ಅರಸು ಜಿಮ್‍ಖಾನ ಕ್ಲಬ್ ಅಧ್ಯಕ್ಷರಾಗಿ ಮೋಹನ್‍ರಾಜೇ ಅರಸು
ಮೈಸೂರು

ಅರಸು ಜಿಮ್‍ಖಾನ ಕ್ಲಬ್ ಅಧ್ಯಕ್ಷರಾಗಿ ಮೋಹನ್‍ರಾಜೇ ಅರಸು

July 6, 2018

ಮೈಸೂರು: ಮೈಸೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅರಸು ಜಿಮ್‍ಖಾನ ಕ್ಲಬ್ ಅಧ್ಯಕ್ಷರಾಗಿ ಮೋಹನ್ ರಾಜೇ ಅರಸು ಆಯ್ಕೆಯಾಗಿದ್ದಾರೆ.

ಕ್ಲಬ್‍ನ ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ಜೂನ್ 24ರಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆಯಾಗಿದ್ದು, ಉಳಿದಂತೆ ಉಪಾಧ್ಯಕ್ಷರಾಗಿ ಎಂ.ಎ.ಶ್ರೀಕಾಂತರಾಜೇ ಅರಸು, ಕಾರ್ಯದರ್ಶಿಯಾಗಿ ಅಜೇಯ ಬಸಪ್ಪಾಜಿ ಅರಸು, ಖಜಾಂಚಿಯಾಗಿ ಅರುಣ್ ಕುಮಾರ್ ರಾಜೇ ಅರಸು, ಸಮಿತಿ ಸದಸ್ಯರಾಗಿ ಆರ್.ಎನ್.ವಿಶ್ವಾಸ ಅರಸು, ರಾಮಚಂದ್ರರಾಜೇ ಅರಸು ಎಸ್.(ಅಶೋಕ್), ವೈ.ಎಂ.ಕಿರಣ್, ಎನ್.ಎಸ್.ದಾಸರಾಜೇ ಅರಸು (ಉದಯ್) ಮತ್ತು ನಂದಗೋಪಾಲ ರಾಜೇ ಅರಸು ಆಯ್ಕೆಯಾಗಿದ್ದಾರೆ ಎಂದು ಕ್ಲಬ್‍ನ ಪ್ರಕಟಣೆ ತಿಳಿಸಿದೆ.

Translate »