ಅಕ್ರಮ ಮಾಂಸದ ಅಂಗಡಿಗೆ ಬೀಗ
ಮೈಸೂರು

ಅಕ್ರಮ ಮಾಂಸದ ಅಂಗಡಿಗೆ ಬೀಗ

July 6, 2018

ಬೆಟ್ಟದಪುರ: ಅಕ್ರಮವಾಗಿ ನಡೆಸುತ್ತಿದ್ದ ಮಾಂಸದ ಅಂಗಡಿಗಳನ್ನು ಪಿಡಿಓ ನೇತೃತ್ವದಲ್ಲಿ ಬಾಗಿಲು ಮುಚ್ಚಿಸಿದ ಘಟನೆ ನಡೆದಿದೆ.

ಬೆಟ್ಟದಪುರ ಗ್ರಾಮದಲ್ಲಿ ಗ್ರಾಮಪಂಚಾಯಿತಿ ವತಿಯಿಂದ ಮಾಂಸದ ಅಂಗಡಿಗಳನ್ನು ನಡೆಸಲು ಹರಾಜು ಮಾಡಲಾಗಿತ್ತು. ಹರಾಜಿನ ಸಮಯ ಮುಗಿದಿದ್ದು ನವೀಕರಣ ಮಾಡಿಕೊಂಡು ಹಣ ಪಾವತಿ ಮಾಡದೆ ಅಕ್ರಮವಾಗಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ದಾಳಿ ಮಾಡಿದ ಪಿಡಿಓ ಚಿದಾನಂದ್ ಮತ್ತು ಸಿಬ್ಬಂದಿ ಅಂಗಡಿಗಳಿಗೆ ಬೀಗ ಜಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಓ ಚಿದಾ ನಂದ್. ಪಂಚಾಯಿತಿ ಒಪ್ಪಂದದಂತೆ ಪ್ರತಿವರ್ಷವೂ ಹಣ ಪಾವತಿ ಮಾಡಿ ಅಂಗಡಿ ನಡೆಸಲು ನವೀಕರಿಸಿ ಕೊಳ್ಳಬೇಕಿತ್ತು. ಕಳೆದ ವರ್ಷ ವ್ಯಾಪಾರ ಆರಂಭಿಸಿದ ಹಲವು ಅಂಗಡಿಗಳು ಈ ವರ್ಷಕ್ಕೆ ನವೀಕರಣ ಮಾಡಿಕೊಳ್ಳದೆ ಪಂಚಾಯಿತಿ ಗಮನಕ್ಕೆ ಬಾರದಂತೆ ಅಕ್ರಮವಾಗಿ ವ್ಯಾಪಾರ ನಡೆಸುತ್ತಿರುವ ಬಗ್ಗೆ ಸಾರ್ವ ಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬೀಗ ಹಾಕಲಾಗಿದೆ. ನಿಗದಿಪಡಿಸಿದ ಹಣ ಪಾವತಿ ಮಾಡುವವರೆಗೆ ಮಾಂಸ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಇಕ್ಬಾಲ್ ಷರೀಫ್, ಗ್ರಾ.ಪಂ.ಮಾಜಿ ಸದಸ್ಯ ಮುನಾವರ್‍ಪಾಷ ಮತ್ತು ಪೊಲೀಸ್ ಇಲಾಖೆಯ ಎಎಸ್‍ಐ ರುದ್ರೇಗೌಡ, ಮತ್ತು ಬಿಲ್‍ಕಲೆಕ್ಟರ್ ಮಂಜೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »