ಮೈಸೂರು, ಸೆ.22(ಆರ್‍ಕೆಬಿ)- ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದ ಗಿಸಬೇಕು. ಲಾಕ್‍ಡೌನ್ ಅವಧಿ ಯಲ್ಲಿನ ಗೌರವ ಧನ ಬಿಡು ಗಡೆ ಮಾಡಬೇಕು ಎಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪ ನ್ಯಾಸಕರ ರಾಜ್ಯ ಸಮನ್ವಯ ಸಮಿ ತಿಯ ಜಿಲ್ಲಾ ಘಟಕದ ವತಿಯಿಂದ ಅತಿಥಿ ಉಪನ್ಯಾ ಸಕರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸದೇ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಅತೀ…
ಸೆ.27ರವರೆಗೆ ಕೊಡಗಿನಲ್ಲಿ ಸಾಧಾರಣ ಮಳೆ ಸಂಭವ
September 23, 2020ಮೈಸೂರು, ಮಂಡ್ಯ, ಚಾ.ನಗರದಲ್ಲಿ ತುಂತುರು ಮಳೆ ಸಾಧ್ಯತೆ ಮೈಸೂರು, ಸೆ.22(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಸೆ.23ರಿಂದ 27ರವರೆಗೆ ಕೊಡಗು ಜಿಲ್ಲೆಯಲ್ಲಿ ಸಾಧಾ ರಣ ಮಳೆ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬೀಳುವ ಸಂಭವವಿದೆ. ಕೊಡಗಿನಲ್ಲಿ ಸೆ.23 ರಂದು 25 ಮಿ.ಮೀ., 24ರಂದು 12 ಮಿ.ಮೀ., 25ರಂದು 6 ಮಿ.ಮೀ., 26ರಂದು 9 ಮಿ.ಮೀ. ಮತ್ತು 27ರಂದು 8 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ…
ಮಂಗಳವಾರ ಮೈಸೂರಲ್ಲಿ 443 ಮಂದಿಗೆ ಸೋಂಕು
September 23, 2020ಮೈಸೂರು, ಸೆ.22(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 443 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,751ಕ್ಕೆ ಏರಿದೆ. ಹಾಗೆಯೇ ಇಂದು 936 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 26,051 ಸೋಂಕಿತರು ಗುಣಮುಖರಾದಂತಾಗಿದೆ. ಮತ್ತೆ 9 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 715ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕು ಸಕ್ರಿಯವಾಗಿರುವ 3,985 ಜನರಲ್ಲಿ 304 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 104 ಹೆಲ್ತ್ ಕೇರ್ಸ್‍ಗಳಲ್ಲಿ, 613 ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ, 301 ಖಾಸಗಿ ಆಸ್ಪತ್ರೆಗಳಲ್ಲಿ,…
ಕೊರೊನಾ ಸಂದರ್ಭದಲ್ಲಿ ರೈತರು, ಬಡವರು, ಕಾರ್ಮಿಕರ ನೆರವಿಗೆ ಬಾರದ ಸರ್ಕಾರ
