ಬೈಕ್‍ಗೆ ಲಾರಿ ಡಿಕ್ಕಿ: ಐಟಿಐ ಕಾಲೇಜು ಪ್ರಿನ್ಸಿಪಾಲ್ ದುರ್ಮರಣ
ಮೈಸೂರು

ಬೈಕ್‍ಗೆ ಲಾರಿ ಡಿಕ್ಕಿ: ಐಟಿಐ ಕಾಲೇಜು ಪ್ರಿನ್ಸಿಪಾಲ್ ದುರ್ಮರಣ

September 23, 2020

ಮೈಸೂರು,ಸೆ.22(ಆರ್‍ಕೆ)-ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಐಟಿಐ ಕಾಲೇಜು ಪ್ರಾಂಶುಪಾಲರು ಸಾವನ್ನ ಪ್ಪಿರುವ ಘಟನೆ ಮೈಸೂರಿನ ಜೆ.ಪಿ.ನಗರ ಬಳಿ ರಿಂಗ್ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಲೇಟ್ ಸ್ವಾಮಿನಾಥ್ ಅವರ ಮಗ ವೇಣುಗೋಪಾಲ್ (53) ಸಾವನ್ನಪ್ಪಿದವರು. ವಿಶ್ವೇಶ್ವರನಗರದ ಜನ ಸೇವಾ ಕೈಗಾರಿಕಾ ಸಂಸ್ಥೆಯಲ್ಲಿ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಹೀರೋ ಹೋಂಡಾ ಪ್ಯಾಷನ್ ಪ್ಲಸ್ (ಕೆಎ 09-ಹೆಚ್‍ವೈ 7079) ಬೈಕ್‍ನಲ್ಲಿ ನಂಜನಗೂಡು ರಸ್ತೆಯಿಂದ ರಿಂಗ್ ರೋಡ್‍ನಲ್ಲಿ ಬರುತ್ತಿದ್ದಾಗ, ರೈಲ್ವೇ ಅಂಡರ್ ಬ್ರಿಡ್ಜ್ ದಾಟಿ ಮುಂದೆ ಬಂದು ಜೆ.ಪಿ.ನಗರದ ರಮಾಬಾಯಿನಗರ ಸಮೀಪ ರಿಂಗ್ ರಸ್ತೆ ತಿರುವಿನಲ್ಲಿ ಹಿಂದಿನಿಂದ ಬಂದ ಲಾರಿ (ಕೆಎ 02-ಎಸಿ 2077) ಮಧ್ಯಾಹ್ನ 1.30 ಗಂಟೆ ವೇಳೆಗೆ ಡಿಕ್ಕಿ ಹೊಡೆದಿದೆ. ಲಾರಿ, ವೇಣುಗೋಪಾಲ್‍ರನ್ನು ಬೈಕ್ ಸಮೇತ 100 ಮೀಟರ್‍ವರೆಗೆ ಎಳೆದುಕೊಂಡು ಹೋಗಿದೆ. ಪರಿಣಾಮ ತಲೆ ಸಂಪೂರ್ಣ ಅಪ್ಪಚ್ಚಿಯಾಗಿ ವೇಣುಗೋಪಾಲ್ ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಬೈಕ್‍ಗೆ ಡಿಕ್ಕಿ ಹೊಡೆದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಲಾರಿ (ಎಂಹೆಚ್ 15-ಡಿಎಲ್ 659) ಡಿಕ್ಕಿ ಹೊಡೆದಿದ್ದರಿಂದಾಗಿ ಮುಂದಿನ ಲಾರಿ ಬೈಕ್ ಅನ್ನು 100 ಮೀಟರ್‍ವರೆಗೆ ಎಳೆದುಕೊಂಡು ಹೋಯಿತು ಎಂದು ಸಾರ್ವಜನಿಕರು ಪೊಲೀಸರಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಕೆ.ಆರ್. ಸಂಚಾರ ಠಾಣೆ ಇನ್ಸ್‍ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ಮಹಜರು ನಡೆಸಿ ಮೃತದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂತರಿಸಿದರು. ಡಿಕ್ಕಿ ಹೊಡೆದ ಲಾರಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿ ಯಾಗಿರುವ ಚಾಲಕರ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಕೆ.ಆರ್.ಸಂಚಾರ ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಇಂದು ಸಂಜೆ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದರು.

 

 

Translate »