ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತಿವೆ
ಮೈಸೂರು

ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಚಳವಳಿ ಸಾಹಿತ್ಯ ಹುಟ್ಟುತ್ತಿವೆ

January 21, 2019

ಮೈಸೂರು: ಚಳವಳಿ ಸಾಹಿತ್ಯದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎನ್ನುವುದರಲ್ಲಿ ನನಗೆ ನಂಬಿಕೆ ಇಲ್ಲವಾಗಿದ್ದು, ರಾಜಕೀಯ ಉದ್ದೇಶಗಳಿಗೆ ಪೂರಕವಾಗಿ ಈ ಚಳವಳಿ ಸಾಹಿತ್ಯ ಹುಟ್ಟುತ್ತಿವೆ. ದೇಶದ ತುಂಬೆಲ್ಲಾ ಇಂದು ಚಳವಳಿ ಸಾಹಿತ್ಯ ಎಂಬ ಸಿದ್ಧಾಂತವೇ ಸಾಹಿತ್ಯ ವಲಯವನ್ನು ಆಕ್ರಮಿಸಿಕೊಂಡಿದೆ ಎಂದು ಸರಸ್ವತಿ ಸಮ್ಮಾನ್ ಪುರಸ್ಕೃತ ಹಿರಿಯ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ವಿಷಾದಿಸಿದರು.

ಮೈಸೂರಿನ ಕಲಾಮಂದಿರಲ್ಲಿ ಎಸ್. ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಎರಡು ದಿನಗಳ ಡಾ.ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನು ವಾರ ಸಮಾರೋಪ ಭಾಷಣ ಮಾಡಿದ ಅವರು, ನನಗೆ ನಂಬಿಕೆ ಇರುವುದು ಶುದ್ಧ ಸಾಹಿತ್ಯದಲ್ಲಿ ಮಾತ್ರ. ಸ್ಲೋಗನ್ ಸಾಹಿ ತ್ಯದ (ಘೋಷಣಾ ಸಾಹಿತ್ಯ/ಚಳವಳಿ ಸಾಹಿತ್ಯ) ಗದ್ದಲದ ನಡುವೆ ಶುದ್ಧ ಸಾಹಿತ್ಯದ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ ಎಂದು ಹೇಳಿದರು.

ರಾಜಕೀಯದೊಳಗೆ ಯಾವ್ಯಾವ ರೀತಿ ಯಲ್ಲಿ ಚಳವಳಿ ಇದೆಯೋ ಹಾಗೂ ರಾಜಕೀಯ-ಸಾಮಾಜಿಕ ಹಿನ್ನೆಲೆಯ ಅನುಗುಣ ವಾಗಿ ಚಳವಳಿ ಸಾಹಿತ್ಯ ಸೃಷ್ಟಿಯಾಗುತ್ತಿವೆ. ನಾನು ಬರವಣಿಗೆ ಶುರು ಮಾಡಿದ ಕಾಲಕ್ಕೆ ನವ್ಯರ ಸಾಹಿತ್ಯ ಚಳವಳಿ ಪ್ರಾರಂಭಗೊಂ ಡಿತ್ತು. ಇವರಿಗೆ ಸೃಜನಶೀಲ ಸಾಹಿತಿಯು ವಿಮರ್ಶಕನೂ ಆಗಿರಬೇಕು. ತಮ್ಮ ಕೃತಿ ಹೊರತರುವ ಮೊದಲು ಸುದ್ದಿ ಪತ್ರಿಕೆ ಗಳಲ್ಲಿ ಕೃತಿ ಕುರಿತು ವಿಮರ್ಶೆಯೊಂದನ್ನು ತೇಲಿ ಬಿಡುತ್ತಿದ್ದರು. ಅವರಿಗೆ ಬೆಳೆಯುವ ಮತ್ತೊಬ್ಬರನ್ನು ಮಟ್ಟ ಹಾಕಿ ತಮ್ಮನು ಮೇಲೆತ್ತಿಕೊಳ್ಳುವ ತಂತ್ರಗಾರಿಕೆಯೂ ಗೊತ್ತಿ ರುತ್ತಿತ್ತು. ಇವರು ಬರೆಯುವುದಕ್ಕಿಂತ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವಲ್ಲಿ ನಿಪುಣತೆ ಪ್ರದರ್ಶಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಾಹಿತ್ಯ ಕ್ಷೇತ್ರ ಬೆಳೆಯಲು ಸಾಧ್ಯವಿಲ್ಲ ಎಂದರು.

