ಮೈಸೂರು ಅರಮನೆಯಲ್ಲಿ ಆದ್ಯವೀರ್  ನರಸಿಂಹರಾಜ ಒಡೆಯರ್ ಹುಟ್ಟುಹಬ್ಬ ಸಂಭ್ರಮ
ಮೈಸೂರು

ಮೈಸೂರು ಅರಮನೆಯಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಹುಟ್ಟುಹಬ್ಬ ಸಂಭ್ರಮ

January 21, 2019

ಮೈಸೂರು: ಮೈಸೂರು ಅರಮನೆಯಲ್ಲಿ ಭಾನುವಾರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕ ಕುಮಾರಿ ಒಡೆಯರ್ ಪುತ್ರ ಆದ್ಯವೀರ್ ನರಸಿಂಹ ರಾಜ ಒಡೆಯರ್ ಅವರ ಮೊದಲ ವರ್ಷದ ಹುಟ್ಟು ಹಬ್ಬವನ್ನು ರಾಜವಂಶಸ್ಥರ ಪ್ರಮುಖರ ಸಮ್ಮುಖದಲ್ಲಿ ಆಚರಿಸಲಾಯಿತು.

ಅರಮನೆಯ ಆವರಣದಲ್ಲಿ ಭಾನು ವಾರ ನಡೆದ ಹುಟ್ಟು ಹಬ್ಬ ಕಾರ್ಯ ಕ್ರಮದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್, ತ್ರಿಶಿಕ ಕುಮಾರಿ ಒಡೆ ಯರ್ ಒಳಗೊಂಡಂತೆ ರಾಜವಂಶಸ್ಥರು ಪಾಲ್ಗೊಂಡಿದ್ದರು. ಆದ್ಯವೀರ್ ಅವರಿಗೆ ಮುತ್ತೈದೆಯರು ಬೆಳ್ಳಿ ತಟ್ಟೆಯಲ್ಲಿ ಬೆಳ್ಳಿ ದೀಪವನ್ನಿಟ್ಟು ಆರತಿ ಬೆಳಗಿ ಶುಭ ಕೋರಿದರು.

ಈ ವೇಳೆ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ತಮ್ಮ ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ `ಯುವರಾಜ ಶ್ರೀ ಆದ್ಯವೀರ್ ನರಸಿಂಹರಾಜ ಒಡೆಯರ್ ಅವರ ವರ್ಧಂತಿ ಯಂದು ಅವರಿಗೆ ಶುಭ ಕೋರುತ್ತೇವೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಉತ್ತಮ ಆರೋಗ್ಯ ಮತ್ತು ಐಶ್ವರ್ಯವನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇವೆ’ ಎಂದು ಬರೆದಿದ್ದಾರೆ. ಅಲ್ಲದೇ ಯುವರಾಜರ ವರ್ಧಂತಿಯನ್ನು ಡಿ.26ರಂದು (2018) ಆಚರಿಸ ಬೇಕಾಗಿತ್ತು. ಆದರೆ ಮೈಸೂರು ಅರ ಮನೆಯ ಸಂಪ್ರದಾಯದ ಪ್ರಕಾರ ಮೊದ ಲನೆಯ ವರ್ಧಂತಿಯನ್ನು ಸಂಕ್ರಾಂತಿಯ ನಂತರ ಆಚರಿಸುವ ಸಂಪ್ರದಾಯ ಇರುವು ದರಿಂದ ಇಂದು ವರ್ಧಂತಿ ಆಚರಿಸಲಾ ಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಮಾಧ್ಯಮ ಮತ್ತು ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿತ್ತು.

Translate »