ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ
ಮೈಸೂರು

ಸರಣಿ ಅಪಘಾತ: 2 ಲಾರಿ, ಆಟೋ ಜಖಂ ಓರ್ವ ಚಾಲಕನಿಗೆ ಗಾಯ

June 23, 2018

ಮೈಸೂರು: ಎರಡು ಲಾರಿಗಳು ಹಾಗೂ ಆಟೋ ನಡುವೆ ಸಂಭವಿಸಿದ ಸರಣ ಅಪಘಾತದಲ್ಲಿ ಲಾರಿ ಚಾಲಕನೋರ್ವ ಗಾಯಗೊಂಡಿರುವ ಘಟನೆ ಮೈಸೂರು ಹೈವೇ ವೃತ್ತದ ಸಮೀಪದ ಗಾಯತ್ರಿ ಕಲ್ಯಾಣ ಮಂಟಪದ ಬಳಿ ಶುಕ್ರವಾರ ರಾತ್ರಿ ನಡೆದಿದೆ.

‘ಬನ್ನಿಮಂಟಪದ ಕಡೆಯಿಂದ ಆರ್‍ಎಂಸಿ ಕಡೆಗೆ ಸಾಗುತ್ತಿದ್ದ ಲಾರಿ(ಕೆಎ02 ಎಎ5515)ಗೆ ಎದುರಿಗೆ ಬರುತ್ತಿದ್ದ ವಿಆರ್‍ಎಲ್ ಸಂಸ್ಥೆಯ ಲಾರಿ(ಕೆಎ25 6265) ಡಿಕ್ಕಿ ಹೊಡೆದಿದೆ. ನಂತರ ಅದೇ ಲಾರಿ ಆಟೋಗೆ ಗುದ್ದಿದೆ. ಪರಿಣಾಮ ಮೂರು ವಾಹನಗಳ ಮುಂಭಾಗ ಜಖಂಗೊಂಡಿದೆ. ಘಟನೆಯಲ್ಲಿ ವಿಆರ್‍ಎಲ್ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಎನ್‍ಆರ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »