ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ: ಸವಾರ ಸಾವು
ಮೈಸೂರು

ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ: ಸವಾರ ಸಾವು

June 23, 2018

ಬೆಟ್ಟದಪುರ:  ಬೈಕ್‍ಗೆ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಪಿರಿಯಾ ಪಟ್ಟಣ ತಾಲೂಕು ರಾಗಿಆಲದಮರ ಗ್ರಾಮದಲ್ಲಿ ನಡೆದಿದೆ.

ಕೋಳಿಮನೆ ಗ್ರಾಮದ ರಮೇಶ್ ಅವರ ಮಗ ಸಂತೋಷ್ (25) ಅಪಘಾತದಲ್ಲಿ ಸಾವನ್ನಪ್ಪಿದವನಾಗಿದ್ದು, ಈತ ಬೆಟ್ಟದಪುರದಿಂದ ಕುಶಾಲನಗರ ರಸ್ತೆಯಲ್ಲಿರುವ ತನ್ನ ಮನೆ ಕೋಳಿಮನೆ ಗ್ರಾಮಕ್ಕೆ ಹೋಗುವ ವೇಳೆ ಪಿರಿಯಾಪಟ್ಟಣದಿಂದ ಮಂಟಿಬಿಳಗುಲಿ ಗ್ರಾಮದ ಮಾರ್ಗವಾಗಿ ಬರುತ್ತಿದ್ದ ಬಸ್ಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸಂತೋಷ್ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಂಬುಲೆನ್ಸ್‍ನಲ್ಲಿ ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತ ಪಟ್ಟಿದ್ದಾನೆ.

ಅಪಘಾತ ಸ್ಥಳದಲ್ಲಿ ರಸ್ತೆ ತಿರುವು ಇರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಲೇ ಇವೆ ಎಂದು ರಾಗಿಆಲದಮರ ಗ್ರಾಮದ ಮತ್ತು ಅಕ್ಕಪಕ್ಕದ ಜನರು ದೂರಿದ್ದಾರೆ. ಮೃತ ಸಂತೋಷ್ 3 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದು, ಕುಟಂಬದ ದುಃಖ ಮುಗಿಲು ಮುಟ್ಟಿತು.

ಸ್ಥಳಕ್ಕೆ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್‍ಐ ಡಿ.ಆರ್. ಜಯಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಎರಡು ವಾಹನಗಳು ಪೊಲೀಸ್ ಠಾಣೆಯ ವಶದಲ್ಲಿವೆ. ಮೃತ ಸಂತೋಷ್ ಪತ್ನಿ ಸರಸಮ್ಮ, ತಾಯಿ ಪುಟ್ಟತಾಯಮ್ಮ, ತಂದೆ ರಮೇಶ್ ಹಾಗೂ ಸಂಬಂಧಿಕರನ್ನು ಅಗಲಿದ್ದಾನೆ.

Translate »