ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರ ‘ಆರೋಗ್ಯ ಭಾಗ್ಯ ಯೋಜನೆ’ ರೂಪಿಸಿ 10 ಕೋಟಿ ರೂ. ಮಂಜೂರು ಮಾಡಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಮೈಸೂರು-ಚಾಮರಾಜನಗರ ಘಟಕದ ಅಧ್ಯಕ್ಷ ಎಂ.ಸಿ.ಮರಿಸ್ವಾಮಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಜ್ಯದಲ್ಲಿ ತಾವು ನೆಲೆಸಿರುವ ಜಿಲ್ಲೆ ಮತ್ತು ನಗರದಲ್ಲಿರುವ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಸದಸ್ಯತ್ವ ಪಡೆದು, ಮಾಸಿಕ ವಂತಿಗೆ ಪಾವತಿ ಮಾಡುವ…
ರೇಸ್‍ಕೋರ್ಸ್ ಸ್ಥಳಾಂತರ ಪ್ರಸ್ತಾಪಕ್ಕೆ ಸ್ವಾಗತ
June 23, 2018ಮೈಸೂರು: ರೇಸ್ ಕೋರ್ಸ್ ಸ್ಥಳಾಂತರಿಸಿ ಅಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಬೇಕೆನ್ನುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ಪ್ರಸ್ತಾಪ ಸೂಕ್ತವಾಗಿದ್ದು, ಇದನ್ನು ಕರ್ನಾಟಕ ಕನ್ನಡ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಅಧ್ಯಕ್ಷ ಸುರೇಶ್‍ಬಾಬು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಮಾತನಾಡಿದ ಅವರು, ರೇಸ್ ಕೋರ್ಸ್ ಸ್ಥಳಾಂತರ ಸೂಕ್ತವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಈ ಹಿಂದೆಯೂ ಮುಖ್ಯಮಂತ್ರಿ ಆಗಿದ್ದ ವೇಳೆಯಲ್ಲಿ ಲಾಟರಿ ಮತ್ತು ಸಾರಾಯಿ ನಿಷೇಧ ಮಾಡಿದ್ದರು. ಅದೇ ರೀತಿ ರೇಸ್ ಕೋರ್ಸ್ ವ್ಯವಸ್ಥೆಗೆ ನಿಷೇಧ ತರುವಂತಹ…
ರಾಜಪಥ ರಸ್ತೆ ಬ್ಯಾರಿಕೇಡ್‍ಗೆ ಕಳಪೆ ಕಲ್ಲು ಬಳಕೆ ಆರೋಪ: ಡಿಸಿ ಆಫೀಸ್ ಬಳಿ ಏಕಾಂಗಿ ಪ್ರತಿಭಟನೆ
June 23, 2018ಮೈಸೂರು: ರಾಜಪಥದ ರಸ್ತೆಯ ಇಕ್ಕೆಲಗಳ ಬ್ಯಾರಿಕೇಡ್‍ಗೆ ಕಳಪೆ ಕಲ್ಲು ಬಳಸಲಾಗಿದೆ ಎಂದು ಆರೋಪಿಸಿ ಎಲೆಕ್ಟ್ರಿಕಲ್ ನಾಗರಾಜು ಎಂಬುವರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಏಕಾಂಗಿ ಪ್ರತಿಭಟನೆ ನಡೆಸಿದರು. ರಾಜಪಥದ ಹೆಸರಲ್ಲಿ ಕಳಪೆ ಕಲ್ಲಿನಿಂದ ತಡೆಗೋಡೆ ನಿರ್ಮಿಸಿರುವುದಲ್ಲದೆ, ಫುಟ್‍ಪಾತ್‍ಗೆ ಕಡಿಮೆ ಗುಣಮಟ್ಟದ ಟೈಲ್ಸ್‍ಗಳನ್ನು ಹಾಕಿರುವುದರಿಂದ ಮೂರೇ ವರ್ಷಕ್ಕೆ ಅಲ್ಲಲ್ಲಿ ಕಲ್ಲಿನ ಬ್ಯಾರಿಕೇಡ್‍ಗಳು ಮುರಿದು ಬಿದ್ದಿದ್ದು, ಪಾದಚಾರಿ ರಸ್ತೆಯಲ್ಲಿ ಗುಂಡಿಗಳು ಬಿದ್ದು ಓಡಾಡಲು ತೊಂದರೆಯಾಗುತ್ತಿದೆ ಎಂದು ನಾಗರಾಜು ಆರೋ ಪಿಸಿದರು. ಕಾಮಗಾರಿ ಹೆಸರಲ್ಲಿ ಸಾರ್ವಜನಿಕ ತೆರಿಗೆ ಹಣ ದುರುಪಯೋಗವಾಗಿದೆ….
