ಮೈಸೂರು ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ರಾಜೀನಾಮೆ ನಿರ್ಧಾರ
ಮೈಸೂರು

ಮೈಸೂರು ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನಾ ರಾಜೀನಾಮೆ ನಿರ್ಧಾರ

December 22, 2018

ಮೈಸೂರು:  ಶುಕ್ರವಾರ ನಿಗದಿಯಾಗಿದ್ದ ಮೈಸೂರು ಜಿಲ್ಲಾ ಪಂಚಾ ಯಿತಿ ಸಾಮಾನ್ಯ ಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆ ನಿರ್ಧಾರ ದಿಂದ ಮುಂದೂಡಲ್ಪಟ್ಟಿತು.

ಜಿಪಂ ಸಭಾಂಗಣದಲ್ಲಿ ಸಾಮಾನ್ಯ ಸಭೆಗೆ ಕಾಂಗ್ರೆಸ್ ಸದಸ್ಯರು ಬಂದರೆ, ಮತ್ತೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪ್ರಕ್ರಿಯೆಯಲ್ಲಿ ಭಾಗಿಯಾದರು.

ನಿಯಮದಂತೆ ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್ ಅವರಿಗೆ ಜಿ.ನಟ ರಾಜು ರಾಜೀನಾಮೆ ಪತ್ರ ಸಲ್ಲಿಸಿದರು. ಅದೇ ರೀತಿ ಅಧ್ಯಕ್ಷೆ ನಯಿಮಾ ಸುಲ್ತಾನ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಪ್ರಕ ಟಿಸಿದ್ದು, ರಾಜೀನಾಮೆ ಪತ್ರವನ್ನು ನಿಯ ಮದಂತೆ ಶೀಘ್ರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸುವುದಾಗಿ ಘೋಷಿಸಿದರು. ಇದೇ ವೇಳೆ ಮಾಧ್ಯಮ ದವರೊಂದಿಗೆ ಮಾತನಾಡಿದ ಅಧ್ಯಕ್ಷೆ ನಯಿಮಾ ಸುಲ್ತಾನ, ಸಾಮಾನ್ಯ ಸಭೆಯಾದ ಬಳಿಕ ರಾಜೀನಾಮೆ ಪ್ರಕಟಿಸುವ ಉದ್ದೇಶ ಹೊಂದಿದ್ದೆ. ಆದರೆ ಪಕ್ಷದ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆಗೂ ಮೊದಲೇ ರಾಜೀನಾಮೆ ನೀಡುವುದನ್ನು ಖಚಿತಪಡಿಸಿ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದೇನೆ. ಯಾರದೇ ಒತ್ತಾಯಕ್ಕೆ ಮಣಿದು ರಾಜೀ ನಾಮೆ ನೀಡುತ್ತಿಲ್ಲ. ಸ್ವ-ಇಚ್ಛೆಯಿಂದಲೇ ರಾಜೀನಾಮೆ ನೀಡುತ್ತಿದ್ದೇನೆ. ಅಧ್ಯಕ್ಷ ಸ್ಥಾನಕ್ಕೆ 30 ತಿಂಗಳು ಪೂರ್ಣಗೊಳ್ಳುವ ಮೊದಲೇ 15 ದಿನ ಬಾಕಿ ಇರುವಾಗ ನಾನು ರಾಜೀ ನಾಮೆ ಸಲ್ಲಿಸಿದ್ದೆ. ಆದರೆ ಒತ್ತಡದ ಹಿನ್ನೆಲೆ ಯಲ್ಲಿ ರಾಜೀನಾಮೆ ಹಿಂಪಡೆಯ ಬೇಕಾ ಯಿತು ಎಂದು ತಿಳಿಸಿದರು.

ಈ ಬಾರಿ ಹಿಂತೆಗೆದುಕೊಳ್ಳಲ್ಲ: ಈ ಬಾರಿ ರಾಜೀನಾಮೆ ಹಿಂತೆಗೆದುಕೊಳ್ಳಲ್ಲ. ಕೊಡು ವುದು ಹಿಂತೆಗೆದುಕೊಳ್ಳುವುದನ್ನೇ ಮಾಡುತ್ತ ಕುಳಿತುಕೊಳ್ಳಲು ಇದೇನು ಮಕ್ಕಳ ಆಟವಲ್ಲ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಅಧಿಕಾರ ನಡೆಸಿದ್ದೇನೆ. ಇದೀಗ ನಾನು ಸಂತಸದಿಂ ದಲೇ ರಾಜೀನಾಮೆ ನೀಡುತ್ತಿದ್ದು, ಯಾರ ಒತ್ತಾಯಕ್ಕೂ ಮಣಿದಿಲ್ಲ ಹಾಗೂ ಬೇಸರವೂ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಸಭೆ ಮುಂದೂಡಲ್ಪಟ್ಟಿತು!: ಮೈಸೂರು ಜಿಪಂ ಸಾಮಾನ್ಯ ಸಭೆಯನ್ನು ಡಿ.22ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಅಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರು ಜಿಪಂ ಸಿಇಓ ಗಳೊಂದಿಗೆ ವಿಡಿಯೋ ಸಂವಾದ ನಡೆ ಸುವ ಹಿನ್ನೆಲೆಯಲ್ಲಿ ಸಭೆ ಒಂದು ದಿನ ಮೊದಲೇ ಇಂದೇ ನಿಗದಿಯಾಗಿತ್ತು.

