ಮೈಸೂರು

ಮೈಸೂರು ಮೃಗಾಲಯ ಮುಂಭಾಗದ ರಸ್ತೆ ಸಂಚಾರಕ್ಕೆ ಮುಕ್ತ
ಮೈಸೂರು

ಮೈಸೂರು ಮೃಗಾಲಯ ಮುಂಭಾಗದ ರಸ್ತೆ ಸಂಚಾರಕ್ಕೆ ಮುಕ್ತ

September 23, 2020

ಮೈಸೂರು, ಸೆ.22(ಎಸ್‍ಪಿಎನ್)- ಅಂಡರ್‍ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಮೃಗಾಲಯ ಮುಂಭಾಗದ ರಸ್ತೆ ಸಂಚಾರ ಪುನಾರಂಭವಾಗಿದೆ. ಸದಾ ವಾಹನ ದಟ್ಟಣೆ ಇರುತ್ತಿದ್ದ ಈ ರಸ್ತೆಯಲ್ಲಿ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ರಸ್ತೆ ದಾಟುವು ದಕ್ಕೂ ಕಷ್ಟವಾಗಿತ್ತು. ಅಲ್ಲದೆ ವಾಹನ ಗಳ ನಡುವೆಯೇ ಓಡಾಡುವುದರಿಂದ ಅಪಘಾತಕ್ಕೂ ಆಸ್ಪದವಾಗಿತ್ತು. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾ ಟಕ ಮೃಗಾಲಯದ ಪ್ರಾಧಿಕಾರದ ವತಿ ಯಿಂದ 1.95 ಕೋಟಿ ರೂ. ವೆಚ್ಚದಲ್ಲಿ ಮೃಗಾಲಯ ಪ್ರವೇಶ ದ್ವಾರದ ಮುಂಭಾಗ ದಲ್ಲಿ…

ಸಂಗೀತ, ನೃತ್ಯ, ನಾಟಕ ಪ್ರದರ್ಶಕ ಕಲೆಗಳು ಜನರಿಗೆ ಹತ್ತಿರ
ಮೈಸೂರು

ಸಂಗೀತ, ನೃತ್ಯ, ನಾಟಕ ಪ್ರದರ್ಶಕ ಕಲೆಗಳು ಜನರಿಗೆ ಹತ್ತಿರ

September 23, 2020

ಮೈಸೂರು, ಸೆ.22(ಆರ್‍ಕೆಬಿ)- ಪ್ರದ ರ್ಶಕ ಕಲೆಗಳಾದ ಸಂಗೀತ, ನೃತ್ಯ, ನಾಟಕ ಜನರಿಗೆ ಬಹಳ ಹತ್ತಿರವಾದದ್ದು, ಈ ಕಲೆ ಗಳು ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೊಳ ಗಾಗಿವೆ ಎಂದು ರಂಗತಜ್ಞ, ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಅಶೋಕ್ ಕುಮಾರ್ ರಂಜೀರೆ ತಿಳಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನ ಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಗೀತ, ನೃತ್ಯ, ನಾಟಕ ಈ…

ಕೊರೊನಾ ಆತಂಕದಲ್ಲೇ   ಅಧಿವೇಶನ ಆರಂಭ
ಮೈಸೂರು

ಕೊರೊನಾ ಆತಂಕದಲ್ಲೇ  ಅಧಿವೇಶನ ಆರಂಭ

September 22, 2020

ಬೆಂಗಳೂರು, ಸೆ. 21- ಕೊರೊನಾ ಆತಂಕದ ನಡುವೆ ಸೋಮವಾರ ವಿಧಾನಮಂಡಲದ ಅಧಿವೇಶನ ಆರಂಭ ಗೊಂಡಿದೆ. ಬೆಳಗ್ಗೆ 11 ಗಂಟೆಗೆ ಕಲಾಪ ಸಮಾವೇಶಗೊಳ್ಳು ತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿ ದಂತೆ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜ ಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಿ…

