ಬೆಂಗಳೂರು, ಸೆ. 21- ಕೊರೊನಾ ಆತಂಕದ ನಡುವೆ ಸೋಮವಾರ ವಿಧಾನಮಂಡಲದ ಅಧಿವೇಶನ ಆರಂಭ ಗೊಂಡಿದೆ. ಬೆಳಗ್ಗೆ 11 ಗಂಟೆಗೆ ಕಲಾಪ ಸಮಾವೇಶಗೊಳ್ಳು ತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿ ದಂತೆ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜ ಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ನೀಡಿ ಗೌರವಿಸಲಾಗಿತ್ತು. ಅವರನ್ನು ಪಕ್ಷಾತೀತವಾಗಿ ಎಲ್ಲರೂ ಪ್ರೀತಿಸುತ್ತಿದ್ದರು. ಪ್ರೀತಿಯಿಂದ ಅವರನ್ನು ಪ್ರಣಬ್ ದಾದಾ ಎಂದೇ ಕರೆಯ ಲಾಗುತ್ತಿತ್ತು ಎಂದು ಸ್ಮರಿಸಿದರು. ರಾಜ್ಯಸಭಾ ಸದಸ್ಯ ರಾಗಿದ್ದ ದಿವಂಗತ ಅಶೋಕ ಗಸ್ತಿ ಅವರು ಅತ್ಯಂತ ಸರಳ, ಸಜ್ಜನಿಕೆಗೆ ಪಾತ್ರರಾಗಿದ್ದರು ಎಂದು ಹೇಳಿದರು.
ಮಾಜಿ ಸಚಿವ ಎಂ.ವಿ.ರಾಜಶೇಖರನ್ ಅವರು ಕ್ವಿಟ್ ಇಂಡಿಯಾ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಯಾಗಿದ್ದರು. ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಶಾಸಕ ರಾಗಿ, ವಿಧಾನಪರಿಷತ್ ಸದಸ್ಯರಾಗಿ ನಾಲ್ಕೂ ಸದನಗಳಲ್ಲಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದ್ದು. ಗ್ರಾಮೀಣಾಭಿ ವೃದ್ಧಿ ಕುರಿತು 100ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿ ಸಿದ್ದಾರೆ. ಗಾಂಧಿ ತತ್ವವನ್ನು ಕೊನೆಯವರೆಗೂ ಜೀವನ ದಲ್ಲಿ ಅಳವಡಿಸಿಕೊಂಡ ಸರಳ ಸಜ್ಜನಿಕೆಯ ರಾಜ ಕಾರಣಿಯಾಗಿದ್ದರು ಎಂದು ಹೇಳಿದರು.
ಅದೇ ರೀತಿ ರಾಜಾಮದನ್ ಗೋಪಾಲ್ ನಾಯಕ್, ಮಾಜಿ ಸಚಿವ ಜಿ.ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್, ರತನ್ ಸಿಂಗ್, ವಿನ್ನಿಫ್ರೆಡ್ ಫರ್ನಾಂ ಡಿಸ್, ಸಿ.ಗುರುಸ್ವಾಮಿ, ಎಂ.ಜೆ.ಅಪ್ಪಾಜಿಗೌಡ, ಕೇಶವಾನಂದ ಭಾರತೀ ಸ್ವಾಮೀಜಿ, ಮಾಜಿ ಶಾಸಕ ಅಪ್ಪಾಜಿ ಗೌಡ, ಶಿರಾ ಶಾಸಕ ಸತ್ಯನಾರಾಯಣ, ಸಾಹಿತಿ ಕೆ.ಎಸ್.