ತ್ವರಿತಗತಿಯಲ್ಲಿ ಪರೀಕ್ಷೆ ನಡೆಸಿ ಕೊರೊನಾ ನಿಯಂತ್ರಿಸಿ
ಮೈಸೂರು

ತ್ವರಿತಗತಿಯಲ್ಲಿ ಪರೀಕ್ಷೆ ನಡೆಸಿ ಕೊರೊನಾ ನಿಯಂತ್ರಿಸಿ

September 24, 2020

ಮೈಸೂರು,ಸೆ.23(ಆರ್‍ಕೆ)-ತ್ವರಿತವಾಗಿ ಹೆಚ್ಚು ಮಂದಿಗೆ ಕೋವಿಡ್-19 ಪರೀಕ್ಷೆ ನಡೆ ಸುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿ ಎನ್.ಜಯರಾಂ ಅವರು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕೋವಿಡ್ -19 ಪರಿಸ್ಥಿತಿ ಹಾಗೂ ನಿರ್ವಹಣೆ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿದಲ್ಲಿ ಸೂಕ್ತ ಸಮ ಯಕ್ಕೆ ಚಿಕಿತ್ಸೆ ನೀಡಿ ರೋಗಿಗಳ ಸಾವು ಮತ್ತು ಸೋಂಕು ಹರಡದಂತೆ ತಡೆಗಟ್ಟ ಬಹುದು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ, ಕೋವಿಡ್ ಆಸ್ಪತ್ರೆಗಳಲ್ಲಿ ತಡ ಮಾಡದೇ ಪರೀಕ್ಷೆ ಮಾಡಿ. ಆಗ ರೋಗ ಲಕ್ಷಣಗಳಿಲ್ಲದಿರುವವರು ಅನಗತ್ಯವಾಗಿ ಪರೀಕ್ಷೆಗೆಂದು ಬರುವುದನ್ನು ತಪ್ಪಿಸಲು ಸಾಧ್ಯ ಎಂದ ಅವರು, ಹೆಚ್ಚು ಜನರು ಸೇರುವ ಮಾರುಕಟ್ಟೆ, ಕಾರ್ಖಾನೆಗಳಂತಹ ಸ್ಥಳಗಳಲ್ಲಿ ತಂಡದ ಅಧಿಕಾರಿಗಳು ಮೊಬೈಲ್ ಯೂನಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಬೇಕು ಎಂದು ಜಯರಾಂ ತಿಳಿಸಿದರು.

ಕೋವಿಡ್ ಆಸ್ಪತ್ರೆಗಳಿಗೆ ಕೊರತೆ ಇರುವ `ಡಿ’ ಗ್ರೂಪ್ ನೌಕರರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು. ಇನ್ನಿ ತರ ಸೌಲಭ್ಯ ಅಗತ್ಯವಿದ್ದರೆ ಅನುದಾನ ಬಳಸಿ ಒದಗಿಸಿಕೊಂಡು ಸೋಂಕು ಹರಡ ದಂತೆ ಕಾರ್ಯನಿರ್ವಹಿಸಿ ಎಂದು ಅವರು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರವಾಹದಿಂದ ಹಾನಿಗೊಳಗಾದ ಆಸ್ತಿ ಪಾಸ್ತಿ ಬಗ್ಗೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ತಕ್ಷಣ ಪರಿಹಾರ ನೀಡಬೇಕು. ಕೃಷಿ ಉಪ ಕರಣಗಳ ಖರೀದಿಗೆ ಸಹಾಯಧನ, ಇನ್ನಿ ತರ ಸೌಲಭ್ಯವನ್ನು ರೈತರಿಗೆ ತಲುಪಿಸುವ ಮೂಲಕ ಸರ್ಕಾರಿ ಯೋಜನೆಗಳು ಫಲಾ ನುಭವಿಗಳಿಗೆ ತಲುಪಿಸುವಂತೆ ನೋಡಿಕೊಳ್ಳ ಬೇಕು ಎಂದು ತಿಳಿಸಿದರು. ದಸರಾ ಮಹೋ ತ್ಸವದ ಸಿದ್ಧತೆಗಳನ್ನು ಸರಿಯಾಗಿ ಮಾಡಿ ಕೊಂಡು ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಸ್ಥಳೀಯ ಜನಪ್ರತಿನಿಧಿಗಳ ಸಲಹೆ ಪಡೆದು ಕಾರ್ಯಕ್ರಮ ರೂಪಿಸಿ, ಕೊರೊನಾ ಹರಡದಂತೆ ಅಗತ್ಯ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಯರಾಂ ತಿಳಿಸಿದರು. ಜಿಲ್ಲಾಧಿ ಕಾರಿ ಬಿ.ಶರತ್, ಎಡಿಸಿ ಬಿ.ಎಸ್. ಮಂಜುನಾಥ ಸ್ವಾಮಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಡಿ.ಭಾರತಿ ಅಡಿಷನಲ್ ಎಸ್ಪಿ ಶಿವಕುಮಾರ್, ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಗುರುದತ್ ಹೆಗ್ಡೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದ

Translate »