯದಲ್ಲಿ ತದ್ವಿರುದ್ಧ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭೈರಪ್ಪ ಅವರು ರಾಷ್ಟ್ರಮಟ್ಟದ ಸಾಹಿತಿ ಮತ್ತು ಪ್ರಾಧ್ಯಾಪಕರು ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಪರ್ವ ಕಾದಂಬರಿಯು ವರ್ತಮಾನಕ್ಕೆ ಮಹಾ ಭಾರತದ ಮರುಸೃಷ್ಟಿಯಾಗಿದೆ. ಪಂಪ, ರನ್ನ, ಜನ್ನ ಮತ್ತಿತರರು ಮಹಾಭಾರತವನ್ನು ತಮ್ಮದೇ ದೃಷ್ಟಿಕೋನದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರತಿ ಭಾರಿ ಮಹಾಭಾರತ ಸೃಷ್ಟಿಯಾದಾಗಲೂ ಓದುಗ ರಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು. ಆದರೆ, ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂ ಬರಿಯು ವೈಚಾರಿಕ, ವೈಜ್ಞಾನಿಕ ನೆಲೆಗಟ್ಟಿ ನಲ್ಲಿ ವಿಶ್ಲೇಷಣೆ ನೀಡುವ ಮೂಲಕ ಓದು ಗರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವ ಪ್ರಯತ್ನವಾಗಿದೆ ಎಂದು ಹೇಳಿದರು.

ಪರ್ವ ಕಾದಂಬರಿಯು ಓದುಗರನ್ನು ಕಾಡಿಸುತ್ತದೆ. ಗೃಹಭಂಗ, ಅನ್ವೇಷಣೆ, ಪರ್ವ, ಸಾಕ್ಷಿ ಅನೇಕ ಕೃತಿಗಳು ಸರ್ವ ಶ್ರೇಷ್ಠ ಕೃತಿ ಗಳಾಗಿವೆ. ಜಾಗತಿಕ ಬರಹಗಾರರ ಸಾಲಿನಲ್ಲಿ ನಿಲ್ಲುವಂತಹ ಸಾಮಥ್ರ್ಯ ಭೈರಪ್ಪ ಅವರ ದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರ ಶೇಖರ್, ಕಸಾಪ ಗೌ.ಕಾರ್ಯದರ್ಶಿ ಗಳಾದ ಡಾ.ಜಯಪ್ಪ ಹೊನ್ನಾಳಿ, ಕೆ.ಎಸ್. ನಾಗರಾಜ್, ಗೌರವ ಕೋಶಾಧ್ಯಕ್ಷ ರಾಜ ಶೇಖರ ಕದಂಬ, ಸಂಚಾಲಕ ಮೂಗೂರು ನಂಜುಂಡಸ್ವಾಮಿ ಉಪಸ್ಥಿತರಿದ್ದರು.

Translate »