ಗಾರ್ಮೆಂಟ್ಸ್ ಮಹಿಳೆಯರ ಮುಷ್ಕರ 2ನೇ ದಿನಕ್ಕೆ ಉಪ ಆಯುಕ್ತರ ಮಾತುಕತೆ ವಿಫಲ
ಮಂಡ್ಯ

ಗಾರ್ಮೆಂಟ್ಸ್ ಮಹಿಳೆಯರ ಮುಷ್ಕರ 2ನೇ ದಿನಕ್ಕೆ ಉಪ ಆಯುಕ್ತರ ಮಾತುಕತೆ ವಿಫಲ

June 23, 2018

ಮದ್ದೂರು:  ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ಮಹಿಳೆಯರು ನಡೆಸುತ್ತಿ ರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಕೂಡ ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಜಾರಿಯಾಗುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈಗ ನೀಡುತ್ತಿರುವ 7500 ರೂ. ಸಂಬಳ ಸಾಲುತ್ತಿಲ್ಲ. ಇದರಿಂದ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಕನಿಷ್ಠ ವೇತನ 10,500 ರೂ. ನೀಡಬೇಕು. ಕಾರ್ಖಾನೆಯಲ್ಲಿ ಮಹಿಳೆಯರ ಮೇಲೆ ಶೋಷಣೆಯಾಗುತ್ತಿದೆ. ಸಾರಿಗೆ ಸೌಲಭ್ಯ, ಮೂಲಸೌಕರ್ಯಗಳ ಕೊರತೆ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಹಲವು ಬಾರಿ ಕಂಪನಿ ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋ ಜನವಾಗಿಲ್ಲ. ಈ ಕೂಡಲೇ ಕನಿಷ್ಠ ವೇತನ ಜಾರಿ ಮಾಡಿ ನಮಗೆ ಅನುಕೂಲ ಕಲ್ಪಿಸ ಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಮುಷ್ಕಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಖಾನೆ ಉಪಾಧ್ಯಕ್ಷ ಕೃಷ್ಣನ್, ಉಪ ವ್ಯವಸ್ಥಾಪಕ ಮಹೇಶ್‍ಭಟ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಕಾರ್ಮಿಕರ ಮನವೊಲಿಕೆಗೆ ಪ್ರಯತ್ನಿಸಿದರು. ನಿಮ್ಮಲ್ಲಿಯೇ 10ಮಂದಿ ಮುಖಂಡರು ಬನ್ನಿ ಕುಳಿತು ಚರ್ಚಿಸೋಣ. ನಿಮ್ಮ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದರು.

ಅಷ್ಟರಲ್ಲಿಯೇ ಸ್ಥಳಕ್ಕಾಗಮಿಸಿದ ಕಾರ್ಮಿಕ ಇಲಾಖೆ ಉಪಆಯುಕ್ತ ರವಿಕುಮಾರ್ ಪ್ರತಿಭಟನಾನಿರತರನ್ನು ಭೇಟಿ ಮಾಡಿ, ಕನಿಷ್ಟ ವೇತನ ನಿಗದಿ ಸಂಬಂಧ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸ ಲಾಗಿದೆ. ಶೀಘ್ರದಲ್ಲೇ ಈ ಸಮಿತಿ ಸಭೆ ಕರೆ ಯಲಾಗುತ್ತಿದ್ದು, ಕನಿಷ್ಟ ವೇತನ ಸೇರಿದಂತೆ ಹೆಚ್ಚುವರಿ ಸವಲತ್ತುಗಳನ್ನು ನೀಡಲು ಬದ್ಧವಾಗಿದೆÉ. ದಯಮಾಡಿ ಕಾರ್ಮಿಕರು ಪ್ರತಿಭಟನೆ ಹಿಂಪಡೆಯುವಂತೆ ಕೋರಿದರು. ಇದಕ್ಕೆ ಜಗ್ಗದ ಪ್ರತಿಭಟನಾನಿರತ ಮಹಿಳೆ ಯರು ಕನಿಷ್ಟ ವೇತನ ಜಾರಿಗಾಗಿ ಪ್ರತಿ ಭಟನೆ ಮುಂದುವರೆಸಿದರು.

ಬೆಂಬಲ: ಕಾರ್ಮಿಕರ ಪ್ರತಿಭಟನೆಗೆ ಜನ ವಾದಿ ಮಹಿಳಾ ಸಂಘಟನೆ, ಸಿಐಟಿಯು ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಗಳ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಸ್ಥಳದಲ್ಲಿ ಜಿಲ್ಲಾ ಪೊಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್‍ಪಿ ಸಿ.ಮಲ್ಲಿಕ್, ಸಿಪಿಐ ಪ್ರೀತಂ ಶ್ರೇಯಂಕರ, ಕಾರ್ಮಿಕ ಇಲಾಖೆ ಅಧಿಕಾರಿಗಳಾಧ ತಮ್ಮಣ್ಣ, ನಾಗೇಂದ್ರ, ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿ ದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ.

Translate »