ಆದರೆ 11.40 ಗಂಟೆಯಾದರೂ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸಭಾಂಗಣದಲ್ಲಿ ಕಾಂಗ್ರೆಸ್ ಸದಸ್ಯರು ಕಾದು ಕುಳಿತ್ತಿದ್ದರೆ, ಮಿನಿ ಮೀಟಿಂಗ್ ಹಾಲ್‍ನಲ್ಲಿ ಸೇರಿದ್ದ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ರಾಜೀನಾಮೆ ಪ್ರಕ್ರಿಯೆ ಯಲ್ಲಿ ತಲ್ಲೀನರಾಗಿದ್ದರು. ಸುಮಾರು 12. 20ರ ವೇಳೆಗೆ ಸಭಾಂಗಣಕ್ಕೆ ಹಾಜರಾದ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ತಮ್ಮ ಕುರ್ಚಿಯಲ್ಲಿ ಆಸೀನರಾಗುತ್ತಿದ್ದಂತೆ ಸಭೆ ಮುಂದೂಡುವ ಮುನ್ಸೂಚನೆ ಅರಿತ ವಿಪಕ್ಷ ನಾಯಕ ರವಿಶಂಕರ್, ಸಭೆ ಮುಂದೂಡ ದಂತೆ ಅಧ್ಯಕ್ಷರಲ್ಲಿ ಮನವಿ ಮಾಡಿದರು.

ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡು ಕೊಳ್ಳಬೇಕಿದೆ. ಎಲ್ಲಾ ಸದಸ್ಯರನ್ನು ಕರೆ ತರಬೇಕೆಂದು ರವಿಶಂಕರ್ ಕೋರಿದರು. ಇದಕ್ಕೆ ಕಾಂಗ್ರೆಸ್ ಸದಸ್ಯೆ ಡಾ.ಪುಷ್ಪಾ ಅಮರ ನಾಥ್ ದನಿಗೂಡಿಸಿದರು. ಈ ವೇಳೆ ಮಾತ ನಾಡಿದ ಅಧ್ಯಕ್ಷರು, ಕೋರಂ ಕೊರತೆ ಕಾರಣ ನೀಡಿ 10 ನಿಮಿಷ ಕಾಲ ಸಭೆ ಮುಂದೂ ಡಿದರು. ಈ ವೇಳೆ ಮಧ್ಯೆ ಪ್ರವೇಶಿಸಿದ ಬೀರಿ ಹುಂಡಿ ಬಸವಣ್ಣ, ಅಧ್ಯಕ್ಷರೇ ಈಗಾಗಲೇ ಸಮಯ ಆಗಿದೆ. ಮುಂದೂಡುವುದಾದರೆ ಈಗಲೇ ಮುಂದೂಡಿ ಎಂದು ಸಲಹೆ ನೀಡಿದರು. ಆದರೂ 10 ನಿಮಿಷ ಸಭೆ ಮುಂದೂ ಡಿದ್ದ ಅಧ್ಯಕ್ಷರು ಬಳಿಕ ಸುಮಾರು 12.40ರ ವೇಳೆಗೆ ಕೋರಂ ಅಭಾವದ ಹಿನ್ನೆಲೆ ಯಲ್ಲಿ ಸಭೆ ಮುಂದೂಡಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಪ್ರಕಟಿಸಿದರು.

ಅಧ್ಯಕ್ಷರ ಕುರ್ಚಿಲಿ ಕುಳಿತಿದ್ದಕ್ಕೆ ಆಕ್ಷೇಪ: ಸಭಾಂಗಣದ ವೇದಿಕೆಯಲ್ಲಿದ್ದ ಅಧ್ಯಕ್ಷರ ಕುರ್ಚಿಯಲ್ಲಿ ಜೆಡಿಎಸ್ ಸದಸ್ಯ ಹಾಗೂ ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಾ.ರಾ.ನಂದೀಶ್ ಐದಾರು ನಿಮಿಷ ಆಸೀನರಾಗಿದ್ದರು. ಇದು ಕಾಂಗ್ರೆಸ್ ಸದಸ್ಯರ ಕೆಂಗಣ್ಣಿಗೂ ಗುರಿಯಾಯಿತು. ಈ ಸಂಬಂಧ ಕಾಂಗ್ರೆಸ್ ಸದಸ್ಯ ಅಚ್ಚುತಾನಂದ, ಜಿಪಂ ಸಿಇಓ ಕೆ.ಜ್ಯೋತಿ ಅವರಲ್ಲಿ ಇದು ಅಧಿಕಾರಿ ಗಳ ಲೋಪವೆಂದು ಅಸಮಾಧಾನ ವ್ಯಕ್ತಪಡಿಸಿ ದರು. ನಮ್ಮ ಅಧಿಕಾರಿ ವರ್ಗದಿಂದ ಲೋಪ ವಾಗಿದ್ದು, ಇದಕ್ಕೆ ಕ್ಷಮೆಯಾಚಿಸುತ್ತೇನೆ ಎಂದು ಹೇಳುವ ಮೂಲಕ ಸಿಇಓ ಜ್ಯೋತಿ ವಿಷಯಕ್ಕೆ ತೆರೆ ಎಳೆದರು. ಈ ವೇಳೆ ಸಾ.ರಾ. ನಂದೀಶ್ ಸಭಾಂಗಣದಲ್ಲಿ ಇದ್ದಿದ್ದರೆ ಈ ಸಂಗತಿ ಮತ್ತಷ್ಟು ಚರ್ಚೆಗೆ ಎಡೆ ಮಾಡಿಕೊಡುವ ಸಾಧ್ಯತೆ ಇತ್ತು.

Translate »