ಬೌದ್ಧಿಕ ಸಾಮಥ್ರ್ಯ ವೃದ್ಧಿಸುತ್ತದೆ ಖ್ಯಾತ ವಯೋಲಿನ್ ವಾದಕ ಡಾ.ಮೈಸೂರು ಮಂಜುನಾಥ್
June 23, 2018ಮೈಸೂರು: ಎಲ್ಲರೂ ಸಂಗೀತ ಕಲಿಯಲು ಸಾಧ್ಯವಿಲ್ಲದಿರಬಹುದು. ಆದರೆ ಸಂಗೀತವನ್ನು ಆಸ್ವಾದಿಸಬಹುದು. ಸಂಗೀತದಿಂದ ಮೈಮನಗಳೂ ಉಲ್ಲಸಿತವಾಗುತ್ತವೆ ಎಂದು ಅಂತರರಾಷ್ಟ್ರೀಯ ಖ್ಯಾತಿಯ ವಯೋಲಿನ್ ವಾದಕರಾದ ಡಾ. ಮೈಸೂರು ಮಂಜುನಾಥ್ ಅಭಿಪ್ರಾಯಪಟ್ಟರು. ಮೈಸೂರಿನ ಕುವೆಂಪುನಗರ ಸರ್ಕಾರಿ ಶಾಲೆಯಲ್ಲಿ ನಡೆದ ವಿಶ್ವ ಸಂಗೀತ ದಿನಾಚರಣೆಯಲ್ಲಿ ಅವರು ಮಾತನಾಡಿ, ಸಂಗೀತ ಆಲಿಕೆ ಸಂಸ್ಕಾರವನ್ನು ತಂದುಕೊಡುತ್ತದೆ. ಸಂಗೀತ ಕಲಿಕೆಯಿಂದ ವಿದ್ಯಾರ್ಥಿಗಳ ಬೌದ್ಧಿಕ ಸಾಮಥ್ರ್ಯವೂ ವೃದ್ಧಿಸುತ್ತದೆ. ಸಮಾಜದಲ್ಲಿ ಹೆಚ್ಚು ಗೌರವ ಸಿಗುವಂತಾಗುತ್ತದೆ ಎಂದರು. ಶಾಸ್ತ್ರೀಯ ಹಿಂದೂಸ್ಥಾನಿ ಸಂಗೀತದಲ್ಲಿ ಖ್ಯಾತ ಗಾಯಕ ಭೀಮ್‍ಸೇನ್ ಜೋಷಿಯವರ ಸಂಗೀತ ಕೇಳುವುದೇ ಒಂದು…
ಇಂದಿನಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ
June 23, 2018ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮಹೋತ್ಸವವು ಜೂ.23ರಿಂದ 25ರವರೆಗೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ. ಜೂ.23ರಂದು ಸಂಜೆ 6 ಗಂಟೆಗೆ ಮಂಗಳವಾದ್ಯಗಳೊಡನೆ ಆಲಯ ಪ್ರವೇಶ, ಅನುಜ್ಞೆ, ಗಣಪತಿ ಪೂಜೆ, ಋತ್ವಿಕ್ ವರುಣ, ಪ್ರವೇಶಬಲಿ, ರಕ್ಷೋಘ್ನ ಪೂಜೆ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಪರಗ್ನಿಕರಂ ಮತ್ತು ಅಂಕುರಾರ್ಪಣೆ ನಡೆಯಲಿದೆ. ಜೂನ್ 24ರಂದು ಬೆಳಿಗ್ಗೆ 8 ಗಂಟೆಗೆ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಬಿಂಬಶುದ್ಧಿ, ನೇತ್ರೋನ್ಮಿಲನ ರಕ್ಷಾಬಂಧನ,…
ಸುಗ್ರಾಮ ಸದಸ್ಯರಿಗೆ ಸಂವಾದ ಕಾರ್ಯಕ್ರಮ
