ಮೈಸೂರು, ಸೆ.23(ಆರ್‍ಕೆಬಿ)- ರೈತ, ಕಾರ್ಮಿಕರ ವಿರೋಧಿ ಸುಗ್ರೀವಾಜ್ಞೆ ವಿರುದ್ಧ ಐಕ್ಯ ಹೋರಾಟ ಸಮಿತಿ ವತಿಯಿಂದ ಸೆ.25 ರಂದು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಸಮಿತಿಯ ಪರವಾಗಿ ಪ್ರಗತಿಪರ ಮುಖಂಡ ಪ.ಮಲ್ಲೇಶ್ ಮತ್ತು ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಇಂದಿಲ್ಲಿ ತಿಳಿಸಿದರು.
ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಅಂದು ಮೈಸೂರಿನ ತಿ.ನರಸೀಪುರ, ನಂಜನ ಗೂಡು, ಬೆಂಗಳೂರು ಮತ್ತು ಹುಣಸೂರು ಕಡೆಯ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು. ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಲಾಗುವುದು ಎಂದರು. ಸೆ.28ರಂದು ಐಕ್ಯ ಹೋರಾಟ ಸಮಿತಿ ನೀಡುವ ಕರೆ ಮೇರೆಗೆ ಕರ್ನಾಟಕ ಬಂದ್‍ಗೆ ಮೈಸೂರಿನಲ್ಲಿಯೂ ಬಂದ್ ಯಶಸ್ವಿಗೊಳಿಸುವ ಸಂಬಂಧ ಸೆ.25ರ ನಂತರ ಆಟೋ ಚಾಲಕರು, ಹೋಟೆಲ್ ಮಾಲೀ ಕರು ಸೇರಿದಂತೆ ಎಲ್ಲಾ ವರ್ತಕರು ಹಾಗೂ ವಿವಿಧ ಸಂಘಟನೆ ಗಳ ಪ್ರಮುಖರ ಸಭೆಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ಕೈಗೊಳ್ಳ ಲಾಗುವುದು ಎಂದರು. ರೈತ, ಕಾರ್ಮಿಕ ಹಾಗೂ ಜನವಿರೋಧಿ ಮಸೂದೆಗಳನ್ನು ಸರ್ಕಾರ ಹಿಂಪಡೆಯಬೇಕು. ಇಂತಹ ಸರ್ಕಾರಗಳು ಇರಬಾರದು. ಇದ್ದರೆ ಇಂತಹ ಅನೇಕ ಜನವಿರೋಧಿ ಮಸೂದೆಗಳು ಬರುತ್ತಲೇ ಇರುತ್ತವೆ. ಹೀಗಾಗಿ ಉದ್ದೇಶಿತ ಮಸೂದೆಗಳನ್ನು ಕಿತ್ತು ಹಾಕುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು.
ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಉದ್ಭವವಾಗಿರುವ ಸಮಸ್ಯೆಗಳೆ ಲ್ಲವೂ ಸರ್ಕಾರದ ಜೊತೆಗೇ ಹೋಗಬೇಕು. ರೈತರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಅರಿವಿಲ್ಲದ ಈ ಸರ್ಕಾರ ಆರ್‍ಎಸ್‍ಎಸ್ ಹೇಳಿ ದಂತೆ ಆಡಳಿತ ನಡೆಸುತ್ತಿದೆ. ಹಾಗಾಗಿ ಈ ಸರ್ಕಾರ ಹೋಗಿ, ಮುಂದೆ ದಲಿತ, ರೈತರ ಹಾಗೂ ನೊಂದವರ ಪರ ಇರುವಂತಹ ಸರ್ಕಾರ ಬರಬೇಕು ಎಂದು ಅಭಿಪ್ರಾಯಪಟ್ಟರು. ಗೋಷ್ಠಿಯಲ್ಲಿ ಕಬ್ಬು ಬೆಳೆಗಾರರ ಸಂಘದ ಮುಖಂಡ ಶಂಕರ್, ನಾಯಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ರೈತಸಂಘದ ಪಿ.ಮರಂಕಯ್ಯ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಅರವಿಂದ ಶರ್ಮ, ಪರಿಸರ ಸಂರಕ್ಷಣಾ ಸಮಿತಿಯ ಭಾನು ಮೋಹನ್, ದಸಂಸ ಮುಖಂಡ ಕೋಟೆ ರಾಜಶೇಖರ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿ.ಗಣೇಶ್, ಮುಖಂಡರಾದ ಪ್ರಸನ್ನಗೌಡ, ಶಂಭುಲಿಂಗಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.