ಸಂಗೀತ, ನೃತ್ಯ, ನಾಟಕ ಪ್ರದರ್ಶಕ ಕಲೆಗಳು ಜನರಿಗೆ ಹತ್ತಿರ
ಮೈಸೂರು

ಸಂಗೀತ, ನೃತ್ಯ, ನಾಟಕ ಪ್ರದರ್ಶಕ ಕಲೆಗಳು ಜನರಿಗೆ ಹತ್ತಿರ

September 23, 2020

ಮೈಸೂರು, ಸೆ.22(ಆರ್‍ಕೆಬಿ)- ಪ್ರದ ರ್ಶಕ ಕಲೆಗಳಾದ ಸಂಗೀತ, ನೃತ್ಯ, ನಾಟಕ ಜನರಿಗೆ ಬಹಳ ಹತ್ತಿರವಾದದ್ದು, ಈ ಕಲೆ ಗಳು ಶಿಕ್ಷಣ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯಕ್ಕೊಳ ಗಾಗಿವೆ ಎಂದು ರಂಗತಜ್ಞ, ಸಾಹಿತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಅಶೋಕ್ ಕುಮಾರ್ ರಂಜೀರೆ ತಿಳಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನ ಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಗೀತ, ನೃತ್ಯ, ನಾಟಕ ಈ ಪ್ರದರ್ಶಕ ಕಲೆಗಳನ್ನು ಕಲಿಸುವ ಮೂಲಕ ಈ ಮೂರು ಪ್ರಕಾರಗಳನ್ನು ಸಂಗೀತ ವಿವಿ ಜೀವಂತವಾಗಿರಿಸಿದೆ ಎಂದರು.

ಬೇರೆ ವಿಶ್ವವಿದ್ಯಾನಿಲಯಗಳು ಜನರ ಜೊತೆಗೆ ಬೆರೆಯುವುದಿಲ್ಲ. ಆದರೆ ನಿರಂ ತರರಾಗಿ ಸಂಗೀತ ವಿವಿ ಸಂಗೀತ, ನೃತ್ಯ, ನಾಟಕಗಳನ್ನು ಕಲಿಸುವ ಮೂಲಕ ಜನ ರಿಗೆ ಹತ್ತಿರವಾಗಿದೆ ಎಂದು ಹೇಳಿದರು.

ಸಂಗೀತ ವಿವಿಯಲ್ಲಿ ಪದವಿ ಪಡೆದು ಯಶಸ್ವಿಯಾದರೆ ನಿರುದ್ಯೋಗ ಇರುವು ದಿಲ್ಲ. ಸ್ವತಂತ್ರವಾಗಿ ಬದುಕು ಕಲೆ ಇದು. ಜೊತೆಗೆ ದೈಹಿಕ, ಮಾನಸಿಕ ಆರೋಗ್ಯದ ಜೊತೆಗೆ ಸಮಾಜದ ಆರೋಗ್ಯವನ್ನು ಈ ಕಲೆಗಳು ಕಾಪಾಡುತ್ತಾ ಬಂದಿವೆ. ಈ ಕಲೆ ಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಗೀತ ವಿವಿ ಕೆಲಸ ಮಾಡುತ್ತಿದೆ. ಆದರೆ ಕೊರೊನಾ ಕಾರಣಕ್ಕಾಗಿ ಸರ್ಕಾರ ಮತ್ತು ಜನರ ಪ್ರೋತ್ಸಾಹ ನಿಂತು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಬಿಡುಗಡೆಯಾದ `ಪ್ರದ ರ್ಶಕ ಕಲೆಗಳು ಅವಶ್ಯಕತೆ ಮತ್ತು ಪ್ರಸ್ತು ತತೆ’ ಹಾಗೂ `ಪರ್ಫಾರ್ಮಿಂಗ್ ಆಟ್ರ್ಸ್ ವಾಯ್ಸ್ ಆಫ್ ಪೀಪಲ್’ ಪುಸ್ತಕಗಳ ಕುರಿತು ಪ್ರಸ್ತಾಪಿಸಿದ ಅವರು, ಪ್ರಯೋ ಜನ ದೃಷ್ಟಿಯಿಂದ ಈ ಎರಡು ಪುಸ್ತಕ ಗಳು ಬಹಳ ಉಪಯುಕ್ತವಾಗಿವೆ. ವ್ಯಕ್ತಿತ್ವ ವಿಕಸನಕ್ಕೆ ಸಂಗೀತ ಬಹಳ ಪ್ರೇರಕವಾಗಿ ಕೆಲಸ ಮಾಡುವ ಬಗ್ಗೆ ಕೃತಿಯಲ್ಲಿ ತಿಳಿಸ ಲಾಗಿದೆ ಎಂದು ಹೇಳಿದರು.

ಸಂಗೀತ ವಿವಿ ಕುಲಸಚಿವ ಪ್ರೊ. ನಾಗೇಶ್ ವಿ.ಬೆಟ್ಟಕೋಟೆ ಅಧ್ಯಕ್ಷತೆ ವಹಿಸಿ ದ್ದರು. ಬಾಸುದೇವ್ ಸೋಮಾನಿ ಕಾಲೇ ಜಿನ ನಿವೃತ್ತ ಪ್ರಾಂಶುಪಾಲ ಹಾಗೂ ರಂಗ ನಿರ್ದೇಶಕ ಪ್ರೊ. ಎಸ್.ಆರ್.ರಮೇಶ್, ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜು ಸಂಗೀತ ವಿಭಾಗದ ಮುಖ್ಯಸ್ಥರಾದ ಬಹುಶ್ರುತ ವಿದ್ವಾಂಸ ಪ್ರೊ.ಸಿ.ಎ.ಶ್ರೀಧರ್, ಸಂಗೀತ ವಿವಿ ಕುಲ ಸಚಿವ ಪ್ರೊ.ಆರ್. ರಾಜೇಶ್, ಹಣಕಾಸು ಅಧಿಕಾರಿ ರೇಣುಕಾಂಬ, ಉಪನ್ಯಾಸಕ ಡಾ. ದುಂಡಯ್ಯಾ ಪೂಜೇರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »