ಇಂದಿನಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ
ಮೈಸೂರು

ಇಂದಿನಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ

June 23, 2018

ಮೈಸೂರು: ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ ಮಹೋತ್ಸವವು ಜೂ.23ರಿಂದ 25ರವರೆಗೆ ನಡೆಯಲಿದೆ ಎಂದು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.23ರಂದು ಸಂಜೆ 6 ಗಂಟೆಗೆ ಮಂಗಳವಾದ್ಯಗಳೊಡನೆ ಆಲಯ ಪ್ರವೇಶ, ಅನುಜ್ಞೆ, ಗಣಪತಿ ಪೂಜೆ, ಋತ್ವಿಕ್ ವರುಣ, ಪ್ರವೇಶಬಲಿ, ರಕ್ಷೋಘ್ನ ಪೂಜೆ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಹೋಮ, ಪರಗ್ನಿಕರಂ ಮತ್ತು ಅಂಕುರಾರ್ಪಣೆ ನಡೆಯಲಿದೆ. ಜೂನ್ 24ರಂದು ಬೆಳಿಗ್ಗೆ 8 ಗಂಟೆಗೆ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಬಿಂಬಶುದ್ಧಿ, ನೇತ್ರೋನ್ಮಿಲನ ರಕ್ಷಾಬಂಧನ, ಜಲಾಧಿವಾಸ, ಕಲಶ ಸ್ಥಾಪನೆ, ಅಗ್ನಿಪ್ರತಿಷ್ಠೆ, ಜಪ, ಪಾರಾಯಣ, ಹೋಮ ಮಂಗಳಾರತಿ ಸಂಜೆ ಕಲಶ ಪೂಜೆ ಹೋಮಾದಿಗಳು ಶಯ್ಯಾಧಿವಾಸ, ಅಷ್ಠಾವದಾನ ಸೇವೆ, ಸ್ಪರ್ಶಾಹೋಮ, ರತ್ನನ್ಯಾಸ ನಡೆಯಲಿದೆ. ಜೂನ್ 25ರಂದು ಪ್ರಾತಃಕಾಲ ಜೀವನ್ಯಾಸ, ತತ್ವನ್ಯಾಸ, ಪ್ರಾಣ ಪ್ರತಿಷ್ಠೆ, ಮೂಲಹೋಮ, ಕಲಶಾರ್ಚನೆ, ನಾಡಿ ಸಂಧಾನ, ಕಲಾತತ್ವ ಹೋಮ, ಪೂರ್ಣಾಹುತಿ, ದಶಾದಾನ, ಕುಂಭಾಭಿಷೇಕ, ಯಾಗ ಫಲ ಸ್ವೀಕಾರ, ಆಶೀರ್ವಾದ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »