ಮೈಸೂರು: ಅಪರಿಚಿತರಿಬ್ಬರು ಹಾಡಹಗಲೇ ವೃದ್ಧೆಯೊಬ್ಬರಿಗೆ ವಂಚಿಸಿ, ಸುಮಾರು ಒಂದು ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿರುವ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೈಸೂರಿನ ಜೆ.ಪಿ.ನಗರದ ನಿವಾಸಿ ಪುಟ್ಟಮ್ಮ(55), ನಕಲಿ ಚಿನ್ನಾಭರಣಕ್ಕೆ ಆಸೆ ಬಿದ್ದು, ವಂಚನೆಗೊಳಗಾಗಿ ಸುಮಾರು 38 ಗ್ರಾಂ ತೂಕದ ತಮ್ಮ ಅಸಲಿ ಚಿನ್ನಾಭರಣವನ್ನು ಕಳೆದುಕೊಂಡಿದ್ದಾರೆ. ಪುಟ್ಟಮ್ಮ ಅವರು ಜೂ.26ರಂದು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗಾಂಧೀ ವೃತ್ತದ ಸಮೀಪ ಸುಮಂಗಲಿ ಸಿಲ್ಕ್ಸ್ ಬಳಿ ನಡೆದುಕೊಂಡು ಬರುತ್ತಿದ್ದರು. ಆಗ ಎದುರಾದ…
ಮೈಸೂರಲ್ಲಿ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್ ಅಳವಡಿಕೆ ಚಿಂತನೆ
July 6, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ದೀಪಗಳಿಗೆ ಎಲ್‍ಇಡಿ ಬಲ್ಬ್‍ಗಳ ಅಳವಡಿಸುವ ಸಂಬಂಧ ಪೌರಾಡಳಿತ ನಿರ್ದೇಶನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ದಿನಗಳಲ್ಲಿ ಬೆಳದಿಂಗಳಂತಹ ಬೆಳಕಿನಲ್ಲಿ ನಗರದ ರಸ್ತೆಗಳು ಕಂಗೊಳಿಸುವುದು ಮಾತ್ರವಲ್ಲ, ವಿದ್ಯುಚ್ಛಕ್ತಿಯ ಉಳಿತಾಯದೊಂದಿಗೆ ಆರ್ಥಿಕ ಹೊರೆಯೂ ತಗ್ಗಲಿದೆ. ಸದ್ಯ ನಗರ ಪಾಲಿಕೆ ವ್ಯಾಪ್ತಿಯ ವಿದ್ಯುತ್ ಕಂಬಗಳಲ್ಲಿ ಒಟ್ಟು 61,501 ವಿವಿಧ ಬಗೆಯ ಬಲ್ಬ್‍ಗಳನ್ನು ಅಳವಡಿಸಲಾಗಿದೆ. ಈ ಪೈಕಿ 8432 ಎಲ್‍ಇಡಿ ಬಲ್ಬ್‍ಗಳು ಇದ್ದು, 22184 ಟ್ಯೂಬ್‍ಲೈಟ್‍ಗಳು, 28577 ಸೋಡಿಯಂ ಲೈಟ್‍ಗಳು, 2308…
ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ
July 6, 2018ಬನ್ನೂರು: ಸಿಎಂ ಕುಮಾರಸ್ವಾಮಿ ಯವರು ರೈತರ ಸಾಲವನ್ನು ಮನ್ನಾ ಮಾಡಿದ್ದ ರಿಂದ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜಯ್, ಇಂದು ರಾಜ್ಯದ ರೈತಾಪಿ ಕುಟುಂಬದವರು ಆರ್ಥಿಕ ವಾಗಿ ಜರ್ಜರಿತವಾಗಿದ್ದು, ಅವರು ಬದುಕು ನಡೆಸುವುದು ಕಷ್ಟವಾಗಿದೆ. ರಾಜ್ಯದ ರೈತರ ನೋವನ್ನು ಕಣ್ಣಾರೆ ಕಂಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣೆಗೂ ಮೊದಲೇ ನೀಡಿದ್ದ ಆಶ್ವಾಸನೆ ಯಂತೆ ರೈತರ ಸಾಲವನ್ನು ಮನ್ನಾ ಮಾಡುವ ದೃಢ ನಿರ್ಧಾರವನ್ನು ಕೈಗೊಂಡು ನುಡಿ ದಂತೆ…
ನೀರಿನ ತೊಟ್ಟಿಗೆ ಬಿದ್ದು ಮಗು ಸಾವು