September 23, 2020ಬೆಂಗಳೂರು, ಸೆ.22(ಕೆಎಂಶಿ)- ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರ ಕಷ್ಟಗಳಿಗೆ ನಮ್ಮ ಹೃದಯ ಮಿಡಿಯಬೇಕಿತ್ತು. ಆದರೆ ರಾಜ್ಯ ಸರ್ಕಾರ ರೈತರು, ಬಡವರು, ಕಾರ್ಮಿಕರ ವಿಚಾರದಲ್ಲಿ ಅಮಾನವೀಯ ವಾಗಿ ನಡೆದುಕೊಂಡಿದ್ದು, ರಾಜ್ಯದ ಜನ ಇವರನ್ನು ಕ್ಷಮಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿಧಾನಸಭೆಯಲ್ಲಿ ಹರಿಹಾಯ್ದಿದ್ದಾರೆ. ವಿಧಾನಸಭೆಯಲ್ಲಿ ನಿಯಮ 69ರಡಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರದ ವೈಫಲ್ಯ, ಅಕ್ರಮ, ಭ್ರಷ್ಟಾಚಾರವನ್ನು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿದರು. ಕೊರೊನಾ ಪರಿಸ್ಥಿತಿಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್…
ಗುತ್ತಿಗೆ, ಹೊರಗುತ್ತಿಗೆ ವೈದ್ಯರು ಸೇರಿ ವಿವಿಧ ಸಿಬ್ಬಂದಿಯಿಂದ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆ.24ರಿಂದ ಮುಷ್ಕರ
September 23, 2020ಮೈಸೂರು, ಸೆ.22(ಪಿಎಂ)- ಸರ್ಕಾರಿ ವೈದ್ಯರ ಅಸಹಕಾರ ಚಳುವಳಿ ಬಳಿಕ ಇದೀಗ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆಯ ವೈದ್ಯರು ಸೇರಿದಂತೆ ವಿವಿಧ ಸಿಬ್ಬಂದಿ ವರ್ಗ ಸೆ.24 ರಿಂದ ರಾಜ್ಯಾದ್ಯಂತ ಕೆಲಸ ಸ್ಥಗಿತಗೊಳಿಸಿ ಅನಿರ್ದಿ ಷ್ಟಾವಧಿ ಮುಷ್ಕರಕ್ಕೆ ತೀರ್ಮಾನಿಸಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಸರ್ಕಾರಿ ವೈದ್ಯರ ಪ್ರತಿ ಭಟನೆ ನಿವಾರಿಸಿ ನಿಟ್ಟುಸಿರು ಬಿಡುತ್ತಿದ್ದ ಸರ್ಕಾರಕ್ಕೆ ಇದೀಗ ಮತ್ತೊಂದು…
ಕೊರೊನಾ ನಿಯಂತ್ರಣ ಕ್ರಮಗಳ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಯಾಗಲಿ
September 23, 2020ಮೈಸೂರು, ಸೆ.22(ಪಿಎಂ)- ರಾಜ್ಯದಲ್ಲಿ ಕೊರೊನಾದಿಂದ ಮಾರಣ ಹೋಮವಾಗುತ್ತಿದ್ದು, ಈವರೆಗೆ ಸುಮಾರು 8 ಸಾವಿರ ಮಂದಿ ಸಾವನ್ನಪ್ಪಿ ದ್ದಾರೆ. ಕೂಡಲೇ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿ ಕೊರೊನಾ ನಿಯಂತ್ರಣ ದಲ್ಲಿ ಆಗುತ್ತಿರುವ ಲೋಪದ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ಸೋಂಕು ಹಾಗೂ ಅದರಿಂದಾಗುವ ಸಾವಿನ ಪ್ರಮಾಣ ಹೆಚ್ಚಿದ್ದು, ಇಡೀ ದೇಶದಲ್ಲಿ ರಾಜ್ಯ…
ಬೈಕ್‍ಗೆ ಲಾರಿ ಡಿಕ್ಕಿ: ಐಟಿಐ ಕಾಲೇಜು ಪ್ರಿನ್ಸಿಪಾಲ್ ದುರ್ಮರಣ
September 23, 2020ಮೈಸೂರು,ಸೆ.22(ಆರ್‍ಕೆ)-ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಐಟಿಐ ಕಾಲೇಜು ಪ್ರಾಂಶುಪಾಲರು ಸಾವನ್ನ ಪ್ಪಿರುವ ಘಟನೆ ಮೈಸೂರಿನ ಜೆ.ಪಿ.ನಗರ ಬಳಿ ರಿಂಗ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಲೇಟ್ ಸ್ವಾಮಿನಾಥ್ ಅವರ ಮಗ ವೇಣುಗೋಪಾಲ್ (53) ಸಾವನ್ನಪ್ಪಿದವರು. ವಿಶ್ವೇಶ್ವರನಗರದ ಜನ ಸೇವಾ ಕೈಗಾರಿಕಾ ಸಂಸ್ಥೆಯಲ್ಲಿ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಹೀರೋ ಹೋಂಡಾ ಪ್ಯಾಷನ್ ಪ್ಲಸ್ (ಕೆಎ 09-ಹೆಚ್‍ವೈ 7079) ಬೈಕ್‍ನಲ್ಲಿ ನಂಜನಗೂಡು ರಸ್ತೆಯಿಂದ ರಿಂಗ್ ರೋಡ್‍ನಲ್ಲಿ ಬರುತ್ತಿದ್ದಾಗ, ರೈಲ್ವೇ ಅಂಡರ್…
