ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ
ಮೈಸೂರು

ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ `ನಂದಿನಿ ಸಿಹಿ ಉತ್ಸವ’ ಆರಂಭ

December 22, 2018

ಮೈಸೂರು:  ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಡಿ.21ರಿಂದ ಜ.9ರವರೆಗೆ 20 ದಿನಗಳ ನಂದಿನಿ ಸಿಹಿ ಉತ್ಸವ ಏರ್ಪಡಿಸಿದ್ದು, ಈ ಅವಧಿಯಲ್ಲಿ ನಂದಿನಿಯ ಎಲ್ಲಾ ಸಿಹಿ ಉತ್ಪನ್ನಗಳಿಗೆ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗಿದೆ.

ನಂದಿನಿಯ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್, ಪೇಡಾ, ಬಾದಾಮಿ ಬರ್ಫಿ, ಲಾಡು, ಜಾಮೂನ್, ರಸಗುಲ್ಲಾ, ಬೆಳಗಾವಿ ಕುಂದ ಬಾದಾಮಿ ಪೌಡರ್ ಸೇರಿದಂತೆ 60ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳನ್ನು ಶೇ.10 ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಪ್ರಿಯರಿಗೆ ನೀಡಲಿದೆ. ಮೈಸೂರು ಜಿಲ್ಲೆಯ 137 ಹಾಗೂ ಚಾಮರಾಜನಗರ ಜಿಲ್ಲೆಯ 27 ನಂದಿನಿ ಬೂತ್‍ಗಳಲ್ಲಿ ಈ ಉತ್ಪನ್ನಗಳು ಲಭ್ಯವಿದೆ.

20 ದಿನಗಳ ಈ ಉತ್ಸವಕ್ಕೆ ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷ ಕೆ.ಜಿ.ಮಹೇಶ್ ಶುಕ್ರವಾರ ಮೈಸೂರಿನ ಸಿದ್ದಾರ್ಥನಗರದ ನಂದಿನಿ ಡೈರಿ ಆವರಣದಲ್ಲಿರುವ ನಂದಿನಿ ಕ್ಷೀರ ಕೇಂದ್ರದಲ್ಲಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಹಾಲು ಮಹಾಮಂಡ ಳಿಯ ನಿರ್ದೇಶಕ ಕೆ.ಸಿ.ಬಲರಾಂ, ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ಎಸ್.ವಿಜಯಕುಮಾರ್, ಮಾರುಕಟ್ಟೆ ಮತ್ತು ಖರೀದಿ ವಿಭಾಗದ ವ್ಯವಸ್ಥಾಪಕ ಡಾ.ಜಿ.ಎಸ್.ಪ್ರಕಾಶ್, ವ್ಯವಸ್ಥಾಪಕರಾದ ಕೆ.ಎಸ್. ನರಸಿಂಹಮೂರ್ತಿ, ಟಿ.ಎಸ್.ರಘು ಉಪಸ್ಥಿತರಿದ್ದರು. ಗ್ರಾಹಕರು ನಂದಿನಿ ಸಿಹಿಯೊಂದಿಗೆ ಕ್ರಿಸ್‍ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲಿ ಎಂಬ ಉದ್ದೇಶದೊಂದಿಗೆ ನಂದಿನಿ ಉತ್ಪನ್ನಗಳು ಇನ್ನಷ್ಟು ಪರಿಚಯಪಡಿಸುವ ಉದ್ದೇಶವನ್ನು ಈ ಉತ್ಸವ ಹೊಂದಿದೆ.

Translate »