June 23, 2018ಹೆಚ್.ಡಿ.ಕೋಟೆ: ಓಡಿಪಿ ಸಂಸ್ಥೆ ಹಾಗೂ ತಾಲೂಕು ಪಂಚಾ ಯಿತಿ ವತಿಯಿಂದ ಸುಗ್ರಾಮ ಸದಸ್ಯರಿಗೆ (ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು) ಶುಕ್ರವಾರ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ತಾಲೂಕು ಪಂಚಾ ಯಿತಿ ಆವರಣದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಇಓ ಶ್ರೀಕಂಠರಾಜೇ ಅರಸ್ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ಮತ್ತು ಅಧ್ಯಕ್ಷರುಗಳು ಗ್ರಾಮಗಳಲ್ಲಿನ ಸಮಸ್ಯೆ ಗಳನ್ನು ಆಲಿಸಿ ಆ ಸಮಸ್ಯೆಗಳನ್ನು ಬಗೆಹರಿ ಸುವ ದೃಷ್ಠಿಯಿಂದ ಪ್ರಾಮಾಣ ಕವಾಗಿ ಕಾರ್ಯನಿರ್ವಹಿಸಬೇಕು. ಹಣಕಾಸು ವಿಚಾರವಾಗಿ ಕಾನೂನಿನ ನೀತಿ ನಿಯಮ ಗಳ ಅನುಗುಣವಾಗಿ ಕಾಮಗಾರಿಗಳನ್ನು…
ಕಲ್ಲು ಮಿಶ್ರಿತ ಮರಳು ಸಾಗಾಣೆಗೆತ್ನಿಸಿದ ಲಾರಿ ಚಾಲಕನಿಗೆ ರೈತರ ಗೂಸಾ ನಂಜನಗೂಡು ಬಳಿ ಅಳಗಂಚಿಪುರದಲ್ಲಿ ಘಟನೆ
June 23, 2018ನಂಜನಗೂಡು: ಅಕ್ರಮವಾಗಿ ಕಲ್ಲು ಮಿಶ್ರಿತ ಮರಳು ಸಾಗಾಣೆ ಮಾಡುತ್ತಿದ್ದ ಲಾರಿ ಚಾಲಕನನ್ನು ಹಿಡಿದು ರೈತರು ಗೂಸಾ ನೀಡಿರುವ ಘಟನೆ ನಂಜನಗೂಡು ತಾಲೂಕು ಅಳಗಂಚಿ ಪುರದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗ್ರಾಮದ ಬಳಿಯ ಕಬಿನಿ ಬಲದಂಡೆ ನಾಲೆಯಲ್ಲಿ ಅಕ್ರಮವಾಗಿ ಕಲ್ಲು ಮಿಶ್ರಿತ ಮರಳನ್ನು ಸಾಗಿಸುವ ದಂಧೆ ನಡೆಯು ತ್ತಿತ್ತು. ಇಂದು ಬೆಳಿಗ್ಗೆ ಲಾರಿಯಲ್ಲಿ ಮರಳು ತುಂಬಿಕೊಂಡು ಸಾಗಿಸಲೆತ್ನಿದಾಗ ವಿದ್ಯಾಸಾಗರ್ ಎಂಬುವರ ನೇತೃತ್ವದಲ್ಲಿ ರೈತ ಮುಖಂಡರು ದಾಳಿ ನಡೆಸಿ, ಲಾರಿ ಚಾಲಕ ಚೆಲುವರಾಜು ಎಂಬುವನನ್ನು ಹಿಡಿದು ಥಳಿಸಿದರು. ಆ ವೇಳೆ…
ಶರತ್ ಮಡಿವಾಳ ಹತ್ಯೆ: ಆರೋಪಿ ಮಹಮದ್ ಷರೀಫ್‍ಗೆ ಹೈಕೋರ್ಟ್ ಜಾಮೀನು
June 23, 2018ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತನಾಗಿದ್ದ ಶರತ್ ಮಡಿವಾಳ ಹತ್ಯೆಯ ಪ್ರಮುಖ ಆರೋಪಿ ಮಹಮದ್ ಷರೀಫ್‍ಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಜಾನ್ ಮೈಕಲ್ ಕುನ್ಹಾ ಅವರ ಏಕಸದಸ್ಯ ಪೀಠ ಜಾಮೀನು ಅರ್ಜಿ ವಿಚಾರಣೆ ನಡೆಸಿ, ತೀರ್ಪು ಪ್ರಕಟಿಸಿದೆ. 