ಅ.1ಕ್ಕೆ ಮೈಸೂರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಆಗಮನ
ಮೈಸೂರು

ಅ.1ಕ್ಕೆ ಮೈಸೂರಿಗೆ ಅಭಿಮನ್ಯು ನೇತೃತ್ವದ ಗಜಪಡೆ ಆಗಮನ

September 22, 2020

ಮೊದಲ ದಿನ ಅರಣ್ಯ ಭವನದಲ್ಲಿ ವಾಸ್ತವ್ಯ ಮಾರನೇ ದಿನ ಅರಮನೆ ಅಂಗಳಕ್ಕೆ ಸ್ವಾಗತ ಮೈಸೂರು, ಸೆ.21(ಎಂಟಿವೈ)-ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆ ಯಾಗಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆ ಅ.1ಕ್ಕೆ ಮೈಸೂ ರಿನ ಅಶೋಕಪುರಂನ ಅರಣ್ಯ ಭವನಕ್ಕೆ ಆಗಮಿಸಲಿದ್ದು, ಮರುದಿನ(ಅ.2) ಬೆಳಿಗ್ಗೆ ಅರಮನೆ ಅಂಗಳವನ್ನು ಪ್ರವೇ ಶಿಸಲಿವೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಂಪ್ರದಾಯಿಕ ಸರಳ ದಸರಾ ಆಚರಣೆಗೆ ನಿರ್ಧರಿಸಲಾಗಿದ್ದು, ಜಂಜೂ ಸವಾರಿ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದೆ. ಹಾಗಾಗಿ ಕೇವಲ 5 ಆನೆಗಳನ್ನಷ್ಟೇ ಆಯ್ಕೆ ಮಾಡಲಾಗಿದ್ದು,…

ಕೃಷಿ ಮಸೂದೆ ವಿರುದ್ಧ ರೊಚ್ಚಿಗೆದ್ದ ರೈತ ಸಂಘಟನೆಗಳು: ಸೆ.25ರ ‘ಕರ್ನಾಟಕ ಬಂದ್’ ಬಗ್ಗೆ ಇಂದು ನಿರ್ಧಾರ
ಮೈಸೂರು

ಕೃಷಿ ಮಸೂದೆ ವಿರುದ್ಧ ರೊಚ್ಚಿಗೆದ್ದ ರೈತ ಸಂಘಟನೆಗಳು: ಸೆ.25ರ ‘ಕರ್ನಾಟಕ ಬಂದ್’ ಬಗ್ಗೆ ಇಂದು ನಿರ್ಧಾರ

September 22, 2020

ಬೆಂಗಳೂರು, ಸೆ. 21- ಕೃಷಿ ಮಸೂದೆಗಳ ವಿರುದ್ಧ ರೈತರು ರೊಚ್ಚಿಗೆದ್ದಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭವಾದ ಸೋಮವಾರ ಬೆಂಗಳೂರಿನಲ್ಲಿ ಜಾಥಾ ನಡೆಸಿದ ರೈತರು, ಅಹೋ-ರಾತ್ರಿ ಧರಣಿ ಆರಂಭಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಸೆ.25ರಂದು ಕರ್ನಾಟಕ ಬಂದ್ ಕರೆ ನೀಡುವ ಬಗ್ಗೆ ಮಂಗಳವಾರ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬೆಂಗಳೂರು ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಇಂದು ಬೆಳಿಗ್ಗೆ ಸಾವಿರಾರು ರೈತರು ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ವಿರುದ್ಧ ಘೋಷಣೆ ಕೂಗುತ್ತಾ ಜಾಥಾ ಹೊರಟರು. ಕೆಲವರು ಉರುಳು…

