ಬ್ಯಾಂಕ್ ನೆರವಿನಿಂದ ದುರ್ಬಲರ ಸಬಲತೆ
ಮೈಸೂರು

ಬ್ಯಾಂಕ್ ನೆರವಿನಿಂದ ದುರ್ಬಲರ ಸಬಲತೆ

July 6, 2018

ತಿ.ನರಸೀಪುರ: ಸಣ್ಣ ಪ್ರಮಾಣದಲ್ಲಿ ದುಡಿಯುವ ರೈತ ವರ್ಗ ಹಾಗೂ ವ್ಯಾಪಾರಗಳಿಗೆ ಉಜ್ಜೀವನ್ ಬ್ಯಾಂಕ್ ಅಗತ್ಯ ಆರ್ಥಿಕ ನೆರವು ದೊರಕಿಸಿ ದರೆ ದುರ್ಬಲ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಡಾ. ನಂಜೇಶ್ ತಿಳಿಸಿದರು.

ಪಟ್ಟಣದ ಜೋಡಿ ರಸ್ತೆಯಲ್ಲಿರುವ ಮಹ ದೇಶ್ವರ ಪ್ಲಾಜಾ (ವಜ್ರೇಗೌಡ ಕಾಂಪ್ಲೆಕ್ಸ್) ದಲ್ಲಿ ಪ್ರಾರಂಭಗೊಂಡ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶಾಖಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಬ್ಯಾಂಕ್‍ಗಳಲ್ಲಿ ದೊಡ್ಡ ಪ್ರಮಾಣದ ಉದ್ಯಮ ವ್ಯವಹಾರ ನಡೆಸುವ ಜನರಿಗೆ ಸುಲಭವಾಗಿ ಆರ್ಥಿಕ ಸಾಲ ಸೌಲಭ್ಯ ಸಿಗುತ್ತದೆ. ಆದರೆ ಸಣ್ಣ ಹಾಗೂ ಮಧ್ಯಮ ವರ್ಗದವರಿಗೆ ಸುಲಭವಾಗಿ ಯಾವುದೇ ನೆರವು ಸಿಗುವುದಿಲ್ಲ. ಅಂತಹ ವರ್ಗದ ಜನರನ್ನು ಗುರುತಿಸಿ ಸವಲತ್ತು ನೀಡಲು ರಿಸರ್ವ್ ಬ್ಯಾಂಕ್ ಇಂತಹ ಸಂಸ್ಥೆ ಹಾಗೂ ಬ್ಯಾಂಕ್‍ಗಳಿಗೆ ಅನುಮತಿ ನೀಡಿದೆ. ಸಾರ್ವಜನಿಕರು ಬ್ಯಾಂಕಿನಿಂದ ಸಿಗುವ ಸವಲತ್ತು ಗಳನ್ನು ಬಳಸಿಕೊಂಡು ಆರ್ಥಿಕ ಸಬಲತೆ ಕಾಣುವಂತೆ ಸಲಹೆ ಮಾಡಿದರು.

ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ. ವಜ್ರೇಗೌಡ ಮಾತನಾಡಿ, ಸಣ್ಣದಾಗಿ ಆರಂಭಗೊಂಡ ಉಜ್ಜೀವನ್ ಸಂಸ್ಥೆ ಇಂದು ಬ್ಯಾಂಕ್ ವಹಿವಾಟು ನಡೆಸುವ ಮಟ್ಟಿಗೆ ಬೆಳೆದಿದೆ. ಗ್ರಾಹಕರು ಇದನ್ನು ಬೆಳೆಸಿ ದ್ದಾರೆ. ಬ್ಯಾಂಕ್‍ನ ಆಡಳಿತ ಸಾರ್ವಜನಿ ಕರಿಗೆ ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸುವಂತೆ ಸಲಹೆ ಮಾಡಿದರು.

ವಿತರಣಾ ವ್ಯವಸ್ಥಾಪಕ ರವಿಚಂದ್ರನ್ ಮಾತನಾಡಿದರು. ಸ್ಥಳೀಯ ಶಾಖಾ ವ್ಯವಸ್ಥಾಪಕ ಕೆ. ಮುಸ್ತಾಫ, ಬಿಜೆಪಿ ರಾಜ್ಯ ಕಾರ್ಯಕಾರಿಣ ಸದಸ್ಯ ತೋಟದಪ್ಪ ಬಸವರಾಜು, ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಪ್ರದೀಪ್ ರಾಜ್, ವಲಯಾಧಿಕಾರಿ ಸುರೇಶ್ ಪೂಜಾರಿ, ಸಿ.ಕೆ. ಯೊಗೇಶ್, ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕಿ ಸುನಿತಾ, ಪಪಂ ಮಾಜಿ ಅಧ್ಯಕ್ಷ ವಿರೇಶ್, ಗರ್ಗೆಶ್ವರಿ ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಸ್ರೂರ್, ಮುಖಂಡರಾದ ಗರ್ಗೆಶ್ವರಿ ನಂಜುಂಡೇಗೌಡ, ಕಿಟ್ಟಣ್ಣ, ಮುಜರಾಯಿ ಕಿರಣ್ ಮತ್ತಿತರರು ಇದ್ದರು.

Translate »