2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಸೇರಿದಂತೆ ಇನ್ನಿತರೆ ಷರತ್ತುಗಳ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ ಎಂದು ವರದಿಯಾಗಿದೆ. ಆರೊಪಿಗಳ ವಿರುದ್ಧ ಸಮರ್ಪಕ ಸಾಕ್ಷಾಧಾರ ಸಂಗ್ರಹಣೆ ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಹತ್ಯೆ…
ವಿಶ್ವ ಯೋಗ ದಿನಾಚರಣೆ
June 23, 2018ಮೈಸೂರು: ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ರಾಣಿ ಅವರು, ಯೋಗ ಮಾಡುವುದರಿಂದ ರೋಗ ಮುಕ್ತರಾಗಬಹುದು. ಇಂದಿನ ಆಧುನಿಕ ಯುಗದಲ್ಲಿ ಒತ್ತಡದಿಂದ ತುಂಬಿರುವ ಜೀವನದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಮಾನವ ಜನಾಂಗ ಕುಗ್ಗಿ ಹೋಗುತಿದ್ದು, ಯೋಗ ಮತ್ತು ಧ್ಯಾನ ಮಾಡುವುದರಿಂದ ಎಲ್ಲದರಿಂದಲೂ ಮುಕ್ತಿ ಸಿಗುತ್ತದೆ. ಇಂದಿನ ಆಹಾರ ಪದ್ದತಿ ಹಲವು ರೋಗಗಳಿಗೆ ಮೂಲ ವಾಗಿರುವುದರಿಂದ ಯೋಗದಿಂದ ಮಾತ್ರ ಇದಕ್ಕೆ ಪರಿಹಾರ ಸಿಗುತ್ತದೆ…
ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ
June 23, 2018ಮೈಸೂರು: ಎರಡು ಲಾರಿಗಳು ಹಾಗೂ ಆಟೋ ನಡುವೆ ಸಂಭವಿಸಿದ ಸರಣ ಅಪಘಾತದಲ್ಲಿ ಲಾರಿ ಚಾಲಕನೋರ್ವ ಗಾಯಗೊಂಡಿರುವ ಘಟನೆ ಮೈಸೂರು ಹೈವೇ ವೃತ್ತದ ಸಮೀಪದ ಗಾಯತ್ರಿ ಕಲ್ಯಾಣ ಮಂಟಪದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ‘ಬನ್ನಿಮಂಟಪದ ಕಡೆಯಿಂದ ಆರ್‍ಎಂಸಿ ಕಡೆಗೆ ಸಾಗುತ್ತಿದ್ದ ಲಾರಿ(ಕೆಎ02 ಎಎ5515)ಗೆ ಎದುರಿಗೆ ಬರುತ್ತಿದ್ದ ವಿಆರ್‍ಎಲ್ ಸಂಸ್ಥೆಯ ಲಾರಿ(ಕೆಎ25 6265) ಡಿಕ್ಕಿ ಹೊಡೆದಿದೆ. ನಂತರ ಅದೇ ಲಾರಿ ಆಟೋಗೆ ಗುದ್ದಿದೆ. ಪರಿಣಾಮ ಮೂರು ವಾಹನಗಳ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ವಿಆರ್‍ಎಲ್ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು,…