ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಮೈದಾನದಲ್ಲಿ  ಪರಿಸರ ಗಾಯನ ಮೂಲಕ ಮರ ಹನನ ವಿರುದ್ಧ ಪ್ರತಿಭಟನೆ
ಮೈಸೂರು

ಮೈಸೂರಿನ ಲಲಿತ ಮಹಲ್ ಪ್ಯಾಲೆಸ್ ಮೈದಾನದಲ್ಲಿ ಪರಿಸರ ಗಾಯನ ಮೂಲಕ ಮರ ಹನನ ವಿರುದ್ಧ ಪ್ರತಿಭಟನೆ

April 19, 2021

ಮೈಸೂರು, ಏ.18(ಎಂಟಿವೈ)- ಹೆಲಿ ಟೂರಿಸಂ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಮೈಸೂರಿನ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಮರಕಡಿಯಲು ಉದ್ದೇಶಿ ಸಿರುವ ಕ್ರಮ ಖಂಡಿಸಿ ಭಾನುವಾರ ಲಲಿತಮಹಲ್ ಪ್ಯಾಲೆಸ್ ಮೈದಾನದಲ್ಲಿ ಪರಿಸರ ಬಳಗದ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ಪರಿಸರ ಗೀತೆ ಗಾಯನ ಮಾಡಿ ವಿನೂತನವಾಗಿ ಪ್ರತಿಭಟಿಸಿದರು.

ಲಲಿತಮಹಲ್ ಮೈದಾನದಲ್ಲಿ ಇಂದು ಬೆಳಿಗ್ಗೆ ಹಲವು ಮಂದಿ ಪರಿಸರ ಪ್ರೇಮಿ ಗಳು ಮರ ಕಡಿಯಲು ಉದ್ದೇಶಿಸಿರುವ ಕ್ರಮದಿಂದ ಹಿಂದೆ ಸರಿಯುವಂತೆ ಆಗ್ರಹಿಸಿ. ಪರಿಸರದ ಮಹತ್ವ ಸಂದೇಶ ಸಾರುವ ಫಲಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಇದೇ ವೇಳೆ ರಂಗಾಯಣದ ಮಾಜಿ ನಿರ್ದೇಶಕ ಹೆಚ್.ಜನಾರ್ಧನ್(ಜನ್ನಿ) ಹಾಗೂ ಗಾಯಕ ದೇವಾನಂದ ವರಪ್ರಸಾದ್ ಪರಿ ಸರ ಗೀತೆ ಗಾಯನ ಮಾಡಿ ಪರಿಸರ ರಕ್ಷಣೆ, ಗಿಡ-ಮರ ಬೆಳೆಸುವುದು, ವನ್ಯಜೀವಿ ಸಂರ ಕ್ಷಿಸದಿದ್ದರೆ ಎದುರಾಗುವ ಆಪತ್ತಿನ ಬಗ್ಗೆ ಗೀತೆಯ ಮೂಲಕ ವಿವರಿಸಿ ಜಾಗೃತಿ ಮೂಡಿಸಿದರು. ಈ ವೇಳೆ ಹೆಚ್.ಜನಾ ರ್ಧನ್ ಮಾತನಾಡಿ, ಮೈಸೂರಿಗೆ ಹೆಲಿ ಟೂರಿಸಂ ಮೋಜಿಗಾಗಿ ನಡೆಸುವ ಯೋಜನೆ ಯಾಗಿದೆ. ಇದಕ್ಕಾಗಿ ಹೆಲಿಪ್ಯಾಡ್ ನಿರ್ಮಾ ಣಕ್ಕೆ ನೂರಾರು ಮರ ಹನನ ಮಾಡಲು ಬಿಡಬಾರದು. ಮರಗಳ ರಕ್ಷಣೆ ಮೈಸೂರಿನ ಜನರ ಕರ್ತವ್ಯ. ಉಳ್ಳವರು ಹೆಲಿರೈಡ್ ಮಾಡಿ ಮೋಜು ಮಾಡಲು ಮರಗಳ ಹನನಕ್ಕೆ ಪ್ರಜ್ಞಾವಂತ ನಾಗರಿಕರು ಬಿಡಬಾರದು. ಅರಣ್ಯ ಇಲಾಖೆ ಮರಗಳ ರಕ್ಷಣೆಗೆ ಮುಂದಾ ಗಬೇಕು. ಯಾವುದೇ ಒತ್ತಡಕ್ಕೆ ಮಣಿದು ಮರ ಕಡಿಯಲು ಅವಕಾಶ ನೀಡಬಾರದು. ಕೆಲವೇ ಮಂದಿ ಬಳಸುವ ಹೆಲಿಟೂರಿಸಂ ಗಾಗಿ ನೂರಾರು ಮರ ಕಡಿಯಲು ಅವಕಾಶ ನೀಡಿ, ಮುಂದಿನ ಪೀಳಿಗೆಗೆ ಉಸಿ ರಾಡಲು ಪರದಾಡುವಂತೆ ಮಾಡಬಾರದು ಎಂದು ಮನವಿ ಮಾಡಿದರು.

ಪರಿಸರ ಬಳಗದ ಮುಖ್ಯಸ್ಥರಾದ ಪರುಶು ರಾಮೇಗೌಡ ಮಾತನಾಡಿ, ಕೋವಿಡ್-19 ಮಾರ್ಗಸೂಚಿ ಅನ್ವಯ ಕೇವಲ 50 ಮಂದಿಯಷ್ಟೇ ಪಾಲ್ಗೊಂಡು ಮರ, ಪರಿ ಸರ ಮಹತ್ವ ಸಾರುವ ನಿಟ್ಟಿನಲ್ಲಿ ಅಭಿ ಯಾನ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಮರ ಕಡಿಯಲು ಬಿಡಬಾರದು. ಅರಣ್ಯ ಇಲಾಖೆ ಏ.23ರಂದು ಕರೆದಿ ರುವ ಸಾರ್ವಜನಿಕ ಅಹವಾಲು ಸಭೆ ಯಲ್ಲಿ ಪರಿಸರ ಬಳಗ ಪಾಲ್ಗೊಳ್ಳಲಿದೆ. ಈಗಾಗಲೇ ಆನ್‍ಲೈನ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಪರಿಸರ ಪ್ರೇಮಿಗಳು, ಪರಿಸರ ಸಂರಕ್ಷಣೆಗಾಗಿ ಕೆಲಸ ಮಾಡುವ ಸಂಘ ಸಂಸ್ಥೆಗಳ ಸಹಕಾರವೂ ಕೇಳಲಾಗಿದೆ. ಮೈಸೂರಿನ ಪ್ರತಿಯೊಬ್ಬ ನಾಗರಿಕರೂ ಮರಗಳ ಹನನಕ್ಕೆ ವಿರೋಧಿಸಬೇಕು ಎಂದು ಕೋರಿದರು. ಪ್ರತಿಭಟನೆಯಲ್ಲಿ ಕ್ರೆಡಿಟ್-ಐ ಸಂಸ್ಥೆಯ ಡಾ.ಎಂ.ಪಿ.ಹರ್ಷ, ನಿವೃತ್ತ ಪ್ರಾಧ್ಯಾಪಕ ಪ್ರೊ.ಕಾಳಚೆನ್ನೇಗೌಡ, ಪ್ರಾಧ್ಯಾಪಕ ಡಾ.ಲಿಂಗರಾಜು, ಗಾಯಕ ಶ್ರೀಧರ್, ಹರೀಶ್, ಪ್ರಭಾ ನಂದೀಶ್ ಸೇರಿ ದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »