ಮಂಗಳವಾರ ಮೈಸೂರಲ್ಲಿ 443 ಮಂದಿಗೆ ಸೋಂಕು
ಮೈಸೂರು

ಮಂಗಳವಾರ ಮೈಸೂರಲ್ಲಿ 443 ಮಂದಿಗೆ ಸೋಂಕು

September 23, 2020

ಮೈಸೂರು, ಸೆ.22(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಮಂಗಳವಾರ 443 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 30,751ಕ್ಕೆ ಏರಿದೆ. ಹಾಗೆಯೇ ಇಂದು 936 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಒಟ್ಟು 26,051 ಸೋಂಕಿತರು ಗುಣಮುಖರಾದಂತಾಗಿದೆ. ಮತ್ತೆ 9 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 715ಕ್ಕೆ ಏರಿಕೆಯಾಗಿದೆ. ಇನ್ನು ಸೋಂಕು ಸಕ್ರಿಯವಾಗಿರುವ 3,985 ಜನರಲ್ಲಿ 304 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 104 ಹೆಲ್ತ್ ಕೇರ್ಸ್‍ಗಳಲ್ಲಿ, 613 ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗಳಲ್ಲಿ, 301 ಖಾಸಗಿ ಆಸ್ಪತ್ರೆಗಳಲ್ಲಿ, 180 ಖಾಸಗಿ ಸಿಸಿಸಿಗಳಲ್ಲಿ ಹಾಗೂ 2,483 ಸೋಂಕಿತರು ಹೋಂ ಐಸೋ ಲೇಷನ್‍ನಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬೆಂಗಳೂರು ನಗರ 3,082, ಮೈಸೂರು 443, ತುಮಕೂರು 240, ಹಾಸನ 235, ಶಿವಮೊಗ್ಗ 234, ದಕ್ಷಿಣಕನ್ನಡ 211, ದಾವಣಗೆರೆ 198, ಬಳ್ಳಾರಿ 181, ಕೊಪ್ಪಳ 180, ಬೆಳಗಾವಿ 179, ಕಲಬುರಗಿ 168, ಉತ್ತರಕನ್ನಡ 155, ಗದಗ 134, ಮಂಡ್ಯ 134, ಚಿತ್ರದುರ್ಗ 122, ಹಾವೇರಿ 115, ರಾಯಚೂರು 115, ಉಡುಪಿ 106, ಬೆಂಗಳೂರು ಗ್ರಾಮಾಂತರ 80, ವಿಜಯಪುರ 80, ಬಾಗಲಕೋಟೆ 77, ಚಿಕ್ಕಮಗ ಳೂರು 77, ಕೊಡಗು 73, ಚಿಕ್ಕಬಳ್ಳಾಪುರ 71, ಚಾಮರಾಜನಗರ 57, ಯಾದಗಿರಿ 55, ಕೋಲಾರ 52, ಬೀದರ್ 50, ಧಾರವಾಡ 37 ಹಾಗೂ ರಾಮನಗರ ಜಿಲ್ಲೆಯಲ್ಲಿ 33 ಸೇರಿ ರಾಜ್ಯದಲ್ಲಿ ಮಂಗಳವಾರ 6,974 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,33,850ಕ್ಕೆ ಏರಿಕೆಯಾಗಿದೆ. ಇಂದು 9,073 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 4,32,450 ಸೋಂಕಿತರು ಗುಣಮುಖರಾಗಿ ದ್ದಾರೆ. ಮತ್ತೆ 83 ಸೋಂಕಿತರು ಮೃತಪಟ್ಟಿ ರುವುದಾಗಿ ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 8,228ಕ್ಕೆ ಏರಿದೆ. ರಾಜ್ಯದಲ್ಲಿನ್ನು 93,153 ಸಕ್ರಿಯ ಪ್ರಕರಣಗಳಿವೆ.

ಟೆಸ್ಟಿಂಗ್ ಸಂಖ್ಯೆ: ಮೈಸೂರು ಜಿಲ್ಲೆಯಲ್ಲಿ 2,785 ಸೇರಿದಂತೆ ರಾಜ್ಯದಲ್ಲಿ ಒಂದೇ ದಿನ 55,707 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಈವರೆಗೆ ಒಟ್ಟು 43,38,442 ಟೆಸ್ಟಿಂಗ್ ನಡೆಸಲಾಗಿದೆ.

Translate »