ಮೈಸೂರು

ಇಂದು ನಗರದ ಕೆಲವೆಡೆ ನೀರು ಪೂರೈಕೆ ವ್ಯತ್ಯಯ
ಮೈಸೂರು

ಇಂದು ನಗರದ ಕೆಲವೆಡೆ ನೀರು ಪೂರೈಕೆ ವ್ಯತ್ಯಯ

September 24, 2020

ಮೈಸೂರು, ಸೆ.23(ಆರ್‍ಕೆಬಿ)- ನಗರದ ವಾರ್ಡ್ ನಂ.45ರಿಂದ 51 (ಶಾರದಾ ದೇವಿನಗರ, ದಟ್ಟಗಳ್ಳಿ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54ರಿಂದ 65 (ಗುಂಡೂರಾವ್‍ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ, ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ಎಂ.ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶಃ ಪ್ರದೇಶ, ವಿಶ್ವೇಶ್ವರನಗರ, ಜೆ.ಪಿನಗರ, ಅರವಿಂದನಗರ, ಶ್ರೀರಾಂಪುರ) ಪ್ರದೇಶಗಳಲ್ಲಿ ಸೆ.24ರ ಗುರುವಾರ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕಬಿನಿ ನೀರು ಸರಬರಾಜು ಯೋಜನೆಯ ಮೂಲಸ್ಥಾವರದಲ್ಲಿ 450 ಹೆಚ್‍ಪಿ ಮೋಟಾರ್ ಮತ್ತು ಸಾಫ್ಟ್ ಸ್ಟಾರ್ಟರ್ ದುರಸ್ತಿ ಕಾಮಗಾರಿ ತುರ್ತಾಗಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ…

ತ್ವರಿತಗತಿಯಲ್ಲಿ ಪರೀಕ್ಷೆ ನಡೆಸಿ ಕೊರೊನಾ ನಿಯಂತ್ರಿಸಿ
ಮೈಸೂರು

ತ್ವರಿತಗತಿಯಲ್ಲಿ ಪರೀಕ್ಷೆ ನಡೆಸಿ ಕೊರೊನಾ ನಿಯಂತ್ರಿಸಿ

September 24, 2020

ಮೈಸೂರು,ಸೆ.23(ಆರ್‍ಕೆ)-ತ್ವರಿತವಾಗಿ ಹೆಚ್ಚು ಮಂದಿಗೆ ಕೋವಿಡ್-19 ಪರೀಕ್ಷೆ ನಡೆ ಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಎನ್.ಜಯರಾಂ ಅವರು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕೋವಿಡ್ -19 ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿದಲ್ಲಿ ಸೂಕ್ತ ಸಮ ಯಕ್ಕೆ ಚಿಕಿತ್ಸೆ ನೀಡಿ ರೋಗಿಗಳ ಸಾವು…

`ವಿಜಯೇಂದ್ರ ಜನಪ್ರಿಯತೆ ಕಾಂಗ್ರೆಸ್ ಹೈಕಮಾಂಡ್‍ಗೆ ನಡುಕ’
ಮೈಸೂರು

`ವಿಜಯೇಂದ್ರ ಜನಪ್ರಿಯತೆ ಕಾಂಗ್ರೆಸ್ ಹೈಕಮಾಂಡ್‍ಗೆ ನಡುಕ’

September 24, 2020

ಸುರ್ಜೇವಾಲಾ ಬಾಲಿಶ ಆರೋಪ: ರಘು ಕೌಟಿಲ್ಯ ಕಿಡಿ ಮೈಸೂರು, ಸೆ.23- ವಿಜಯೇಂದ್ರ ಯಡಿಯೂರಪ್ಪ ರಾಜ್ಯದ ಭರವಸೆಯ ಯುವ ನೇತಾರ, ಬಿಜೆಪಿಯ ಕ್ರಿಯಾಶೀಲ ಪದಾಧಿಕಾರಿ. ಅವರ ಜನಪ್ರಿಯತೆ ಕಂಡು ಕಾಂಗ್ರೆಸ್ ಹೈಕಮಾಂಡ್‍ಗೆ ತಲೆಬಿಸಿಯಾಗಿದೆ. ಹಾಗಾಗಿಯೇ ಕಾಂಗ್ರೆಸ್ ಉಸ್ತುವಾರಿ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿ ವಿಜಯೇಂದ್ರರ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ರಘು(ಕೌಟಿಲ್ಯ) ಕಿಡಿಕಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷ, ವಿಪಕ್ಷ ನಾಯಕರು ಸಮರ್ಥರಲ್ಲ ಎಂಬ ಪರೋಕ್ಷ ಸಂದೇಶ ನೀಡಿ ರಾಜ್ಯ ನಾಯಕರನ್ನು ಅವಮಾನಿಸುವ ಉದ್ದೇಶವೂ ರಾಜ್ಯ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲಾ…

ಐಕ್ಯ ಹೋರಾಟ ಸಮಿತಿಯಿಂದ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್
ಮೈಸೂರು

ಐಕ್ಯ ಹೋರಾಟ ಸಮಿತಿಯಿಂದ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್

September 24, 2020

ಮೈಸೂರು, ಸೆ.23(ಆರ್‍ಕೆಬಿ)- ರೈತ, ಕಾರ್ಮಿಕರ ವಿರೋಧಿ ಸುಗ್ರೀವಾಜ್ಞೆ ವಿರುದ್ಧ ಐಕ್ಯ ಹೋರಾಟ ಸಮಿತಿ ವತಿಯಿಂದ ಸೆ.25 ರಂದು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಸಮಿತಿಯ ಪರವಾಗಿ ಪ್ರಗತಿಪರ ಮುಖಂಡ ಪ.ಮಲ್ಲೇಶ್ ಮತ್ತು ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಇಂದಿಲ್ಲಿ ತಿಳಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಅಂದು ಮೈಸೂರಿನ ತಿ.ನರಸೀಪುರ, ನಂಜನ ಗೂಡು, ಬೆಂಗಳೂರು ಮತ್ತು ಹುಣಸೂರು ಕಡೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು….

ಮೈಸೂರಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಿಂಡು
ಮೈಸೂರು

ಮೈಸೂರಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ಹಿಂಡು

September 24, 2020

ಮೈಸೂರು,ಸೆ.23(ಪಿಎಂ)-ಒಬ್ಬಂಟಿಗಳ ಹಿಂದೆ ಬೀದಿ ನಾಯಿಗಳ ಹಿಂಡು ಬಿದ್ದರೆ ಅಂತಹವರ ಪ್ರಾಣ ಕೈಗೆ ಬಾರದೇ ಇರುವುದೇ? ಹೌದು, ಮೈಸೂರು ನಗರದಲ್ಲಿ ಬೀದಿ ನಾಯಿಗಳ ಹಿಂಡು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇವು ಗಳ ಉಪಟಳಕ್ಕೆ ನಾಗರಿಕರು ಕಂಗಾಲಾಗಿದ್ದಾರೆ. ಇವುಗಳ ಅಡ್ಡೆಗಳ ಬಳಿ ಒಬ್ಬಂಟಿಯಾಗಿ ಸಂಚರಿಸುವುದು ದುಸ್ಸಾಹಸಕ್ಕೆ ಕೈ ಹಾಕಿದಂತೆ. ಇತೀಚೆಗಂತೂ ರಸ್ತೆ ರಸ್ತೆ ಗಳಲ್ಲಿ ಬೀದಿ ನಾಯಿಗಳ ಹಿಂಡು ಕಂಡು ಬರುತ್ತಿವೆ. ಇವುಗಳ ಪೈಕಿ ಬಹುತೇಕ ನಾಯಿಗಳು, ಪಾದ ಚಾರಿಗಳು ಹಾಗೂ ವಾಹನ ಸವಾರರ ಹಿಂದೆ ಬೀಳುವುದು ಸಾಮಾನ್ಯವಾಗಿದೆ….

ಲಾಕ್‍ಡೌನ್ ವೇಳೆ ಸೇವಾ ಅವಧಿಯೆಂದು   ಪರಿಗಣಿಸಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಲಾಕ್‍ಡೌನ್ ವೇಳೆ ಸೇವಾ ಅವಧಿಯೆಂದು  ಪರಿಗಣಿಸಿ ವೇತನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

September 24, 2020

ಮೈಸೂರು, ಸೆ.23(ಎಂಟಿವೈ)- ಲಾಕ್ ಡೌನ್ ಸಂದರ್ಭವನ್ನು ಸೇವಾ ಅವಧಿ ಎಂದು ಪರಿಗಣಿಸಿ, ಪದವಿ ಕಾಲೇಜು ಅತಿಥಿ ಉಪ ನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಿ, ಅವ ರನ್ನೇ ಸೇವೆಯಲ್ಲಿ ಮುಂದುವರೆಸಿ ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅತಿಥಿ ಉಪ ನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಮಿತಿಯ ರಾಜ್ಯ ಸಂಯೋಜಕಿ ಎಂ. ಉಮಾದೇವಿ ಮಾತನಾಡಿ, ರಾಜ್ಯದ 413…

ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಎಲ್ಲೆಂದರಲ್ಲಿ ನಾನಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ
ಮೈಸೂರು

ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಎಲ್ಲೆಂದರಲ್ಲಿ ನಾನಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ

September 24, 2020

ಮೈಸೂರು, ಸೆ.23(ಪಿಎಂ)- ಚಾಮುಂಡಿ ಬೆಟ್ಟದ ಮಗ್ಗಲಲ್ಲಿ ಹಚ್ಚಹಸಿರಿನಿಂದ ಕೂಡಿ ರುವ ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಾಂಡವ ವಾಡುತ್ತಿವೆ. ಮೈದಾನದ ಹಸಿರು ಹುಲ್ಲು ಗಾವಲು ಹಾಗೂ ಗಿಡಗಂಟಿಗಳ ನಡುವೆ ನಾನಾ ತರದ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ಇಲ್ಲಿನ ಪರಿಸರಕ್ಕೆ ಮಾರಕವಾಗಿವೆ. ವಿವಿಧ ರೀತಿಯ ತಿನಿಸುಗಳ ಪ್ಲಾಸ್ಟಿಕ್ ಪೊಟ್ಟಣ, ಆಹಾರ ಸೇವನೆಗೆ ಬಳಸಿ ಬಿಸಾ ಡಿರುವ ಪ್ಲಾಸ್ಟಿಕ್ ತಟ್ಟೆ ಹಾಗೂ ಲೋಟ ಗಳು ಗಾಳಿಯಲ್ಲಿ ಹಾರಾಡುತ್ತ ಹಾಗೂ ಗಿಡಗಂಟಿಗಳ ನಡುವೆ ಸಿಕ್ಕಿಕೊಂಡು ಸುಂದರ ಪರಿಸರಕ್ಕೆ…

ಗನ್‍ಹೌಸ್ ಬಳಿ ಶೀಘ್ರ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮತಿ ಸಂದೇಶ್‍ರಿಗೆ ಸಚಿವ ಬಸವರಾಜ್ ಭರವಸೆ
ಮೈಸೂರು

ಗನ್‍ಹೌಸ್ ಬಳಿ ಶೀಘ್ರ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಅನುಮತಿ ಸಂದೇಶ್‍ರಿಗೆ ಸಚಿವ ಬಸವರಾಜ್ ಭರವಸೆ

September 24, 2020

ಬೆಂಗಳೂರು, ಸೆ.23-ಮೈಸೂರು-ಊಟಿ ರಸ್ತೆಯಲ್ಲಿ ಗನ್‍ಹೌಸ್ ಬಳಿ ಪ್ರಯಾಣಿಕರಿಗೆ ತಂಗುದಾಣ ನಿರ್ಮಿಸಲು ಬಿ.ಒ.ಒ.ಟಿ. ಆಧಾರದ ಮೇಲೆ ಒ.ಒ.ಎಚ್. ಜಾಹೀರಾತು ಸಂಸ್ಥೆಗೆ ಅನುಮತಿ ನೀಡಿದ್ದು, ಕೋವಿಡ್-19 ಕಾರಣದಿಂದ ಇನ್ನೂ ನಿರ್ಮಾಣ ಕಾರ್ಯವನ್ನು ಆರಂಭಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ವಿಧಾನ ಪರಿಷತ್‍ನಲ್ಲಿ ತಿಳಿಸಿದ್ದಾರೆ. ಮೈಸೂರಿನಿಂದ ನಂಜನಗೂಡು-ಗುಂಡ್ಲುಪೇಟೆ-ಚಾಮರಾಜನಗರ ಕಡೆಗೆ ಹೋಗುವ ಹೆಚ್ಚಿನ ಪ್ರಯಾಣಿಕರು ಇಲ್ಲಿ ಬಸ್ ಹತ್ತುವುದರಿಂದ ಅವರಿಗೆ ಬಿಸಿಲು-ಮಳೆಯಿಂದ ರಕ್ಷಣೆ ನೀಡಲು 1 ಬಸ್ ತಂಗುದಾಣ ನಿರ್ಮಿಸುವಂತೆ ಸಂದೇಶ್ ನಾಗರಾಜ್ ಅವರು ಮಾಡಿದ್ದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಇಲ್ಲಿ ಬಸ್…

