ನಂದಿನಿ ಸಿಹಿ ಉತ್ಸವಕ್ಕೆ ಇಂದು ತೆರೆ
ಚಾಮರಾಜನಗರ

ನಂದಿನಿ ಸಿಹಿ ಉತ್ಸವಕ್ಕೆ ಇಂದು ತೆರೆ

July 20, 2018

ಚಾಮರಾಜನಗರ: ಚಾ.ನಗರ ಜಿಲ್ಲಾ ಹಾಲು ಒಕ್ಕೂಟದಿಂದ 15 ದಿನಗಳ ಕಾಲ ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಮೇಳ ಯಶಸ್ವಿಯಾಗಿದ್ದು, ನಾಳೆ(ಜು.20) ಕಡೆಯ ದಿನವಾಗಿದೆ.

ಚಾಮುಲ್‍ನಿಂದ ಜಿಲ್ಲೆಯ ವ್ಯಾಪ್ತಿಯ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ನಂದಿನ ಮಾರಾಟ ಮಳಿಗೆಗೆಳ ಮೂಲಕ ಜು.6 ರಂದು ನಂದಿನಿ ಸಿಹಿ ಉತ್ಸವ ಮಾರಾಟಕ್ಕೆ ಚಾಲನೆ ನೀಡಲಾಗಿತ್ತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಆಷಾಡ ಮಾಸದಲ್ಲಿ ನಂದಿನಿ ಸಿಹಿ ಉತ್ಪನ್ನಗಳ ಮಾರಾಟ ಬಹಳ ಕಡಿಮೆ ಇತ್ತು. ಈಗ ಉತ್ಸವ ಮೂಲಕ ಗ್ರಾಹಕರಿಗೆ ಶೇ.10ರಷ್ಟು ರಿಯಾಯಿತಿ ನೀಡಿದ ಪರಿಣಾಮ ಸಿಹಿ ಉತ್ಪನ್ನಗಳ ಮಾರಾಟ ದಲ್ಲಿ ಹೆಚ್ಚಳವಾಗಿದೆ. ಇದೇ ರೀತಿ ಗ್ರಾಹಕರು ಸಹ ನಂದಿನಿ ಸಿಹಿ ಉತ್ಪನ್ನಗ ಳನ್ನು ಖರೀದಿಸಲು ಹೆಚ್ಚು ಉತ್ಸಾಹ ತೋರಿ ದ್ದಾರೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ವಿಜಯಕುಮಾರ್ ತಿಳಿಸಿದರು.

ರೈತರ ಸಂಸ್ಥೆಯಾಗಿರುವ ನಂದಿನಿ ಡೇರಿಯನ್ನು ಲಾಭದತ್ತ ಕೊಂಡೊಯ್ಯಲು ರೈತರ ಜೊತೆಗೆ ಗ್ರಾಹಕರು ಹೆಚ್ಚಿನ ಸ್ಪಂದನೆ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಜನರನ್ನು ಅಕರ್ಷಣೆ ಮಾಡುವ ಉದ್ದೇ ಶದ ನಂದಿನಿ ಸಿಹಿ ಉತ್ಸವ ಯಶಸ್ವಿ ಯಾಗಿದೆ. ನಂದಿನಿ ಮಾರಾಟಗಾರರು ಸಹ ಹೆಚ್ಚಿನ ಸಹಕಾರ ನೀಡಿ, ಅಂಗಡಿ ಗಳನ್ನು ಬ್ಯಾನರ್ ಹಾಗು ಲೈಟಿಂಗ್ ಅಳವಡಿಸಿ, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ ನಂದಿನಿ ವಾಕ್ ಇನ್ ಕೋಲ್ಡ್ ಸ್ಟೋರೇಜ್‍ನಲ್ಲಿ ಹಬ್ಬದ ಮಾದರಿಯಲ್ಲಿ ಅಲಂಕಾರ ಮಾಡುವ ಜೊತೆಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡುವ ಲ್ಲಿಯು ಸಹ ಸಾಧನೆ ಮಾಡಿದೆ.

ನಂದಿನಿ ಸಿಹಿ ಉತ್ಸವಕ್ಕೆ ಸಹಕಾರ ನೀಡಿ ದವರಿಗೆ ಹಾಗೂ ಗ್ರಾಹಕರಿಗೆ ಚಾಮುಲ್ ಮಾರುಕಟ್ಟೆ ವಿಭಾಗದ ಉಪ ವ್ಯವಸ್ಥಾಪಕ ಶ್ರೀಕಾಂತ್ ಅಭಿನಂದನೆ ಸಲ್ಲಿಸಿದ್ದಾರೆ. ನಾಳೆ ಶುಕ್ರವಾರ ಕಡೆ ದಿನವಾಗಿದ್ದು, ಗ್ರಾಹಕರು ಶೇ.10ರ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Translate »