ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ  ಹಕ್ಕ-ಬುಕ್ಕರ ಕುರಿತ ಮತ್ತಷ್ಟು ಸಂಶೋಧನೆ ಅಗತ್ಯ: ಎಎಸ್ಪಿ ಶಿವಕುಮಾರ್ ಸಲಹೆ
ಮೈಸೂರು

ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ಹಕ್ಕ-ಬುಕ್ಕರ ಕುರಿತ ಮತ್ತಷ್ಟು ಸಂಶೋಧನೆ ಅಗತ್ಯ: ಎಎಸ್ಪಿ ಶಿವಕುಮಾರ್ ಸಲಹೆ

April 19, 2021

ಮೈಸೂರು, ಏ.18(ಆರ್‍ಕೆಬಿ)- ಹಕ್ಕ-ಬುಕ್ಕರ ಇತಿಹಾಸದ ಕುರಿತು ಮತ್ತಷ್ಟು ಸಂಶೋಧನೆ ನಡೆಸಬೇಕಾಗಿದೆ ಎಂದು ಮೈಸೂರು ಜಿಲ್ಲಾ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಆರ್.ದಂಡಿನ ಸಲಹೆ ನೀಡಿದರು.

ಮೈಸೂರಿನ ಜೆಎಲ್‍ಬಿ ರಸ್ತೆ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಯೋಜಿಸಿದ್ದ ನಾಯಕ ರತ್ನಗಳಾದ ಹಕ್ಕ-ಬುಕ್ಕರ ವಿಜಯ ನಗರ ಸಾಮ್ರಾಜ್ಯ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿ ದರು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆ, ಹಂಪಿಯ ಬಗ್ಗೆ ಸಂಶೋಧನೆಗಳು ನಡೆದಿರುವಷ್ಟು ಬೇರೆ ಯಾರ ಆಡಳಿತ ಬಗ್ಗೆಯೂ ನಡೆದಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಪದಕ ಪುರಸ್ಕøತ ಮಲ್ಲೇಶ್, ಹೆಚ್.ಡಿ.ಕೋಟೆ ಠಾಣೆ ಎಎಸ್‍ಐ ದೊರೆಸ್ವಾಮಿ, ಚಿಂತಕ ಡಾ.ಬಂಡಳ್ಳಿ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಕೆ.ಮಹದೇವನಾಯಕ, ವಾಣಿಜ್ಯ ಇಲಾಖೆ ಉಪ ಆಯುಕ್ತ ಹೆಚ್.ಎಸ್.ಮಂಜುನಾಥ್, ಕೆ.ಜೆ.ಶ್ರೀಧರ ನಾಯಕ, ದೇವರಾಜ ಸಂಚಾರ ಠಾಣೆ ಇನ್ಸ್‍ಪೆಕ್ಟರ್ ಮುನಿಯಪ್ಪ, ಸಿದ್ದಾರ್ಥನಗರ ಠಾಣೆ ಇನ್ಸ್‍ಪೆಕ್ಟರ್ ಬಸವ ರಾಜು, ತೆರಕಣಾಂಬಿ ವೈದ್ಯಾಧಿಕಾರಿ ಡಾ.ಸೋಮಣ್ಣ, ವೇದಿಕೆ ರಾಜ್ಯ ಉಪಾಧ್ಯಕ್ಷ ಎಸ್. ಸಿದ್ದಯ್ಯ, ಜಿಲ್ಲಾಧ್ಯಕ್ಷ ಶ್ರೀಧರ್ ಚಾಮುಂಡಿಬೆಟ್ಟ, ಪದಾಧಿಕಾರಿಗಳಾದ ರಾಜು ಮಾರ್ಕೆಟ್, ಕೆರೆಹಳ್ಳಿ ಮಾದೇಶ್, ಹೆಚ್.ಆರ್.ಪ್ರಕಾಶ್, ರಘು ಯಡಕೊಳ, ಮುಖಂಡರಾದ ಟಿ.ಟಿ. ಮಂಜುನಾಥ್, ಶಿವು, ಜವರಪ್ಪ, ಮಯೂರ, ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.

Translate »