ಎಸ್‍ಬಿಐ ಸಾಲಗಾರರಿಗೆ ಗುಡ್‍ನ್ಯೂಸ್: ಇಎಂಐಯಿಂದ 2 ವರ್ಷ ರಿಲೀಫ್
ಮೈಸೂರು

ಎಸ್‍ಬಿಐ ಸಾಲಗಾರರಿಗೆ ಗುಡ್‍ನ್ಯೂಸ್: ಇಎಂಐಯಿಂದ 2 ವರ್ಷ ರಿಲೀಫ್

September 24, 2020

ಮುಂಬೈ: ಕೊರೊನಾ, ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಣಿಜ್ಯ, ಉದ್ಯಮ ಚಟುವಟಿಕೆ ನಿಂತು ಹೋಗಿವೆ. ಲಕ್ಷಾಂತರ ಮಂದಿ ನೌಕರಿ ಕಳೆದು ಕೊಂಡಿದ್ದಾರೆ. ಹಲವರಿಗೆ ಸಂಬಳ ಕಡಿತವಾಗಿದೆ. ಇವೆಲ್ಲಾ ಕಾರಣ ಗಳಿಂದಾಗಿ ಬಹಳಷ್ಟು ಮಂದಿ ಬ್ಯಾಂಕ್ ಸಾಲಕ್ಕೆ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ತಾತ್ಕಾಲಿಕವಾಗಿ ನೆರ ವಾಗಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮುಂದಾಗಿದೆ. ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಸೇರಿದಂತೆ ವಿವಿಧ ಬಗೆಯ ಸಾಲಗಳನ್ನು ಪಡೆದಿರುವ ಗ್ರಾಹಕರು ಸದ್ಯದ ಪರಿಸ್ಥಿತಿಯಲ್ಲಿ 2 ವರ್ಷ ಗಳವರೆಗೆ ಇಎಂಐ ಪಾವತಿಸುವುದಕ್ಕೆ…

ಕೃಷಿ ಮಸೂದೆಗಳ ವಿರೋಧಿಸಿ ಸೆ.25ರ ಬಂದ್ ಗೊಂದಲ
ಮೈಸೂರು

ಕೃಷಿ ಮಸೂದೆಗಳ ವಿರೋಧಿಸಿ ಸೆ.25ರ ಬಂದ್ ಗೊಂದಲ

September 23, 2020

ಬೆಂಗಳೂರು, ಸೆ.22-ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಮಸೂದೆಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಕರೆ ನೀಡಿರುವ ಭಾರತ್ ಬಂದ್‍ಗೆ ಬೆಂಬಲ ನೀಡುವ ವಿಚಾರದಲ್ಲಿ ರಾಜ್ಯ ರೈತ ಸಂಘಟನೆಗಳ ನಡುವೆ ಒಮ್ಮತ ಮೂಡದೇ ಸೆ.25ರ ಕರ್ನಾಟಕ ಬಂದ್ ನಡೆಯುವುದೋ-ಇಲ್ಲವೋ ಎಂಬುದರ ಬಗ್ಗೆ ಗೊಂದಲ ಮೂಡಿದೆ. ಈಗಾಗಲೇ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಗಳಿಗೆ ಅಂಗೀಕಾರ ದೊರೆತಿದೆ. ರಾಜ್ಯ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ಈ ಅಧಿವೇಶನದಲ್ಲಿ ಸರ್ಕಾರ ಕೃಷಿ ಮಸೂದೆಗಳನ್ನು ಮಂಡಿಸಿ, ಅದಕ್ಕೆ ಅಂಗೀಕಾರ…

1 425 426 427 428 429 1,611
Translate »