ಸಂಪುಟ ವಿಸ್ತರಣೆಗೆ ವರಿಷ್ಠರ ಸಂದೇಶಕ್ಕೆ ಕಾಯುತ್ತಿದ್ದೇನೆ
ಮೈಸೂರು

ಸಂಪುಟ ವಿಸ್ತರಣೆಗೆ ವರಿಷ್ಠರ ಸಂದೇಶಕ್ಕೆ ಕಾಯುತ್ತಿದ್ದೇನೆ

September 22, 2020

ಬೆಂಗಳೂರು,ಸೆ.21-ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿ ತಂತೆ ಕೇಂದ್ರದ ನಾಯಕರ ಜತೆ ಚರ್ಚೆ ನಡೆಸಿದ್ದು, ವರಿಷ್ಠರ ಸಂದೇಶಕ್ಕಾಗಿ ತಾವು ಕಾಯುತ್ತಿರುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಸೋಮವಾರ ತಿಳಿಸಿದ್ದಾರೆ. ಕೊರೊನಾ ಸೋಂಕು ಪತ್ತೆಗಾಗಿ ಸಾಯಿ ಹೆಲ್ತ್ ಟೆಕ್ನಾಲಜಿ ಸಂಸ್ಥೆಯ ಸಂಚಾರಿ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಉದ್ಘಾಟಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವರಿಷ್ಠರಿಂದ ಸೂಚನೆ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ ಯಾಗಲಿದೆ. ಆದರೆ ಈವರೆಗೆ ತಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾಮೀಣ…

ನಟಿ ರಾಗಿಣಿ, ಸಂಜನಾಗೆ ಇನ್ನು 3 ದಿನ ಜೈಲು ಫಿಕ್ಸ್
ಮೈಸೂರು

ನಟಿ ರಾಗಿಣಿ, ಸಂಜನಾಗೆ ಇನ್ನು 3 ದಿನ ಜೈಲು ಫಿಕ್ಸ್

September 22, 2020

ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಪ್ರಕರಣ ಸಂಬಂಧ ನಟಿ ರಾಗಿಣಿ, ಸಂಜನಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಎನ್‍ಡಿಪಿಎಸ್ ವಿಶೇಷ ಕೋರ್ಟ್ ಸೆ.24ಕ್ಕೆ ಮುಂದೂ ಡಿದೆ. ರಾಗಿಣಿ ಮತ್ತು ಸಂಜನಾರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯ ವಾದ ಹಿನ್ನೆಲೆಯಲ್ಲಿ ಅವರನ್ನು ಎನ್‍ಡಿಪಿಎಸ್ ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದ್ದರಿಂದ ನಟಿಯರಿಬ್ಬರೂ ಇನ್ನು ಮೂರು ದಿನ ಜೈಲಿನಲ್ಲೇ ಕಳೆಯಬೇಕಾಗುತ್ತದೆ. ರಾಗಿಣಿ ಜಾಮೀನು ಅರ್ಜಿಗೆ ಸರ್ಕಾರದ ಪರ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿ, ಕಳೆದ 5…

