ಸೆ.27ರವರೆಗೆ ಕೊಡಗಿನಲ್ಲಿ ಸಾಧಾರಣ ಮಳೆ ಸಂಭವ
ಮೈಸೂರು

ಸೆ.27ರವರೆಗೆ ಕೊಡಗಿನಲ್ಲಿ ಸಾಧಾರಣ ಮಳೆ ಸಂಭವ

September 23, 2020

ಮೈಸೂರು, ಮಂಡ್ಯ, ಚಾ.ನಗರದಲ್ಲಿ ತುಂತುರು ಮಳೆ ಸಾಧ್ಯತೆ
ಮೈಸೂರು, ಸೆ.22(ಆರ್‍ಕೆಬಿ)- ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಸೆ.23ರಿಂದ 27ರವರೆಗೆ ಕೊಡಗು ಜಿಲ್ಲೆಯಲ್ಲಿ ಸಾಧಾ ರಣ ಮಳೆ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬೀಳುವ ಸಂಭವವಿದೆ. ಕೊಡಗಿನಲ್ಲಿ ಸೆ.23 ರಂದು 25 ಮಿ.ಮೀ., 24ರಂದು 12 ಮಿ.ಮೀ., 25ರಂದು 6 ಮಿ.ಮೀ., 26ರಂದು 9 ಮಿ.ಮೀ. ಮತ್ತು 27ರಂದು 8 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಗರಿಷ್ಠ 22-23 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 18-19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

5 ದಿನಗಳ ಅವಧಿಯಲ್ಲಿ ಮೈಸೂರಿನಲ್ಲಿ ಗರಿಷ್ಠ 27-29, ಕನಿಷ್ಠ 20-21, ಮಂಡ್ಯದಲ್ಲಿ ಗರಿಷ್ಠ 28-30, ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಹಾಗೂ ಚಾಮರಾಜ ನಗರದಲ್ಲಿ ಗರಿಷ್ಠ 27-29, ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ನಾಗನಹಳ್ಳಿ ಕ್ಷೇತ್ರ ಹವಾಮಾನ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

 

 

Translate »