ಇಂದಿನಿಂದ ನಂದಿನಿ ಸಿಹಿ ಉತ್ಸವ
ಮೈಸೂರು

ಇಂದಿನಿಂದ ನಂದಿನಿ ಸಿಹಿ ಉತ್ಸವ

July 6, 2018

ಮೈಸೂರು: ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಯೋಗದಲ್ಲಿ ನಾಳೆ (ಜು.6)ಯಿಂದ ಜು.20ರವರೆಗೆ `ನಂದಿನಿ ಸಿಹಿ ಉತ್ಸವ’ ಏರ್ಪಡಿಸಲಾಗಿದೆ.

ಗ್ರಾಹಕರಿಗೆ ಸಿಹಿ ಉತ್ಪನ್ನಗಳ ಅರಿವು ಮೂಡಿಸುವ ಉದ್ದೇಶದಿಂದ ಏರ್ಪಡಿಸಲಾಗಿರುವ ಉತ್ಸವವನ್ನು ನಾಳೆ (ಜು.6) ಬೆಳಿಗ್ಗೆ 9.30ಕ್ಕೆ ಮೈಸೂರು ಹಾಲು ಒಕ್ಕೂಟದ ಮುಂಭಾಗವಿರುವ ಕ್ಷೀರ ಮಳಿಗೆಯಲ್ಲಿ ಒಕ್ಕೂಟದ ಸಭಾಪತಿ ಕೆ.ಜಿ.ಮಹೇಶ್ ಉದ್ಘಾಟಿಸಲಿದ್ದಾರೆ.

ಉತ್ಸವ ಸಂದರ್ಭದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಎಂಆರ್‍ಪಿ ದರದಲ್ಲಿ ಶೇ.10ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುವುದು ಎಂದು ಮೈಮುಲ್ ವ್ಯವಸ್ಥಾಪಕ (ಮಾರುಕಟ್ಟೆ) ಡಾ. ಎ.ಬಿ. ಲೋಕೇಶ್ ತಿಳಿಸಿದ್ದಾರೆ.

Translate »