ಮೈಸೂರು,ಸೆ.24(ಆರ್‍ಕೆ)-ವೇತನ ಪರಿಷ್ಕರಣೆ, ಸೇವಾ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‍ಎಚ್‍ಎಂ)ದಡಿ ಕಾರ್ಯನಿರ್ವಹಿಸು ತ್ತಿರುವ ಆರೋಗ್ಯ ಕಾರ್ಯಕರ್ತರು ಇಂದಿನಿಂದ ಕರ್ತವ್ಯ ಸ್ಥಗಿತ ಗೊಳಿಸಿ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಕೋವಿಡ್-19 ನಿರ್ವಹಣೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್ಸ್, ಮೇಲ್ ವರ್ಕರ್ಸ್, ಕೌನ್ಸಿಲರ್ಸ್, ಟಿಬಿ ಹೆಲ್ತ್ ವರ್ಕರ್ಸ್, ಟ್ರೀಟ್‍ಮೆಂಟ್ ಸೂಪರ್ ವೈಸರ್ಸ್, ಲ್ಯಾಬ್ ಸೂಪರ್‍ವೈಸರ್ಸ್, ನಾನ್ ಕ್ಲಿನಿಕಲ್ ಸಿಬ್ಬಂದಿಗಳಾದ ಡೇಟಾ ಎಂಟ್ರಿ ಆಪರೇಟರ್ಸ್, ಡ್ರೈವರ್ಸ್ ಹಾಗೂ…
ಕಾರ್ಮಿಕ ಪರ ಕಾನೂನುಗಳ ಕಟ್ಟುನಿಟ್ಟು ಜಾರಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ
September 25, 2020ಮೈಸೂರು,ಸೆ.24(ಪಿಎಂ)-ಕಾರ್ಮಿಕಪರ ಕಾನೂನು ಗಳ ಕಟ್ಟುನಿಟ್ಟು ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಗುರುವಾರ ಮೈಸೂರು ಜಿಲ್ಲಾ ಧಿಕಾರಿ ಕಚೇರಿ ಎದುರು ಪತ್ರಿಭಟನೆ ನಡೆಸಿತು. ಕೇಂದ್ರ ಸರ್ಕಾರ ಸುಗ್ರೀವಾಜ್ಞೆಗಳ ಮೂಲಕವೇ ಕಾರ್ಮಿಕಪರ ಕಾನೂನುಗಳನ್ನು ರದ್ದುಪಡಿಸುತ್ತಿದೆ. ಸರ್ಕಾರದ ಜನವಿರೋಧಿ ನೀತಿ ವಿರುದ್ಧ ದನಿ ಎತ್ತುವವರನ್ನು ಪ್ರತೀಕಾರಕ್ಕೆ ಗುರಿ ಮಾಡ ಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಖಾನೆ ಕಾಯ್ದೆ, ಕೈಗಾರಿಕೆ ವಿವಾದಗಳ ಕಾಯ್ದೆ ಅಧ್ಯಾಯ 5 `ಬಿ’ಗೆ ತಿದ್ದುಪಡಿ ಸಂಬಂಧದ ಸುಗ್ರೀವಾಜ್ಞೆ…
ಸುರೇಶ್ ಅಂಗಡಿ ನಿಧನಕ್ಕೆ ಬಿಜೆಪಿ ಮೈಸೂರು ಕಚೇರಿಯಲ್ಲಿ ಶ್ರದ್ಧಾಂಜಲಿ
September 25, 2020ಮೈಸೂರು, ಸೆ.24(ಆರ್‍ಕೆಬಿ)- ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಬಿಜೆಪಿ ಮೈಸೂರು ಘಟಕದ ಕಚೇರಿಯಲ್ಲಿ ಗುರುವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಇನ್ನಿತರರು ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸುರೇಶ್ ಅಂಗಡಿಯವರು ನಿಸ್ವಾರ್ಥದಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರ ನಿಧನ ದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾ ಗಿದೆ ಎಂದು ಕಂಬನಿ ಮಿಡಿದರು. ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ…
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನಕ್ಕೆ ಮಾಜಿ ಸಂಸದ ಧ್ರುವನಾರಾಯಣ್ ಸಂತಾಪ