ನಿಸಾರ್ ಅಹ್ಮದ್, ಶ್ಯಾಮಲಾ ಜಿ ಭಾವೆ, ಪಂಡಿತ್ ಜಸ್‍ರಾಜ್, ಯಕ್ಷಗಾನ ಕಲಾವಿದ ಹೊಸತೋಟ ಗಜಾನನ ಭಟ್ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಗಡಿಯಲ್ಲಿ ಉಂಟಾದ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರು ಮತ್ತು ಪ್ರವಾಹದಲ್ಲಿ ಮೃತಪಟ್ಟವರಿಗೂ ಸಂತಾಪ ಸೂಚಿಸಲಾಯಿತು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಕಳೆದ ಅಧಿವೇಶನ ಮತ್ತು ಈ ಅವಧಿಯ ನಡುವೆ ಹಲವು ಗಣ್ಯರು ನಮ್ಮನ್ನು ಅಗಲಿದ್ದಾರೆ. ಶಿರಾ ಶಾಸಕ ಸತ್ಯನಾರಾಯಣ ಬಡವರು ಮತ್ತು ರೈತರ ಪರವಾಗಿದ್ದರು. ಜನಾನುರಾಗಿ ಯಾಗಿದ್ದ ಅವರ ನಿಧನದಿಂದ ಉತ್ತಮ ಶಾಸಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುಮಾಸ್ತ ಕೆಲಸದಿಂದ ರಾಷ್ಟ್ರಪತಿ ಹುದ್ದೆಯವರೆಗಿನ ರಾಜಕೀಯ ಜೀವನ ಅದ್ಭುತವಾದುದು. ಅತ್ಯುತ್ತಮ ರಾಜಕಾರಣಿಯಾಗಿ ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರವಾದುದು. ರಾಷ್ಟ್ರಪತಿ ಭವನವನ್ನು ಜನರಿಗೆ ಹತ್ತಿರವಾಗಿಸಿ, ಹೆಚ್ಚು ಪ್ರಜಾಸತ್ತಾತ್ಮಕವಾಗಿಸಿದ್ದರು. ಅವರ ನಿಧನದಿಂದ ಸಮರ್ಥ ಮತ್ತು ಅತ್ಯುತ್ತಮ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚಿಸಿದರು.
ಅದೇ ರೀತಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ, ಮಾಜಿ ಸಚಿವ ಎಂ.ವಿ.ರಾಜಶೇಖ ರನ್, ರಾಜಾಮದನ್ ಗೋಪಾಲ್ ನಾಯಕ್, ಮಾಜಿ ಸಚಿವ ಜಿ.ರಾಮಕೃಷ್ಣ, ಮಾಜಿ ಸಂಸದ ರಾಜಾ ರಂಗಪ್ಪ ನಾಯಕ್, ರತನ್ ಸಿಂಗ್, ವಿನ್ನಿಫ್ರೆಡ್ ಫರ್ನಾಂಡಿಸ್, ಸಿ.ಗುರುಸ್ವಾಮಿ, ಎಂ.ಜೆ.ಅಪ್ಪಾಜಿಗೌಡ, ಕೇಶವಾನಂದ ಭಾರತೀ ಸ್ವಾಮೀಜಿ, ಮಾಜಿ ಶಾಸಕ ಅಪ್ಪಾಜಿ ಗೌಡ, ಶಿರಾ ಶಾಸಕ ಸತ್ಯನಾರಾಯಣ, ಸಾಹಿತಿ ಕೆ.ಎಸ್. ನಿಸಾರ್ ಅಹ್ಮದ್, ಶ್ಯಾಮಲಾ ಜಿ.ಭಾವೆ, ಪಂಡಿತ್ ಜಸ್‍ರಾಜ್, ಯಕ್ಷಗಾನ ಕಲಾವಿದ ಹೊಸತೋಟ ಗಜಾನನ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಕ ನಿರ್ಣಯ ಮೇಲೆ ಮಾತನಾಡಿ, ಮೃತರ ಗುಣಗಾನ ಮಾಡಿದರು.