ನವ್ಯರ ಬಳಿಕ ಪ್ರಗತಿಪರ ಸಾಹಿತ್ಯ ಚಳವಳಿ ಆರಂಭವಾಯಿತು. ಇದರ ಜೊತೆಗೆ ಬಂಡಾಯ, ದಲಿತ, ಸ್ತ್ರೀವಾದ ಸಾಹಿತ್ಯ ಚಳವಳಿಗಳು ಚಾಲನೆ ಪಡೆದುಕೊಂಡವು. ಈ ಎಲ್ಲವುಗಳೂ ತಮ್ಮ ಅಣತಿಯಂತೆ ಬರೆಯಬೇಕು ಎಂಬುದಕ್ಕಾಗಿಯೇ ಹೋರಾಟ ಮಾಡುತ್ತಿದ್ದವು. ರಾಜ್ಯದಲ್ಲಿ ಹುಟ್ಟಿ ಕೊಂಡಷ್ಟು ಸಾಹಿತ್ಯ ಚಳವಳಿಗಳು ದೇಶದ ಬೇರ್ಯಾವ ರಾಜ್ಯದಲ್ಲೂ ಹುಟ್ಟಿಕೊಂಡಿರಲಿಕ್ಕಿಲ್ಲ. ಸಮಾಜದಲ್ಲಿನ ಅನ್ಯಾಯ ತೊಡೆಯಲು ಸಾಹಿತ್ಯ ಬರೆಯಬೇಕು ಹಾಗೂ ಓದಬೇಕು ಎನ್ನುವ ಚಳವಳಿ ಸಾಹಿತ್ಯಗಳ ಪ್ರತಿಪಾದನೆ ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಅನ್ಯಾಯವನ್ನು ಅನುಭವಿಸುತ್ತಲೇ ಇರುವಾಗ ಅದಕ್ಕೆ ಸಾಹಿತ್ಯ ಏಕೆ ಓದ ಬೇಕು? ಎಂದು ಮರುಪ್ರಶ್ನೆಯಿತ್ತ ಅವರು, ಕಾದಂಬರಿ ಓದುವವರು ವಿದ್ಯಾವಂತರು. ಇವರಿಗೆ ಎಲ್ಲಾ ಸಮಸ್ಯೆಗಳ ಬಗ್ಗೆ ಅರಿ ವಿದ್ದು, ಅವುಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂಬುದೂ ಗೊತ್ತಿದೆ. ಏಕೆಂ ದರೆ ವಿದ್ಯಾವಂತರ್ಯಾರು ಓಟ್ ಮಾಡು ದಿಲ್ಲವಲ್ಲ ಎಂದು ಕುಟುಕಿದರು.

ಒಬ್ಬ ಸೃಜನಶೀಲ ಲೇಖಕ ಇಂತಹ ಚಳ ವಳಿ ಸಾಹಿತ್ಯದಿಂದ ದೂರ ಇರಬೇಕಾದದು ಬಹಳ ಮುಖ್ಯ. ನಾನು ದೂರ ಉಳಿದಿದ್ದ ರಿಂದಲೇ ಹೆಚ್ಚು ಬರೆಯಲು ಸಾಧ್ಯವಾಯಿತು. ಇಲ್ಲವಾಗಿದ್ದರೆ ಎಲ್ಲದಕ್ಕೂ ಪ್ರತಿಕ್ರಿಯೆ ನೀಡುತ್ತಾ ಕಾಲಹರಣವಾಗುತ್ತಿತ್ತು. ನಿಜವಾದ ಶುದ್ಧ ಸಾಹಿತ್ಯದ ಮೂಲ ಲಕ್ಷಣ ಎಂದರೆ ಅದರಲ್ಲಿ ರಸ, ಧ್ವನಿ ಹಾಗೂ ಔಚಿತ್ಯ ವಿರಬೇಕು. ಈ ಮೂರು ಒಂದಕ್ಕೊಂದು ಸಂಬಂಧ ಹೊಂದಿದ್ದು, ಧ್ವನಿ ಮತ್ತು ಔಚಿತ್ಯ ಸೇರಿ ರಸ ಸೃಷ್ಟಿಯಾಗುತ್ತದೆ ಎಂದು ನುಡಿದರು.