September 25, 2020ಮೈಸೂರು, ಸೆ.24-ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನ ನೋವು ತರಿಸಿದ್ದು, ಅವರು ಸ್ನೇಹಜೀವಿಯಾಗಿದ್ದರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸಂತಾಪ ಸೂಚಿಸಿದ್ದಾರೆ. ನಾನು ಸಂಸದನಾಗಿದ್ದ ವೇಳೆ ಅವರೂ ಸಂಸದರಾಗಿ ಉತ್ತಮ ಸ್ನೇಹ ಬಾಂಧವ್ಯವಿತ್ತು. ಸರಳ ಸಜ್ಜನಿಕೆಯ ಸುರೇಶ್ ಅಂಗಡಿ ಇದೀಗ ಕೇಂದ್ರ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಾ ನಷ್ಟವಾಗಿದೆ ಎಂದಿದ್ದಾರೆ. ಅಲ್ಲದೆ, ಇಂದು ನಿಧನರಾದ ಉತ್ತರ ಕರ್ನಾಟಕ ಶಾಸಕ ನಾರಾಯಣ ರಾವ್ ಅವರಿಗೂ ಸಂಸದ ಆರ್.ಧ್ರುವನಾರಾಯಣ್ ಅತೀವ ಸಂತಾಪ…
ಸಾಲಬಾಧೆಗೆ ರೈತ ಆತ್ಮಹತ್ಯೆ
September 25, 2020ಮೈಸೂರು, ಸೆ.24 (ಆರ್‍ಕೆ)- ಸಾಲಕ್ಕೆ ಹೆದರಿ ರೈತನೋರ್ವ ತನ್ನ ಜಮೀನಿನ ಮರ ವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರದಲ್ಲಿ ಸಂಭವಿಸಿದೆ. ಗ್ರಾಮದ ಬಸವರಾಜು ಎಂಬುವರ ಮಗ ಲಿಂಗರಾಜು (55) ಆತ್ಮಹತ್ಯೆಗೆ ಶರಣಾದವರು. 3 ಎಕರೆ ಖುಷ್ಕಿ ಜಮೀನು ಹೊಂದಿರುವ ಅವರು, ಹತ್ತಿ, ರಾಗಿ, ಜೋಳ ಬೆಳೆ ಬೆಳೆದಿ ದ್ದರು. ಆದರೆ ಬೆಳೆ ಕೈ ಹಿಡಿಯದಿದ್ದ ಕಾರಣ ಮಾಡಿದ್ದ ಸಾಲ ತೀರಿಸಲಾಗದೆ ಹೆದರಿ ತಮ್ಮ ಜಮೀನಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿ…
ಕೇಂದ್ರ ಸಚಿವ ಸುರೇಶ್ ಅಂಗಡಿ ವಿಧಿವಶ
September 24, 2020ನವದೆಹಲಿ,ಸೆ.23-ಕೇಂದ್ರ ಸಚಿವ ಸುರೇಶ್ ಅಂಗಡಿ(65) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾದರು. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರಿಗೆ ಇದೇ ಸೆ.11ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಈ ಕುರಿತು ಸೆ.11ರಂದು ಸ್ವತಃ ಅವರೇ ಟ್ವೀಟ್ ಮಾಡಿದ್ದರು. ಅಂದೇ ದೆಹಲಿಯ ಏಮ್ಸ್ ಆಸ್ಪ ತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿ ದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧ ವಾರ ರಾತ್ರಿ ಕೊನೆಯುಸಿರೆಳೆದರು. ತಾಯಿ, ಪತ್ನಿ, ಇಬ್ಬರು…
ಬಿಡಿಎ ಅಪಾರ್ಟ್‍ಮೆಂಟ್ ಯೋಜನೆಯಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಕಿಕ್ ಬ್ಯಾಕ್
September 24, 2020ಬೆಂಗಳೂರು, ಸೆ. 23- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಕ್ಕಳು ಮತ್ತು ಮೊಮ್ಮಕ್ಕಳು ಅಕ್ರಮ ಹಣ ವರ್ಗಾವಣೆ ಯಲ್ಲಿ ತೊಡಗಿದ್ದು, ಈ ಕುರಿತು ತಮ್ಮ ಬಳಿ ಸಾಕ್ಷ್ಯ ದಾಖಲೆಗಳಿವೆ. ಮುಖ್ಯಮಂತ್ರಿ ಯಡಿ ಯೂರಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್‍ಸಿಂಗ್ ಸುರ್ಜೇವಾಲಾ ಅವರು ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸುರ್ಜೇವಾಲಾ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರ ಕುಟುಂ ಬದ ಸದಸ್ಯರು ಬಿಡಿಎನಲ್ಲಿ 666…