ಮೈಸೂರಲ್ಲಿ ಮುಂಜಾನೆ ವೃದ್ಧ ದಂಪತಿ ಕಟ್ಟಿ ಹಾಕಿ ಮನೆ ದರೋಡೆ ಪ್ರಕರಣ: ಐವರ ಬಂಧನ
ಮೈಸೂರು

ಮೈಸೂರಲ್ಲಿ ಮುಂಜಾನೆ ವೃದ್ಧ ದಂಪತಿ ಕಟ್ಟಿ ಹಾಕಿ ಮನೆ ದರೋಡೆ ಪ್ರಕರಣ: ಐವರ ಬಂಧನ

September 22, 2020

ಮೈಸೂರು, ಸೆ. 21(ಆರ್‍ಕೆ)- ಮೈಸೂರಿನ ವಿವೇಕಾನಂದನಗರದಲ್ಲಿ 20 ದಿನಗಳ ಹಿಂದೆ ವೃದ್ಧ ದಂಪತಿ ಕೈಕಾಲುಗಳನ್ನು ಕಟ್ಟಿಹಾಕಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಐವರು ಖದೀ ಮರ ಬಂಧಿಸುವಲ್ಲಿ ಮೈಸೂರು ದೇವರಾಜ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಸಾತಗಳ್ಳಿ ಬಸ್ ಡಿಪೋ ಬಳಿಯ ಡಾ.ಅಂಬೇಡ್ಕರ್ ನಗರದ ನಿವಾಸಿ ಲೇಟ್ ರೆಹ ಮಾನ್ ಶರೀಫ್ ಮಗ ಜಬಿಉಲ್ಲಾ ಶರೀಫ್ ಅಲಿ ಯಾಸ್ ಜಬಿ(27), ಉದಯಗಿರಿಯ ಮಹಮ್ಮ ದೀಯ ಮಸೀದಿ ರಸ್ತೆ 11ನೇ ಕ್ರಾಸ್ ನಿವಾಸಿ ರಫೀಕ್ ಅಹಮದ್ ಮಗ ಇಬ್ರಾಹಿಂ…

ಬೆಂಗಳೂರು ಸ್ಫೋಟದ ಆರೋಪಿ ಅರೆಸ್ಟ್
ಮೈಸೂರು

ಬೆಂಗಳೂರು ಸ್ಫೋಟದ ಆರೋಪಿ ಅರೆಸ್ಟ್

September 22, 2020

ಬೆಂಗಳೂರು,ಸೆ.21-ಸಿಲಿಕಾನ್ ಸಿಟಿಯನ್ನು ತಲ್ಲಣಗೊಳಿ ಸಿದ್ದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯನ್ನು ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಪೆÇಲೀಸರು ಹೆಡೆಮುರಿ ಕಟ್ಟಿದ್ದಾರೆ. ಶೋಯೆಬ್ ಬಂಧಿತ ಆರೋಪಿ ಯಾಗಿದ್ದು, ಎಟಿಎಸ್ ಪೆÇಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. 2008 ರಿಂದ ಆರೋಪಿ ತಲೆಮರೆಸಿ ಕೊಂಡಿದ್ದ. ಆದರೆ ಪೆÇಲೀಸರು ಮಾತ್ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಹುಡು ಕಾಟದಲ್ಲೇ ತೊಡಗಿದ್ದರು. ಹೀಗೆ ತನಿಖೆ ನಡೆಸುವಾಗ ಕೇರಳ ದಲ್ಲಿರುವುದು ಪತ್ತೆಯಾಗಿದ್ದು, ಹೊಂಚು ಹಾಕಿ ಆರೋಪಿ ಯನ್ನು ಬಂಧಿಸಿದ್ದಾರೆ. ಈ ಮೂಲಕ ಸರಣಿ ಬಾಂಬ್ ಸ್ಫೋಟ ಪ್ರಕರಣದ…

ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸಿದರೆ ಕಠಿಣ ಕ್ರಮ
ಮೈಸೂರು

ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸಿದರೆ ಕಠಿಣ ಕ್ರಮ

September 22, 2020

ಮೈಸೂರು, ಸೆ. 21(ಆರ್‍ಕೆ)- ಕಳೆದ ಶನಿವಾರದಿಂದ ಆರಂಭವಾಗಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ಅಕ್ರಮ ಬೆಟ್ಟಿಂಗ್ ದಂಧೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡ ಎಚ್ಚರಿಕೆ ನೀಡಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ಭಾಗಿಯಾಗುತ್ತಿರುವ ಕುರಿತಂತೆ ಮುಂಜಾಗ್ರತಾ ಕ್ರಮಕ್ಕಾಗಿ ಈಗಾಗಲೇ ಮೈಸೂರು ನಗರದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾ ಗಿದ್ದು, ಎಲ್ಲಾ ಪೊಲೀಸ್ ಠಾಣೆಗಳ ವಿಶೇಷ ವಿಭಾಗ (ಎಸ್‍ಬಿ)ದ ಸಿಬ್ಬಂದಿ ಆಯಾ ಠಾಣಾ ಸರಹದ್ದಿನಲ್ಲಿ…

1 428 429 430 431 432 1,611
Translate »