ಪ್ರಣಬ್ ಮುಖರ್ಜಿ ಅವರು ಹಣಕಾಸು, ವಿದೇಶಾಂಗ, ರಕ್ಷಣಾ ಸೇರಿ ಕೇಂದ್ರದ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಇದರ ಜೊತೆಗೆ ವಾಣಿಜ್ಯ, ಕೈಗಾರಿಕಾ ಖಾತೆಗಳನ್ನು ನಿಭಾಯಿಸಿದ್ದರು. ಪಿ.ವಿ.ನರಸಿಂಹರಾವ್ ಪ್ರಧಾನಮಂತ್ರಿಯಾಗಿದ್ದಾಗ 5 ವರ್ಷಗಳ ಕಾಲ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. ಕೆಲವು ಭಿನ್ನಾಭಿಪ್ರಾಯ ಉಂಟಾಗಿದ್ದ ರಿಂದ ಬೇರೆ ಪಕ್ಷಕ್ಕೆ ಹೋದರೂ ಮತ್ತೆ ಕಾಂಗ್ರೆಸ್‍ಗೆ ಮರಳಿ ಬಂದಿದ್ದರು. 2012ರಲ್ಲಿ ರಾಷ್ಟ್ರಪತಿಯಾದ ಮೇಲೆ ತಾವು ರಾಜ್ಯದ ಮುಖ್ಯಮಂತ್ರಿಯಾಗಿದ್ದೆ, ಅವರ ವ್ಯಕ್ತಿತ್ವ ಬಹಳ ಎತ್ತರಕ್ಕೆ ಬೆಳೆದಿತ್ತು. ಇತಿಹಾಸ, ರಾಜಕೀಯ, ಅರ್ಥವ್ಯವಸ್ಥೆ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಪತ್ರಕರ್ತರೂ, ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು. ದೇಶದ ಹಣಕಾಸು ವ್ಯವಸ್ಥೆ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದರು. ಉತ್ತಮ ಹಣಕಾಸು ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗ ಅನೇಕ ಬಾರಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಯಾವುದೇ ಮಸೂದೆಗಳು ಅಂಕಿತಕ್ಕೆ ಹೋದಾಗ, ಕೂಡಲೇ ಅವರು ಅಂಕಿತ ಹಾಕುತ್ತಿದ್ದರು. ಎಸ್‍ಟಿಪಿ ಟಿಎಸ್‍ಪಿ ಮಸೂದೆ ವಿಚಾರವಾಗಿ ಅವರನ್ನು ತಾವು ಭೇಟಿ ಮಾಡಿ ವಿವರಿಸಿ ದೆಹಲಿಯಿಂದ ಬೆಂಗಳೂರಿಗೆ ಬರುವ ಮೊದಲು ಅಂಕಿತ ಹಾಕಿ ಕಳುಹಿಸಿದ್ದರು ಎಂದು ಸ್ಮರಿಸಿದರು.
ಕೊರೊನಾ ಭೀತಿ; ಪ್ರಧಾನಿ ಮೋದಿ ಸೂಚನೆ ಹಿನ್ನೆಲೆ ವಿಧಾನಮಂಡಲ ಅಧಿವೇಶನ ಮೊಟಕು: ಸೆ.26ಕ್ಕೆ ಅಂತ್ಯ
ಬೆಂಗಳೂರು, ಸೆ.21(ಕೆಎಂಶಿ)- ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಹಾಗೂ ಕೊರೊನಾ ಭೀತಿ ಯಿಂದ ವಿಧಾನಮಂಡಲದ ಅಧಿವೇಶನ ಸೆ.26ಕ್ಕೆ ಮೊಟಕು ಗೊಳ್ಳಲಿದೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯಲ್ಲಿ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿಯ ಸಭೆಯಲ್ಲಿ ಅಧಿವೇಶನ ಮೊಟಕು ಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.
ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಅವರು, ಇತ್ತೀಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಭೇಟಿಯಾಗಿದ್ದ ಸಂದರ್ಭದಲ್ಲಿ ಸಲಹೆ ಮಾಡಿದ್ದರು.
ವಿಧಾನ ಮಂಡಲದ ಅಧಿವೇಶನವನ್ನು ದೀರ್ಘಕಾಲ ನಡೆಸಬೇಡಿ 3 ದಿನಕ್ಕೆ ಮೊಟಕುಗೊಳಿಸಿ, ಸೋಂಕು ದೂರ ವಾದ ನಂತರ ಮತ್ತೆ ಅಧಿವೇಶನ ನಡೆಸುವಂತೆ ಸೂಚಿಸಿ ದ್ದರು. ಅಧಿವೇಶನ ಆರಂಭವಾದ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಸೇರಿ ದಂತೆ ಉಭಯ ಸದನಗಳ ಸದಸ್ಯರಲ್ಲದೆ, ಸಚಿವಾ ಲಯದ 90 ಮಂದಿಗೆ ಸೋಂಕು ತಗುಲಿದೆ.
