ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

June 23, 2018

ಮಳವಳ್ಳಿ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಆವರಣದಿಂದ ತಾಪಂವರೆಗೆ ಮೆರವಣಿಗೆ ನಡೆಸಿದ ಪ್ರತಿ ಭಟನಾಕಾರರು, ಗ್ರಾಪಂ ನೌಕಕರಿಗೆ ಇಎಫ್‍ಎಂಎಸ್ ಮೂಲಕ ವೇತನ ಪಾವತಿಸ ಬೇಕು. ಬಿಲ್‍ಕಲೆಕ್ಟರ್‍ಗಳಿಗೆ 2ನೇ ಕಾರ್ಯ ದರ್ಶಿ ಆಗಿ ಬಡ್ತಿ ನೀಡುವ ಪ್ರಕ್ರಿಯೆ ಮತ್ತೆ ಜಾರಿಯಾಗಬೇಕು. ನಗರಾಭಿವೃದ್ಧಿ ಇಲಾಖೆ ನೌಕರರಿಗೆ ಇರುವಂತೆ ಗ್ರಾಪಂ ನೌಕರರಿಗೂ ಸೇವಾ ನಿಯಮಾವಳಿ ರಚಿ ಸುವುದು.

ವೈದ್ಯಕೀಯ ವೆಚ್ಚ, ಪಿಂಚಣಿ , ಗ್ರಾಚ್ಯೂಯಿಟಿ ಕಲ್ಪಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು ತಾಪಂ ಇಓ ಜೋಶಿ ಅವರಿಗೆ ಸಲ್ಲಿಸಿ ಬಳಿಕ ಪ್ರತಿಭಟನೆ ಹಿಂಪಡೆ ದರು. ಪ್ರತಿಭಟನೆಯಲ್ಲಿ ಚಲುವರಾಜು, ಮಂಚೇ ಗೌಡ, ಸಿದ್ದರಾಜು, ರಾಮಕೃಷ್ಣ, ತಿಮ್ಮೇ ಗೌಡ ಮತ್ತಿತರರಿದ್ದರು.

Translate »