ಹೆಚ್.ಡಿ.ಕೋಟೆ: ಓಡಿಪಿ ಸಂಸ್ಥೆ ಹಾಗೂ ತಾಲೂಕು ಪಂಚಾ ಯಿತಿ ವತಿಯಿಂದ ಸುಗ್ರಾಮ ಸದಸ್ಯರಿಗೆ (ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು) ಶುಕ್ರವಾರ ಒಂದು ದಿನದ ಸಂವಾದ ಕಾರ್ಯಕ್ರಮವನ್ನು ತಾಲೂಕು ಪಂಚಾ ಯಿತಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಇಓ ಶ್ರೀಕಂಠರಾಜೇ ಅರಸ್ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮ ಪಂಚಾಯಿತಿಗಳಲ್ಲಿ ಸದಸ್ಯರು ಮತ್ತು ಅಧ್ಯಕ್ಷರುಗಳು ಗ್ರಾಮಗಳಲ್ಲಿನ ಸಮಸ್ಯೆ ಗಳನ್ನು ಆಲಿಸಿ ಆ ಸಮಸ್ಯೆಗಳನ್ನು ಬಗೆಹರಿ ಸುವ ದೃಷ್ಠಿಯಿಂದ ಪ್ರಾಮಾಣ ಕವಾಗಿ ಕಾರ್ಯನಿರ್ವಹಿಸಬೇಕು. ಹಣಕಾಸು ವಿಚಾರವಾಗಿ ಕಾನೂನಿನ ನೀತಿ ನಿಯಮ ಗಳ ಅನುಗುಣವಾಗಿ ಕಾಮಗಾರಿಗಳನ್ನು ಮಾಡುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ಅಹವಾಲು ಗಳನ್ನು ಸ್ವೀಕರಿಸಿ ಗ್ರಾಮಗಳಲ್ಲಿ ಅಧಿಕಾರಿ ಗಳ ಭಾಗವಹಿಸುವಿಕೆ ಬಗ್ಗೆ, ಸುತ್ತೋಲೆಗಳ ವಿತರಣೆ ಬಗ್ಗೆ ಸ್ಥಾಯಿ ಸಮಿತಿಗಳ ರಚನೆ ಮತ್ತು ಸಭೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯಗಳ ಬಳಕೆ ಮತ್ತು ನಿರ್ಮಾಣದ ಬಗ್ಗೆ ಮಹಿಳೆಯರಾದ ನೀವು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ಬಯಲು ಶೌಚ ಮುಕ್ತ ಗ್ರಾಮವನ್ನಾಗಿ ಮಾಡ ಬೇಕು ಎಂದು ಕರೆ ನೀಡಿದರು.
ವಸತಿ ವಿಭಾಗದ ಸಂಯೋಜಕ ಪ್ರಕಾಶ್ ಮಾತನಾಡಿ, ದೇವರಾಜ ಅರಸು ವಸತಿ ಯೋಜನೆಯಡಿ ನಿರ್ಗತಿಕರಿಗೆ, ಅಂಗವಿಕಲ ರಿಗೆ ಹಾಗೂ ಇತರೆ ವಿಶೇಷ ವರ್ಗದವರಿಗೆ ವಸತಿಗಳನ್ನು ನೀಡಬಹುದಾಗಿದ್ದು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಬೇಕೆಂದರು.
ಓಡಿಪಿ ಸಂಸ್ಥೆಯ ಯೋಜನಾ ಸಂಯೋ ಜಕ ಅಶೋಕ್ ಕುಮಾರ್ ಮಾತನಾಡಿ, ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ಸದಸ್ಯರು ಒಗ್ಗಟ್ಟು ಪ್ರದರ್ಶಿಸಿ ಅಭಿವೃದ್ಧಿ ಯತ್ತ ದಾಪುಕಾಲಿಡ ಬೇಕು, ಅಧಿಕಾರಿಗಳು ಮತ್ತು ಇಲಾಖೆಯವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡು ಇನ್ನಷ್ಟು ದಕ್ಷ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಗಳಾದ ಗ್ರೇಸಿ, ಲತಾ, ಪುಟ್ಟಮ್ಮ, ಸುಮಿತ್ರಮ್ಮ, ಕಾಳಮ್ಮ, ಭಾಗ್ಯಮ್ಮ, ಸುನೀತಾ, ಸಮು ದಾಯದ ಕುಮಾರಿ, ಜಯಲಕ್ಷ್ಮೀ ಇದ್ದರು.