ಲಲಿತಮಹಲ್ ಬಳಿ ಆಸ್ತಿಗೆ ಬೇಲಿ ನಿರ್ಮಾಣ
ಮೈಸೂರು

ಲಲಿತಮಹಲ್ ಬಳಿ ಆಸ್ತಿಗೆ ಬೇಲಿ ನಿರ್ಮಾಣ

December 22, 2018

ಮೈಸೂರು:  ಮೈಸೂರಿನ ಹೆಲಿಪ್ಯಾಡ್ ಸಮೀಪ ಬೇಲಿ ಹಾಕುವ ಕಾಮಗಾರಿ ಮುಂದುವರಿದಿದೆ. ಕಳೆದ ನಾಲ್ಕೈದು ದಿನಗಳಿಂದ ಖಾಸಗಿ ವ್ಯಕ್ತಿ ಕಾಮಗಾರಿ ನಡೆಸುತ್ತಿದ್ದು, ಕಂಬಗಳನ್ನು ಅಳವಡಿಸುವ ಕಾರ್ಯ ಪೂರ್ಣ ಗೊಂಡಿದೆ. ಇನ್ನೆರಡು ದಿನಗಳಲ್ಲಿ ಚೈನ್ ರಿಂಗ್ ಮೆಷ್ ಅಳವಡಿಸುತಿರುವುದಾಗಿ ತಿಳಿದು ಬಂದಿದೆ. ನಂತರದಲ್ಲಿ ಸಾರ್ವಜನಿಕರ ಪ್ರವೇಶದ ಜೊತೆಗೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ವತಿಯಿಂದ ನಡೆಸಲಾಗುತ್ತಿದ್ದ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ.

ಹೆಲಿಪ್ಯಾಡ್‍ನ ಒಂದು ಭಾಗವನ್ನೊಳ ಗೊಂಡಂತೆ ಪಕ್ಕದಲ್ಲಿರುವ ಸುಮಾರು 7 ಎಕರೆ ಭೂಮಿ ತಮ್ಮದೆಂದು ಹೇಳುತ್ತಿರುವ ಎಸ್.ಮೀನಾಕ್ಷಿ ಅವರು, ಫೆನ್ಸಿಂಗ್ ಅಳವಡಿ ಸುತ್ತಿದ್ದಾರೆ. ಈ ಸಂಬಂಧ ಜಮೀನಿನ ಜಿಪಿಎ ಹೋಲ್ಡರ್ ಕೆ.ಮನು ಪ್ರತಿಕ್ರಿಯಿಸಿದ್ದು, ತ್ಯಾಜ್ಯ ವನ್ನು ತಂದು ನಮ್ಮ ಜಮೀನಿಗೆ ಸುರಿಯ ಲಾಗುತ್ತಿತ್ತು. ಅಲ್ಲದೆ ಅನಧಿಕೃತವಾಗಿ ಬಳಸಿ ಕೊಳ್ಳುತ್ತಿದ್ದರು. ಇದಕ್ಕೆ ಕಡಿವಾಣ ಹಾಕುವು ದರೊಂದಿಗೆ ಜಮೀನು ರಕ್ಷಣೆಗೆ ಬೇಲಿ ಹಾಕುತ್ತಿದ್ದೇವೆ. ಬಳಿಕ ಇಲ್ಲಿ ಪ್ಲಾಂಟೇಶನ್ ಮಾಡಿಸಲಾಗುವುದು ಎಂದರು.

ಈಗಾಗಲೇ ಕಂಬಗಳನ್ನು ಅಳವಡಿಸಲಾಗಿದ್ದು, ಮೆಷ್ ಅಳವಡಿಕೆ ಬಾಕಿ ಇದೆ.

ಇಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿ, ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದರು. ಆದರೆ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಿ, ಕಾನೂನು ಬದ್ಧವಾಗಿ ಜಮೀನಿನ ರಕ್ಷಣೆ ಮಾಡುತ್ತಿದ್ದೇವೆ. ದಸರಾ ಸಂದರ್ಭದಲ್ಲಿ ಸದರಿ ಜಮೀನಿನಲ್ಲಿ ಯಾವುದೇ ಕಾರ್ಯಕ್ರಮ ನಡೆಸಬಾರದೆಂದು ತಮ್ಮ ಇಲಾಖೆಗೂ ಮನವಿ ನೀಡಿದ್ದೆವು ಎಂದು ಮನವರಿಕೆ ಮಾಡಿಕೊಟ್ಟ ನಂತರ, ಹೆಲಿಪ್ಯಾಡ್ ಆವರಣದ 3 ಮೀ. ಜಾಗವನ್ನು ಬಿಟ್ಟು, ಬೇಲಿ ಹಾಕಿಕೊಳ್ಳುವಂತೆ ತಿಳಿಸಿದರು. ಅವರ ಮನವಿಯಂತೆ 3 ಮೀ. ಜಾಗ ಬಿಟ್ಟು ಫೆನ್ಸಿಂಗ್ ಅಳವಡಿಸುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಬಿ ಖರಾಬು ಎಂದು ಆದೇಶಿಸಿರುವ ಮೈಸೂರು ತಾಲೂಕು, ಕಸಬಾ ಹೋಬಳಿ, ಕುರುಬಾರ ಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಒಟ್ಟು 1563 ಎಕರೆ 31 ಗುಂಟೆ ಜಮೀನಿನ ಪೈಕಿ, ಎ ಮತ್ತು ಸಿ ಬ್ಲಾಕ್‍ನಲ್ಲಿ ಒಟ್ಟು 7 ಎಕರೆ ಭೂಮಿ ನನಗೆ ಸೇರಿದ್ದಾಗಿದ್ದು, ಜಿಲ್ಲಾಧಿಕಾರಿಗಳ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ಎಸ್.ಮೀನಾಕ್ಷಿ ಅವರು ಈ ಹಿಂದೆಯೇ ಜಮೀನಿನಲ್ಲಿ ಫಲಕ ಅಳವಡಿಸಿದ್ದಾರೆ. ಅಲ್ಲದೆ ತಮ್ಮ ಅನುಮತಿ ಯಿಲ್ಲದೆ ಜಮೀನು ಬಳಸಿಕೊಳ್ಳಬಾರದೆಂದು ಜಿಲ್ಲಾಧಿಕಾರಿಗಳು, ತಹಸೀಲ್ದಾರ್, ಲೋಕೋಪ ಯೋಗಿಇಲಾಖೆಗೆ ಮನವಿ ನೀಡಿದ್ದರು. ನಂತರದಲ್ಲಿ ಜಮೀನಿನಲ್ಲಿದ್ದ ತ್ಯಾಜ್ಯವನ್ನು ತೆರವು ಮಾಡಿ, ಸ್ವಚ್ಛಗೊಳಿಸಿದ ಬಳಿಗ ಇದೀಗ ಫೆನ್ಸಿಂಗ್ ಅಳವಡಿಸುತ್ತಿದ್ದಾರೆ.

Translate »