ಎಸ್‍ಬಿಐ ಸಾಲಗಾರರಿಗೆ ಗುಡ್‍ನ್ಯೂಸ್: ಇಎಂಐಯಿಂದ 2 ವರ್ಷ ರಿಲೀಫ್
ಮೈಸೂರು

ಎಸ್‍ಬಿಐ ಸಾಲಗಾರರಿಗೆ ಗುಡ್‍ನ್ಯೂಸ್: ಇಎಂಐಯಿಂದ 2 ವರ್ಷ ರಿಲೀಫ್

September 24, 2020

ಮುಂಬೈ: ಕೊರೊನಾ, ಲಾಕ್‍ಡೌನ್ ಹಿನ್ನೆಲೆಯಲ್ಲಿ ವಾಣಿಜ್ಯ, ಉದ್ಯಮ ಚಟುವಟಿಕೆ ನಿಂತು ಹೋಗಿವೆ. ಲಕ್ಷಾಂತರ ಮಂದಿ ನೌಕರಿ ಕಳೆದು ಕೊಂಡಿದ್ದಾರೆ. ಹಲವರಿಗೆ ಸಂಬಳ ಕಡಿತವಾಗಿದೆ. ಇವೆಲ್ಲಾ ಕಾರಣ ಗಳಿಂದಾಗಿ ಬಹಳಷ್ಟು ಮಂದಿ ಬ್ಯಾಂಕ್ ಸಾಲಕ್ಕೆ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ತಾತ್ಕಾಲಿಕವಾಗಿ ನೆರ ವಾಗಲು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮುಂದಾಗಿದೆ.

ಗೃಹಸಾಲ, ವಾಹನ ಸಾಲ, ಶಿಕ್ಷಣ ಸಾಲ ಸೇರಿದಂತೆ ವಿವಿಧ ಬಗೆಯ ಸಾಲಗಳನ್ನು ಪಡೆದಿರುವ ಗ್ರಾಹಕರು ಸದ್ಯದ ಪರಿಸ್ಥಿತಿಯಲ್ಲಿ 2 ವರ್ಷ ಗಳವರೆಗೆ ಇಎಂಐ ಪಾವತಿಸುವುದಕ್ಕೆ ವಿರಾಮ ಪಡೆಯಬಹುದಾಗಿದೆ. ಅರ್ಹರಾದ ಗ್ರಾಹಕರಷ್ಟೇ ಈ ಸೌಲಭ್ಯದ ಪ್ರಯೋಜನ ಪಡೆಯ ಬಹುದಾಗಿದೆ. ಇಎಂಐಗೆ ರಜೆ ಸೌಲಭ್ಯ ಪಡೆಯಲಿಚ್ಛಿಸುವವರು ಪ್ರತ್ಯೇಕ ವಾಗಿ ಬ್ಯಾಂಕ್‍ಗೆ ಮನವಿ ಸಲ್ಲಿಸಬೇಕಿದೆ. ಇದಕ್ಕಾಗಿ ಎಸ್‍ಬಿಐ ಹೊಸ ವೆಬ್ ಪೆÇೀರ್ಟಲ್ ತೆರೆದಿದೆ. ಈ ಸೌಲಭ್ಯಕ್ಕೆ ಅರ್ಹರೋ ಇಲ್ಲವೋ ಎಂಬುದನ್ನು ಗ್ರಾಹಕರು ಸ್ವತಃ ತಿಳಿದುಕೊಳ್ಳಬಹುದು.

2020ರ ಮಾರ್ಚ್1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಲಾಕ್‍ಡೌನ್‍ವರೆಗೆ ಸಾಲ ಮರುಪಾವತಿ ಕಂತನ್ನು ನಿಗದಿತವಾಗಿ ಪಾವತಿಸಿರುವ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ. ಆದರೆ, ಅವಧಿ ಮುಗಿದ ಮೇಲೆ ಶೇ.0.35ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸ ಬೇಕಾಗುತ್ತದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

Translate »