ಮೈನೆರೆವ ಬಗ್ಗೆ 8ರ ಪ್ರಾಯದಲ್ಲೇ ಅರಿವಿತ್ತು: ದಾಟು’ ಕಾದಂಬರಿ ಅರ್ಥ ಮಾಡಿ ಕೊಳ್ಳಲು ಜಾತಿ ವ್ಯವಸ್ಥೆಯ ಬಗ್ಗೆ ಅರಿವಿರ ಬೇಕು. ಅದೇ ರೀತಿ ನಮ್ಮ ಮೌಲ್ಯಗಳ ಬಗ್ಗೆ ತಿಳುವಳಿಕೆ ಇಲ್ಲದಿದ್ದರೆಸಾಕ್ಷಿ’ ಕಾದಂಬರಿ ಅರ್ಥವಾಗದು. ಯಾವುದೇ ಸಾಹಿತ್ಯವನ್ನು ಅರ್ಥೈಸಿಕೊಳ್ಳದೇ

ವಿಮರ್ಶೆಗೆ ಕೈ ಹಾಕಬಾರದು. ಆದರೆ ಪ್ರಸ್ತುತ ದಿನಗಳಲ್ಲಿ ಭಾರತೀಯ ಸಾಹಿತ್ಯದ ಬಗ್ಗೆ ಅರ್ಥೈಸಿಕೊಳ್ಳದೇ ಸಾಹಿತ್ಯ ವಿಮರ್ಶೆ’ ಮಾಡುವ ಸನ್ನಿವೇಶವಿದೆ.ದಾಟು’ ಭಾರತದ ಜಾತಿ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತದೆ. ಇಲ್ಲಿ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಗಳು ತೆರೆದುಕೊಳ್ಳಲಿವೆ. ಇದೇ ಕಾರಣಕ್ಕೆ ಈ ಕಾದಂಬರಿಯಲ್ಲಿ ಗಟ್ಟಿತನ ಕಾಣಬಹುದು ಎಂದರು.

ನಾನು ನಮ್ಮ ಹಳ್ಳಿಯೊಳಗೆ ಚಿಕ್ಕವನಿದ್ದಾಗ ಎಲ್ಲಾ ಕೇರಿಗಳಲ್ಲಿ ಅಡ್ಡಾಡಿದ್ದೆ. ಹೀಗಾಗಿ ವಿವಿಧ ಸಮುದಾಯಗಳ ಶಾಸ್ತ್ರ, ನಂಬಿಕೆ ಹಾಗೂ ಪದ್ಧತಿಗಳ ಬಗ್ಗೆ ಅರಿತು ಕೊಂಡಿದ್ದೆ. ಯಾವುದೇ ಮನೆ ಎದುರು ಹಸಿರು ಚಪ್ಪರ ಹಾಕಿದ್ದರೆ ಆ ಮನೆಯಲ್ಲಿ ಒಬ್ಬ ಹೆಣ್ಣು ಮಗಳು ಮೈನೆರೆದಿದ್ದಾಳೆ ಎಂಬುದನ್ನು ನಾನು ನನ್ನ 8 ವರ್ಷದ ಪ್ರಾಯದಲ್ಲಿ ಅರಿತು ಕೊಳ್ಳುತ್ತಿದ್ದೆ. ಉತ್ತರ ಭಾರತದಲ್ಲೂ ಪ್ರವಾಸ ಕೈಗೊಂಡು ಅಲ್ಲಿನ ಗ್ರಾಮಗಳ ಆಚಾರ- ವಿಚಾರಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ಸಮಾಜಶಾಸ್ತ್ರವನ್ನು ಆಳವಾಗಿ ಅಧ್ಯ ಯನ ಮಾಡಿದ್ದರಿಂದ ಜಾತಿ ವ್ಯವಸ್ಥೆ ಏನೆಂಬುದು ಗೊತ್ತಿತ್ತು ಎಂದು ವಿವರಿಸಿದರು.

Translate »