ತುಂಬಿದ ಕೆರೆಗಳಿಗೆ ಮೀನು ಮರಿಗಳನ್ನು ಬಿಡಿ
ಹಾಸನ

ತುಂಬಿದ ಕೆರೆಗಳಿಗೆ ಮೀನು ಮರಿಗಳನ್ನು ಬಿಡಿ

June 23, 2018

ಹಾಸನ: ತಾಲೂಕಿನ ಯಾವ ಕೆರೆಗಳಲ್ಲಿ ನೀರು ಬಂದಿದೆ ಎಂಬುದನ್ನು ಗಮನಿಸಿ ಕೂಡಲೇ ಮೀನುಗಾರಿಕೆ ಇಲಾಖೆ ಮೀನು ಮರಿಗಳನ್ನು ಬಿಡಲು ಮುಂದಾ ಗಬೇಕು ಎಂದು ತಾಪಂ ಅಧ್ಯಕ್ಷ ಬಿ.ಟಿ. ಸತೀಶ್ ನಿರ್ದೇಶಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ತಿಂಗಳಿನಿಂದ ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿದ್ದು, ಈಗಾಗಲೇ ಅನೇಕ ಕೆರೆಗಳು ತುಂಬಿದ್ದರೆ, ಉಳಿದ ಕೆರೆಗಳು ಅರ್ಧಕ್ಕಿಂತ ಹೆಚ್ಚು ಭರ್ತಿ ಯಾಗಿವೆ. ಅಂತಹ ಕೆರೆಗಳನ್ನು ಪರಿಶೀಲಿಸಿ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಮೀನು ಮರಿಗಳನ್ನು ಬಿಡಬೇಕು ಎಂದರು.

ಹೇಮಾವತಿ ಜಲಾಶಯ ಹಾಗೂ ಮತ್ತಿತರೆಡೆ ಮರುಗೊಡವ ಮೀನುಗಳು ಇತರೆ ಮೀನುಗಳನ್ನು ತಿನ್ನುತ್ತಿವೆ ಎಂಬ ದೂರು ಕೇಳಿ ಬಂದಿದ್ದು, ಕೂಡಲೇ ಮರು ಗೊಡವ ಮೀನನ್ನು ಹತೋಟಿಗೆ ತರಲು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೇರೆ ಮೀನಿನ ಸಂತತಿ ಕಡಿಮೆ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಪ್ರೀತಿ ಮಾತನಾಡಿ, ಈ ವರ್ಷ  ತಾಲೂಕಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶೇಕಡವಾರು ಕೆರೆಗಳು ತುಂಬಿವೆ. ಶೇ.50ರಷ್ಟು ತುಂಬಿದ ಕೆರೆಯನ್ನು ಗುರುತಿಸಿ ಮೀನು ಮರಿಗಳನ್ನು ಬಿಡಲು ಕ್ರಮ ಕೈಗೊಳ್ಳಲಾಗುವುದು. ಮರಿಗಳು ಬೆಳೆದ ಮೇಲೆ ಹರಾಜು ಮೂಲಕ ಟೆಂಡರ್ ಕರೆದು ಮಾರಾಟ ಮಾಡಲಾಗುವುದು. ದಪ್ಪ ಬಾಯಿ ಕಾಟ್ಲಾ ಹಾಗೂ ಕಾಟ್ಲಾ ಮೀನಿನ ಮರಿಗಳನ್ನು ಹೆಚ್ಚಾಗಿ ಕೆರೆಗೆ ಬಿಡಲಾಗುತ್ತದೆ. ಮೀನಿನ ಹೊಸ ತಳಿ ಗಳನ್ನು ಅಭಿವೃದ್ಧಿಪಡಿಸಲು ನಮ್ಮಲ್ಲಿ ಸಾಕಷ್ಟು ಸೌಲಭ್ಯ ಇಲ್ಲದಿರುವುದರಿಂದ ಹೊರಗಿನಿಂದಲೇ ಮೀನು ಮರಿಗಳನ್ನು ತರಿಸಿಕೊಂಡು ವಿತರಿಸಲಾಗುತ್ತಿದೆ ಎಂದು ವಿವರಿಸಿದರು.

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಗೊರೂರಿನ ವಿಕಾಸ್ ಮಾತ ನಾಡುತ್ತಾ, ಜೂನ್ ಮತ್ತು ಜುಲೈ ಎರಡು ತಿಂಗಳು ಮೀನಿನ ಮರಿ ಬಿಡುವ ಕಾಲ ವಾಗಿದೆ. ಈ ವೇಳೆ ಮೀನುಗಾರರು ಮೀನು ಹಿಡಿಯದಂತೆ ಆದೇಶ ಮಾಡಲಾಗುವುದು ಎಂದು ಹೇಳಿದರು. ಯಾರಾದರೂ ಮೀನು ಹಿಡಿಯುವ ಸಾಹಸಕ್ಕೆ ಕೈಹಾಕಿದರೆ ಅಂತವರನ್ನು ಹಿಡಿದು ಮೀನು ಹಿಡಿಯುವ ಸಾಮಗ್ರಿಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಸಿದರಲ್ಲದೆ, ಮರುಗೊಡವ ಮೀನುಗಳನ್ನು ಸಂಪೂರ್ಣ ನಾಶಪಡಿಸಲು ಸರ್ಕಾರದಿಂದಲೇ ಆದೇಶವಿದ್ದು, ಕೆಲ ವರ್ಷಗಳಲ್ಲಿ ಸಂಪೂರ್ಣವಾಗಿ ನಾಶ ಮಾಡಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರಿಗೂ ಇಎಸ್‍ಐ, ಪಿಎಫ್ ಸಮರ್ಪಕವಾಗಿ ವಿತರಿಸಲಾಗುತ್ತಿದಿಯೇ ಎಂಬುದರ ಬಗ್ಗೆ ಮುಂದಿನ ತಾಪಂ ಸಭೆಯಲ್ಲಿ ಸರಿಯಾಗಿ ಮಾಹಿತಿಯನ್ನು ಇಲಾಖಾಧಿಕಾರಿಗಳು ನೀಡಬೇಕು ಎಂದು ತಾಪಂ ಅಧ್ಯಕ್ಷರು ಸೂಚಿಸಿದರು. ಕುಡಿಯುವ ನೀರು ಎಲ್ಲೂ ಸಮಸ್ಯೆ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಇದೇ ವೇಳೆ ತಿಳಿಸಿದರು. ಶಿಶು ಅಭಿವದ್ಧಿ ಇಲಾಖೆ ಅಧಿಕಾರಿ ಸಿ.ಬಿ. ರೂಪ ತಮ್ಮ ಇಲಾಖೆ ವಿವರ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ನಾಗರತ್ನ, ಸಾಮಾ ಜಿಕ ಸ್ಥಾಯಿ ಸಮಿತಿ ಸದಸ್ಯ ಯು.ಕೆ. ಶಿವ ನಂಜಪ್ಪ ಹಾಗೂ ಕಾರ್ಯನಿರ್ವಹಕ ಅಧಿಕಾರಿ ಕೆ.ಸಿ.ದೇವರಾಜೇಗೌಡ ಇದ್ದರು.

Translate »