ಬೆಂಗಳೂರು,ಸೆ.21-ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿ ತಂತೆ ಕೇಂದ್ರದ ನಾಯಕರ ಜತೆ ಚರ್ಚೆ ನಡೆಸಿದ್ದು, ವರಿಷ್ಠರ ಸಂದೇಶಕ್ಕಾಗಿ ತಾವು ಕಾಯುತ್ತಿರುವುದಾಗಿ ಮುಖ್ಯಮಂತ್ರಿ ಯಡಿ ಯೂರಪ್ಪ ಸೋಮವಾರ ತಿಳಿಸಿದ್ದಾರೆ.
ಕೊರೊನಾ ಸೋಂಕು ಪತ್ತೆಗಾಗಿ ಸಾಯಿ ಹೆಲ್ತ್ ಟೆಕ್ನಾಲಜಿ ಸಂಸ್ಥೆಯ ಸಂಚಾರಿ ಪ್ರಯೋಗಾಲಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನ ತಮ್ಮ ಗೃಹ ಕಚೇರಿಯಲ್ಲಿ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ವರಿಷ್ಠರಿಂದ ಸೂಚನೆ ಬರುತ್ತಿದ್ದಂತೆ ಮಂತ್ರಿಮಂಡಲ ವಿಸ್ತರಣೆ ಯಾಗಲಿದೆ. ಆದರೆ ಈವರೆಗೆ ತಮಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಇಂದು ಲೋಕಾರ್ಪಣೆ ಮಾಡಿರುವ ಸುಸಜ್ಜಿತ ಸಂಚಾರ ಪ್ರಯೋ ಗಾಲಯ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.
ಸಾಯಿ ಹೆಲ್ತ್ ಟೆಕ್ನಾಲಜಿ ಸಂಸ್ಥೆ 65 ಲಕ್ಷ ರೂ ವೆಚ್ಚದಲ್ಲಿ ಇಂತಹ ಪ್ರಯೋಗಾಲಯ ಸ್ಥಾಪಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇಂತಹ ತಲಾ ಒಂದು ಪ್ರಯೋಗಾಲಯ ನೀಡುವುದಾಗಿ ಭರವಸೆ ನೀಡಿದೆ. ಇದರಿಂದ ಸೋಂಕು ಪತ್ತೆಗೆ ನೆರವಾಗಲಿದೆ ಎಂದರು.