ಮೈಸೂರು ಮೃಗಾಲಯ ಮುಂಭಾಗದ ರಸ್ತೆ ಸಂಚಾರಕ್ಕೆ ಮುಕ್ತ
ಮೈಸೂರು

ಮೈಸೂರು ಮೃಗಾಲಯ ಮುಂಭಾಗದ ರಸ್ತೆ ಸಂಚಾರಕ್ಕೆ ಮುಕ್ತ

September 23, 2020

ಮೈಸೂರು, ಸೆ.22(ಎಸ್‍ಪಿಎನ್)- ಅಂಡರ್‍ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಮೃಗಾಲಯ ಮುಂಭಾಗದ ರಸ್ತೆ ಸಂಚಾರ ಪುನಾರಂಭವಾಗಿದೆ.

ಸದಾ ವಾಹನ ದಟ್ಟಣೆ ಇರುತ್ತಿದ್ದ ಈ ರಸ್ತೆಯಲ್ಲಿ ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ರಸ್ತೆ ದಾಟುವು ದಕ್ಕೂ ಕಷ್ಟವಾಗಿತ್ತು. ಅಲ್ಲದೆ ವಾಹನ ಗಳ ನಡುವೆಯೇ ಓಡಾಡುವುದರಿಂದ ಅಪಘಾತಕ್ಕೂ ಆಸ್ಪದವಾಗಿತ್ತು. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕರ್ನಾ ಟಕ ಮೃಗಾಲಯದ ಪ್ರಾಧಿಕಾರದ ವತಿ ಯಿಂದ 1.95 ಕೋಟಿ ರೂ. ವೆಚ್ಚದಲ್ಲಿ ಮೃಗಾಲಯ ಪ್ರವೇಶ ದ್ವಾರದ ಮುಂಭಾಗ ದಲ್ಲಿ ಅಂಡರ್‍ಪಾಸ್ ನಿರ್ಮಾಣ ಕೈಗೊಂಡು, ಜನವರಿಯಲ್ಲೇ ಕಾಮ ಗಾರಿಗೆ ಚಾಲನೆ ನೀಡಲಾಗಿತ್ತು.

ಇದೀಗ ಅಂಡರ್‍ಪಾಸ್ ಕಾಮ ಗಾರಿ ಶೇ.80ರಷ್ಟು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮೃಗಾಲಯ ಮುಂಭಾಗ ವಾಹನ ಸಂಚಾರಕ್ಕಿದ್ದ ನಿರ್ಬಂಧವನ್ನು ಸೋಮವಾರದಿಂದ ತೆರವುಗೊಳಿಸಲಾ ಗಿದೆ. ಇದರಿಂದ ಲಘು ವಾಹನಗಳು ಸೇರಿ ದಂತೆ ಚಾಮುಂಡಿಬೆಟ್ಟ, ತಿ.ನರಸೀಪುರ, ನಂಜನಗೂಡು ಕಡೆಗೆ ಬಸ್‍ಗಳೂ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇನ್ನುಳಿದ ಕಾಮಗಾರಿ ದಸರಾ ವೇಳೆಗೆ ಪೂರ್ಣಗೊಳ್ಳ ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರಕ್ಕೆ ಮುಕ್ತ: ಮೈಸೂರು ಮೃಗಾಲಯ ಮುಂಭಾಗ ಅಂಡರ್ ಪಾಸ್ ಮೇಲ್ಛಾವಣಿ ಕಾಮಗಾರಿ ಪೂರ್ಣ ಗೊಂಡಿರುವ ಹಿನ್ನೆಲೆ ವಾಹನಗಳ ಸಂಚಾ ರಕ್ಕೆ ಅವಕಾಶ ನೀಡಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಎಸ್.ಎನ್. ಸಂದೇಶ್‍ಕುಮಾರ್ `ಮೈಸೂರು ಮಿತ್ರ’ ನಿಗೆ ತಿಳಿಸಿದರು.

 

 

Translate »