July 6, 2018ಬೆಟ್ಟದಪುರ: ಮನೆಯವರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿರುವ ಘಟನೆ ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದತುಂಗದ ಕೆಳಗಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಗದೀಶ ಮತ್ತು ಲಕ್ಷ್ಮೀ ದಂಪತಿಯ 2 ವರ್ಷದ ಯಶಸ್ ಮೃತಪಟ್ಟ ಮಗು. ಘಟನೆ ವಿವರ: ತಂದೆ ತಾಯಿ ಮನೆಯ ಹಿಂಭಾಗದಲ್ಲಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಗು ಸಹ ಅಲ್ಲೇ ಆಟವಾಡುತ್ತಿತ್ತೆನ್ನಲಾಗಿದೆ. ತಾಯಿ ಲಕ್ಷ್ಮಿ ಮನೆಗೆ ಹೋಗಿದ್ದನ್ನು ನೋಡಿ ಮಗು ಹಿಂಬಾಲಿಸಿದೆ. ತಾಯಿ ಮನೆಯೊಳಗೆ ಕಾಫಿ ಮಾಡಲು ನಿರತಳಾದಾಗ ಮಗು ಹಿಂದಯೇ ಓಡಿ ಬಂದು…
ಎಡದೊರೆಯಲ್ಲಿ ದೇಗುಲದ ಹುಂಡಿ ಕಳವು
July 6, 2018ತಿ.ನರಸೀಪುರ: ತಾಲೂಕಿನ ಎಡದೊರೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಳ್ಳರು ಹುಂಡಿ ಒಡೆದು ಹಣ ದೋಚಿರುವ ಘಟನೆ ತಡರಾತ್ರಿ ನಡೆದಿದೆ. ದೇವಾಲಯ ಹುಂಡಿಯನ್ನು ಕಳೆದ ಒಂದು ವರ್ಷದಿಂದ ತೆರೆದಿರಲಿಲ್ಲ ಎನ್ನ ಲಾಗಿದ್ದು, ಕಳ್ಳರು ತಮ್ಮ ಕೈ ಚಳಕ ತೋರಿ ಹುಂಡಿಯನ್ನು ಒಡೆದು ಲಕ್ಷಾಂತರ ರೂಪಾಯಿ ಹಣ ದೋಚಿದ್ದಾರೆ. ಬಳಿಕ ಹುಂಡಿಯನ್ನು ಸುಮಾರು 500 ಮೀಟರ್ ದೂರದಲ್ಲಿ ಬಿಸಾಡಿ ಹೋಗಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
ಅಕ್ರಮ ಮಾಂಸದ ಅಂಗಡಿಗೆ ಬೀಗ
July 6, 2018ಬೆಟ್ಟದಪುರ: ಅಕ್ರಮವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ಪಿಡಿಓ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ. ಬೆಟ್ಟದಪುರ ಗ್ರಾಮದಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಮಾಂಸದ ಅಂಗಡಿಗಳನ್ನು ನಡೆಸಲು ಹರಾಜು ಮಾಡಲಾಗಿತ್ತು. ಹರಾಜಿನ ಸಮಯ ಮುಗಿದಿದ್ದು ನವೀಕರಣ ಮಾಡಿಕೊಂಡು ಹಣ ಪಾವತಿ ಮಾಡದೆ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ದಾಳಿ ಮಾಡಿದ ಪಿಡಿಓ ಚಿದಾನಂದ್ ಮತ್ತು ಸಿಬ್ಬಂದಿ ಅಂಗಡಿಗಳಿಗೆ ಬೀಗ ಜಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ಚಿದಾ ನಂದ್. ಪಂಚಾಯಿತಿ ಒಪ್ಪಂದದಂತೆ ಪ್ರತಿವರ್ಷವೂ ಹಣ ಪಾವತಿ…
ಬ್ಯಾಂಕ್ ನೆರವಿನಿಂದ ದುರ್ಬಲರ ಸಬಲತೆ
July 6, 2018ತಿ.ನರಸೀಪುರ: ಸಣ್ಣ ಪ್ರಮಾಣದಲ್ಲಿ ದುಡಿಯುವ ರೈತ ವರ್ಗ ಹಾಗೂ ವ್ಯಾಪಾರಗಳಿಗೆ ಉಜ್ಜೀವನ್ ಬ್ಯಾಂಕ್ ಅಗತ್ಯ ಆರ್ಥಿಕ ನೆರವು ದೊರಕಿಸಿ ದರೆ ದುರ್ಬಲ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ನಂಜೇಶ್ ತಿಳಿಸಿದರು. ಪಟ್ಟಣದ ಜೋಡಿ ರಸ್ತೆಯಲ್ಲಿರುವ ಮಹ ದೇಶ್ವರ ಪ್ಲಾಜಾ (ವಜ್ರೇಗೌಡ ಕಾಂಪ್ಲೆಕ್ಸ್) ದಲ್ಲಿ ಪ್ರಾರಂಭಗೊಂಡ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಬ್ಯಾಂಕ್‍ಗಳಲ್ಲಿ ದೊಡ್ಡ ಪ್ರಮಾಣದ ಉದ್ಯಮ ವ್ಯವಹಾರ ನಡೆಸುವ ಜನರಿಗೆ ಸುಲಭವಾಗಿ ಆರ್ಥಿಕ…
