ಇಂದು ‘ಕೌಟಿಲ್ಯ ಸಡಗರ’, ‘ಅಜ್ಜನೊಂದಿಗೆ  ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮ
ಮೈಸೂರು

ಇಂದು ‘ಕೌಟಿಲ್ಯ ಸಡಗರ’, ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮ

December 22, 2018

ಮೈಸೂರು: ಮೈಸೂರಿನ ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಡಿ.22ರಂದು ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ. ವಾರ್ಷಿಕೋತ್ಸವದ ಅಂಗವಾಗಿ ಅಂದು ಮಧ್ಯಾಹ್ನ 3 ಗಂಟೆಗೆ ‘ಅಜ್ಜನೊಂದಿಗೆ ಹೆಜ್ಜೆ-ಅಜ್ಜಿಯೊಂದಿಗೆ ಗೆಜ್ಜೆ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಹಿರಿಯರ ಮತ್ತು ಕಿರಿಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿ ಸುವ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕ ಐಜಿಪಿ ವಿಪುಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮೈಸೂರು ಗ್ರಾಹಕರ ಪರಿಷತ್ತಿನ ಅಧ್ಯಕ್ಷ ಭಾಮಿ ವಿ.ಶೆಣೈ ಗೌರವ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಕೌಟಿಲ್ಯ ವಿದ್ಯಾಲಯ ಅಧ್ಯಕ್ಷ ಆರ್.ರಘು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿದ್ಯಾಲಯದ ನಾಲ್ವರು ಶಿಕ್ಷಕರಾದ ಎಂ.ಎ.ಗೀತಾ, ಚಾರು ಲತಾ, ವಿ.ಶಾಲಿನಿ, ಎನ್.ಸೀತಾಲಕ್ಷ್ಮಿ ಅವರಿಗೆ ಸಂಸ್ಥೆಗೆ ಸಲ್ಲಿಸಿದ ಸ್ಮರಣೀಯ ಸೇವೆಗಾಗಿ ತಲಾ 10 ಸಾವಿರ ನಗದು ಹಾಗೂ ಸ್ಮರಣಿಕೆಯೊಂದಿಗೆ ಕೌಟಿಲ್ಯ ರತ್ನ ಪ್ರಶಸ್ತಿ ನೀಡಲಾಗುವುದು.

Translate »