ಇಂತಹ ಸನ್ನಿವೇಶದಲ್ಲಿ ಅಧಿವೇಶನವನ್ನು ದೀರ್ಘ ಕಾಲ ನಡೆಸಿದರೆ, ಜನಪ್ರತಿನಿಧಿಗಳಿಗೆ ಅಷ್ಟೇ ಅಲ್ಲದೆ, ನೌಕರ ರಿಗೂ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಸೋಂಕಿಗೆ ಹೆದರಿ ಹಲವಷ್ಟು ಸದಸ್ಯರು ಸದನದಿಂದ ದೂರ ಉಳಿಯುತ್ತಾರೆ. ಮೊದಲ ದಿನವೇ 60ಕ್ಕೂ ಹೆಚ್ಚು ವಿಧಾನಸಭಾ ಸದಸ್ಯರು ಗೈರು ಹಾಜರಾಗಿದ್ದರು.
ಸದಸ್ಯರನ್ನು ಹೊರಗಿಟ್ಟು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಸೋಂಕಿನ ಬಗ್ಗೆ ಸರ್ಕಾ ರವೇ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು.
ಹೀಗಾಗಿ ಸದನವನ್ನು 3 ದಿನಗಳಿಗೆ ಮುಗಿಸೋಣ ಎಂದು ಪ್ರತಿ ಪಕ್ಷದ ನಾಯಕರಿಗೆ ಮನವಿ ಮಾಡಿಕೊಂಡಿದ್ದರು. ಸ್ವತಃ ಮುಖ್ಯಮಂತ್ರಿ ಅವರೇ, ಸಿದ್ದರಾಮಯ್ಯ, ಕುಮಾರ ಸ್ವಾಮಿ, ಡಿ.ಕೆ.ಶಿವಕುಮಾರ್ ಅವರನ್ನು ದೂರವಾಣಿ ಮೂಲಕÀ ಸಂಪರ್ಕಿಸಿ, ಪ್ರಧಾನಿ ನೀಡಿರುವ ಸೂಚನೆ ಮತ್ತು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸದನ ಮೊಟಕುಗೊಳಿ ಸಲು ಸಹಕರಿಸಿ ಎಂದು ಮನವಿ ಮಾಡಿದ್ದರು. ಮುಖ್ಯಮಂತ್ರಿ ಅವರ ಮನವಿಗೆ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸಿ ಸದನ 3 ವಾರ ನಡೆಸಲು ಅವಕಾಶ ಕಲ್ಪಿಸಿ ಎಂದು ಒತ್ತಾಯಿಸಿದ್ದರು. ಇಂದು ನಡೆದ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರ ಮತ್ತು ಪ್ರತಿ ಪಕ್ಷದ ನಾಯಕರ ನಡುವೆ ಸುದೀರ್ಘ ಮಾತುಕತೆ ನಡೆದು ಮೂರು ದಿನಗಳ ಬದಲಿಗೆ ಆರು ದಿನಗಳವರೆಗೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಉಭಯ ಸದನಗಳು ಬೆಳಗ್ಗೆ 10 ಗಂಟೆಗೆ ಸೇರಬೇಕು. ಎಲ್ಲ ವಿಧೇಯಕಗಳ ಬಗ್ಗೆ ಸುದೀರ್ಘ ಚರ್ಚೆಯಾಗಬೇಕು. ಇದಕ್ಕೆ ಅವಕಾಶ ನೀಡಬೇಕು ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಲಹೆಗೆ ಸಮ್ಮತಿಸಿದ ಮುಖ್ಯಮಂತ್ರಿ ಅವರು ಎಲ್ಲ 32 ವಿಧೇಯಕ ಮಂಡಿಸುತ್ತೇವೆ ಚರ್ಚೆಗೆ ಮುಕ್ತ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಈ ಮೊದಲೇ ನಿಗದಿಯಾದಂತೆ ವಿಧಾನ ಮಂಡಲದ ಅಧಿವೇಶನ ಸೆಪ್ಟೆಂಬರ್ ಅಂತ್ಯದವರೆಗೆ ನಡೆಯಬೇಕಿತ್ತು. ಅಗತ್ಯ ಕಂಡುಬಂದರೆ ಮತ್ತೆ ಸಲಹಾ ಸಮಿತಿ ಸಭೆಯಲ್ಲಿ ಕಲಾಪ ಮುಂದುವರೆಸುವ ಬಗ್ಗೆ ನಿರ್ಣಯ ಕೈಗೊಂಡಿತ್ತು.