ಇಂದು ನಗರದ ಕೆಲವೆಡೆ ನೀರು ಪೂರೈಕೆ ವ್ಯತ್ಯಯ
ಮೈಸೂರು

ಇಂದು ನಗರದ ಕೆಲವೆಡೆ ನೀರು ಪೂರೈಕೆ ವ್ಯತ್ಯಯ

September 24, 2020

ಮೈಸೂರು, ಸೆ.23(ಆರ್‍ಕೆಬಿ)- ನಗರದ ವಾರ್ಡ್ ನಂ.45ರಿಂದ 51 (ಶಾರದಾ ದೇವಿನಗರ, ದಟ್ಟಗಳ್ಳಿ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54ರಿಂದ 65 (ಗುಂಡೂರಾವ್‍ನಗರ, ಚಾಮುಂಡಿಪುರಂ, ಕೃಷ್ಣಮೂರ್ತಿಪುರಂ, ಕುವೆಂಪುನಗರ, ಸಿಐಟಿಬಿ, ರಾಮಕೃಷ್ಣನಗರ, ಕುವೆಂಪುನಗರ ಎಂ.ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶಃ ಪ್ರದೇಶ, ವಿಶ್ವೇಶ್ವರನಗರ, ಜೆ.ಪಿನಗರ, ಅರವಿಂದನಗರ, ಶ್ರೀರಾಂಪುರ) ಪ್ರದೇಶಗಳಲ್ಲಿ ಸೆ.24ರ ಗುರುವಾರ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕಬಿನಿ ನೀರು ಸರಬರಾಜು ಯೋಜನೆಯ ಮೂಲಸ್ಥಾವರದಲ್ಲಿ 450 ಹೆಚ್‍ಪಿ ಮೋಟಾರ್ ಮತ್ತು ಸಾಫ್ಟ್ ಸ್ಟಾರ್ಟರ್ ದುರಸ್ತಿ ಕಾಮಗಾರಿ ತುರ್ತಾಗಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ವಾಗಲಿದೆ. ಸಾರ್ವಜನಿಕರು ಸಹಕರಿಸಿ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

 

Translate »