ಕೊರೊನಾದ ಕಠಿಣ ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿದ ದಕ್ಷ ಅಧಿಕಾರಿ: ಸುಧಾಕರ್ ಶೆಟ್ಟಿ ಪ್ರಶಂಸೆ
September 23, 2020ಮೈಸೂರು,ಸೆ.22(ಆರ್‍ಕೆಬಿ)- ಒಬ್ಬ ದಕ್ಷ ಜಿಲ್ಲಾಧಿಕಾರಿ ಯಾವುದೇ ಕಠಿಣ ಪರಿಸ್ಥಿತಿ ಯನ್ನೂ ತಾಳ್ಮೆ ಹಾಗೂ ತನ್ನನ್ನು ಪರಿಸ್ಥಿತಿಗೆ ಅರ್ಪಿಸಿಕೊಂಡರೆ ಜಿಲ್ಲೆಯನ್ನು ಸುಸ್ಥಿತಿಯ ಲ್ಲಿಡಬಹುದು ಎಂಬುದನ್ನು ಅಭಿರಾಂ ಜಿ.ಶಂಕರ್ ನಿರೂಪಿಸಿ ತೋರಿಸಿ ಕೊಟ್ಟಿ ದ್ದಾರೆ ಎಂದು ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿ (ಎಫ್‍ಕೆಸಿಸಿಐ) ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ತಿಳಿಸಿದರು. ಪ್ರಸ್ತುತ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕರಾಗಿರುವ ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವ ರನ್ನು ಎಫ್‍ಕೆಸಿಸಿಐ ಮತ್ತು ಎಂಸಿಸಿಐ ವತಿ ಯಿಂದ ಸನ್ಮಾನಿಸಿ ಅವರು ಮಾತನಾಡಿ ದರು….
ಚಾಮುಂಡಿಬೆಟ್ಟದಲ್ಲಿ ಪಾಳೇಗಾರ ಮಾರನಾಯಕನ ಪುತ್ಥಳಿ ಸ್ಥಾಪಿಸಲು ಆಗ್ರಹ
September 23, 2020ಮೈಸೂರು, ಸೆ.22(ಆರ್‍ಕೆಬಿ)- ಚಾಮುಂಡಿಬೆಟ್ಟದಲ್ಲಿ ಮೂಲನಿವಾಸಿಗಳ ಪಾಳೆಗಾರ ಕಾರ್ಗಳ್ಳಿ ಮಾರನಾಯಕನ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸ ಲಾಯಿತು. 13ನೇ ಶತಮಾನದ ಕಾಲಘಟ್ಟದಲ್ಲಿ ಮೈಸೂರಿನಲ್ಲಿ ಪಾಳೇಗಾರ ಮಾರನಾಯ ಕರು ಆಳ್ವಿಕೆ ನಡೆಸುತ್ತಿದ್ದರೆಂಬುದು ಇತಿಹಾಸ. ಮೈಸೂರಿನ ಮೂಲ ನಿವಾಸಿಗಳ ಪಾಳೇಗಾರ ಮಾರನಾಯಕನ ಇತಿಹಾಸವನ್ನು ಬಚ್ಚಿಡುವಂತಹ ಕೆಲಸ ವ್ಯವಸ್ಥಿತವಾಗಿ ನಡೆದು ಬಂದಿದೆ. ಹಾಗಾಗಿ ಇಂತಹ ನಾಯಕನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಚಾಮುಂಡಿಬೆಟ್ಟದಲ್ಲಿ ಪಾಳೇಗಾರ ಮಾರನಾಯಕನ ಪುತ್ಥಳಿ…
ಕೊರೊನಾ ನಿಯಂತ್ರಣದಲ್ಲಿ ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲ
September 23, 2020ಮೈಸೂರು, ಸೆ.22(ಪಿಎಂ)- ಕೊರೊನಾ ನಿಯಂತ್ರಿಸುವಲ್ಲಿ ಹಾಗೂ ಈ ಸಂಬಂಧ ಸರ್ಕಾರಿ ಆಸ್ಪತ್ರೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂಪೂರ್ಣ ವಿಫಲವಾಗಿವೆ ಎಂದು ಮಾಜಿ ಶಾಸಕ ವಾಸು ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದ್ದು, ಯಾವುದೇ ಸರ್ಕಾರದ ಅವಧಿಯಲ್ಲಿ ಇಂತಹ ನಿರ್ಲಕ್ಷ್ಯ ಕಂಡಿಲ್ಲ. ಸರ್ಕಾರಿ ವೈದ್ಯರು ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸು ತ್ತಿದ್ದರೆ…