ಸೆ.28ಕ್ಕೆ ಕರ್ನಾಟಕ ಬಂದ್
September 24, 2020ಬೆಂಗಳೂರು,ಸೆ.23-ಕರ್ನಾಟಕ ಸರ್ಕಾರ ತಾವು ರೈತರ ಪರ ಎಂದು ಸುಳ್ಳು ಹೇಳು ತ್ತಲೇ ರೈತರ ಮರಣ ಶಾಸನ ಬರೆಯುತ್ತಿದೆ. ರೈತರಿಗೆ ದ್ರೋಹ ಬಗೆಯಲು ಬಿ.ಎಸ್. ಯಡಿಯೂರಪ್ಪ ಸರ್ಕಾರ ಸಜ್ಜಾಗಿದೆ. ಸರ್ವಾ ಧಿಕಾರಿ ಧೋರಣೆ ಮೆರೆಯುತ್ತಿದೆ. ರೈತರ ಒತ್ತಾಯಕ್ಕೆ ಮರುಗಿ ಯಡಿಯೂರಪ್ಪ ಸರ್ಕಾರ ರೈತ ವಿರೋಧಿ ಮಸೂದೆಯನ್ನು ತಡೆಹಿಡಿ ಯುತ್ತದೆ ಎಂಬ ಆಶಾಭಾವನೆ ನಮ್ಮಲ್ಲಿತ್ತು. ಆದರೆ, ಒಂದು ಮಸೂದೆಯನ್ನು ಕಾನೂ ನನ್ನಾಗಿ ರೂಪಿಸುತ್ತಿರುವುದು ವಿಪರ್ಯಾಸ ಎಂದು ಕಿಡಿಕಾರಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರ ರೈತ ವಿರೋಧಿ ಮಸೂದೆಯನ್ನು ಧಿಕ್ಕರಿ…
ರಾತ್ರಿ ವೇಳೆ ಬಾರ್, ಕ್ಲಬ್‍ಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡುವ ಮಸೂದೆ ಮಂಡನೆ
September 24, 2020ಬೆಂಗಳೂರು, ಸೆ. 23- ರಾತ್ರಿ ವೇಳೆ ಬಾರ್ ಮತ್ತು ಕ್ಲಬ್‍ಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡಲಾಗಿದ್ದು, ಎಲ್ಲಿ ಯಾವಾಗ ದುಡಿಯಬೇಕು ಎಂಬ ಆಯ್ಕೆ ಮಹಿಳೆ ಮತ್ತು ಆಕೆಯ ಕುಟುಂ ಬಕ್ಕೆ ಸೇರಿದ್ದು ಎಂದು ಕಾರ್ಮಿಕ ಸಚಿವ ಶಿವ ರಾಮ್ ಹೆಬ್ಬಾರ್ ಬುಧವಾರ ಮೇಲ್ಮನೆಗೆ ಸ್ಪಷ್ಟಪಡಿ ಸಿದ್ದಾರೆ. ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2020 ಮಂಡನೆ ಚರ್ಚೆಯ ವೇಳೆ ಸಚಿವ ಶಿವರಾಮ್ ಹೆಬ್ಬಾರ್, ಇದು ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಜಾರಿಗೆ ತಂದಿರುವ ವಿಧೇಯಕ…
ಮೈಸೂರಲ್ಲಿ ಬುಧವಾರ ಕೊರೊನಾ ಸಾವು `ಶೂನ್ಯ’
September 24, 2020ಮೈಸೂರು, ಸೆ.23(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಬುಧವಾರ ಕೊರೊನಾ ಸೋಂಕಿನಿಂದ ಯಾವುದೇ ಜೀವಹಾನಿ ಯಾದ ಬಗ್ಗೆ ವರದಿಯಾಗಿಲ್ಲ. ಈ ಮಧ್ಯೆ, ಹೊಸದಾಗಿ 341 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 31,092ಕ್ಕೆ ಏರಿಕೆಯಾಗಿದೆ. 4,326 ಜನರಲ್ಲಿ ಇನ್ನೂ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಬುಧವಾರ 6,997 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 5,40,847ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ 5,460 ಮಂದಿ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ…