ಗ್ಯಾಸ್ ಸಿಲಿಂಡರ್ ಕಳ್ಳತನ
July 6, 2018ಹಿರೀಕ್ಯಾತನಹಳ್ಳಿ: ಇಲ್ಲಿನ ಶಾಲೆಯ ಅಕ್ಷರ ದಾಸೋಹ ಕೊಠಡಿಯ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿರುವ ಘಟನೆ ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೈಸ್ಕೂಲ್ ಬಡಾವಣೆಯಲ್ಲಿ ರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾತ್ರಿ ವೇಳೆ ಕೊಠಡಿಯಲ್ಲಿದ್ದ ಯಾವುದೇ ವಸ್ತುಗಳನ್ನು ಮುಟ್ಟದೆ ಭರ್ತಿಯಾಗಿರುವ ಸಿಲಿಂಡರ್ ಅನ್ನು ಕಳ್ಳತನ ಮಾಡಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ದೊಡ್ಡಸ್ವಾಮಿ ಹುಣಸೂರು ಗ್ರಾಮಾಂತರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅರಸು ಜಿಮ್‍ಖಾನ ಕ್ಲಬ್ ಅಧ್ಯಕ್ಷರಾಗಿ ಮೋಹನ್‍ರಾಜೇ ಅರಸು
July 6, 2018ಮೈಸೂರು: ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅರಸು ಜಿಮ್‍ಖಾನ ಕ್ಲಬ್ ಅಧ್ಯಕ್ಷರಾಗಿ ಮೋಹನ್ ರಾಜೇ ಅರಸು ಆಯ್ಕೆಯಾಗಿದ್ದಾರೆ. ಕ್ಲಬ್‍ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಜೂನ್ 24ರಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆಯಾಗಿದ್ದು, ಉಳಿದಂತೆ ಉಪಾಧ್ಯಕ್ಷರಾಗಿ ಎಂ.ಎ.ಶ್ರೀಕಾಂತರಾಜೇ ಅರಸು, ಕಾರ್ಯದರ್ಶಿಯಾಗಿ ಅಜೇಯ ಬಸಪ್ಪಾಜಿ ಅರಸು, ಖಜಾಂಚಿಯಾಗಿ ಅರುಣ್ ಕುಮಾರ್ ರಾಜೇ ಅರಸು, ಸಮಿತಿ ಸದಸ್ಯರಾಗಿ ಆರ್.ಎನ್.ವಿಶ್ವಾಸ ಅರಸು, ರಾಮಚಂದ್ರರಾಜೇ ಅರಸು ಎಸ್.(ಅಶೋಕ್), ವೈ.ಎಂ.ಕಿರಣ್, ಎನ್.ಎಸ್.ದಾಸರಾಜೇ ಅರಸು (ಉದಯ್) ಮತ್ತು ನಂದಗೋಪಾಲ ರಾಜೇ ಅರಸು ಆಯ್ಕೆಯಾಗಿದ್ದಾರೆ ಎಂದು ಕ್ಲಬ್‍ನ…
ಇಂದಿನಿಂದ ನಂದಿನಿ ಸಿಹಿ ಉತ್ಸವ
July 6, 2018ಮೈಸೂರು: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ನಾಳೆ (ಜು.6)ಯಿಂದ ಜು.20ರವರೆಗೆ `ನಂದಿನಿ ಸಿಹಿ ಉತ್ಸವ’ ಏರ್ಪಡಿಸಲಾಗಿದೆ. ಗ್ರಾಹಕರಿಗೆ ಸಿಹಿ ಉತ್ಪನ್ನಗಳ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿರುವ ಉತ್ಸವವನ್ನು ನಾಳೆ (ಜು.6) ಬೆಳಿಗ್ಗೆ 9.30ಕ್ಕೆ ಮೈಸೂರು ಹಾಲು ಒಕ್ಕೂಟದ ಮುಂಭಾಗವಿರುವ ಕ್ಷೀರ ಮಳಿಗೆಯಲ್ಲಿ ಒಕ್ಕೂಟದ ಸಭಾಪತಿ ಕೆ.ಜಿ.ಮಹೇಶ್ ಉದ್ಘಾಟಿಸಲಿದ್ದಾರೆ. ಉತ್ಸವ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಎಂಆರ್‍ಪಿ ದರದಲ್ಲಿ ಶೇ.10ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುವುದು ಎಂದು ಮೈಮುಲ್ ವ್ಯವಸ್ಥಾಪಕ…










