ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಎಲ್ಲೆಂದರಲ್ಲಿ ನಾನಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ
ಮೈಸೂರು

ಲಲಿತಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಎಲ್ಲೆಂದರಲ್ಲಿ ನಾನಾ ರೀತಿಯ ಪ್ಲಾಸ್ಟಿಕ್ ತ್ಯಾಜ್ಯ

September 24, 2020

ಮೈಸೂರು, ಸೆ.23(ಪಿಎಂ)- ಚಾಮುಂಡಿ ಬೆಟ್ಟದ ಮಗ್ಗಲಲ್ಲಿ ಹಚ್ಚಹಸಿರಿನಿಂದ ಕೂಡಿ ರುವ ಲಲಿತಮಹಲ್ ಹೆಲಿಪ್ಯಾಡ್ ಮೈದಾನ ದಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಾಂಡವ ವಾಡುತ್ತಿವೆ. ಮೈದಾನದ ಹಸಿರು ಹುಲ್ಲು ಗಾವಲು ಹಾಗೂ ಗಿಡಗಂಟಿಗಳ ನಡುವೆ ನಾನಾ ತರದ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ಇಲ್ಲಿನ ಪರಿಸರಕ್ಕೆ ಮಾರಕವಾಗಿವೆ.

ವಿವಿಧ ರೀತಿಯ ತಿನಿಸುಗಳ ಪ್ಲಾಸ್ಟಿಕ್ ಪೊಟ್ಟಣ, ಆಹಾರ ಸೇವನೆಗೆ ಬಳಸಿ ಬಿಸಾ ಡಿರುವ ಪ್ಲಾಸ್ಟಿಕ್ ತಟ್ಟೆ ಹಾಗೂ ಲೋಟ ಗಳು ಗಾಳಿಯಲ್ಲಿ ಹಾರಾಡುತ್ತ ಹಾಗೂ ಗಿಡಗಂಟಿಗಳ ನಡುವೆ ಸಿಕ್ಕಿಕೊಂಡು ಸುಂದರ ಪರಿಸರಕ್ಕೆ ಕಪ್ಪುಚುಕ್ಕೆಯಂತಾಗಿವೆ. ಇಷ್ಟು ಮಾತ್ರವಲ್ಲದೆ, ಮದ್ಯದ ಗಾಜಿನ ಬಾಟಲಿ ಗಳು ಚೂರು ಚೂರಾಗಿ ಬಿದ್ದಿರುವುದು ಮೈದಾನದ ಅಲ್ಲಲ್ಲಿ ಕಂಡು ಬರುತ್ತಿವೆ. ಇದು ಮದ್ಯ ವ್ಯಸನಿಗಳ ಅಡ್ಡೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ.

ಗಣ್ಯಾತಿಗಣ್ಯರು ಹೆಲಿಕಾಪ್ಟರ್ ಮೂಲಕ ಈ ಹೆಲಿಪ್ಯಾಡ್‍ಗೆ ಬಂದಿಳಿದು ಮೈಸೂ ರಿನಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇಂತಹ ಮೈದಾನ ವನ್ನು ಒಮ್ಮೆ ಸುತ್ತು ಹಾಕಿದರೆ ಪ್ಲಾಸ್ಟಿಕ್ ತ್ಯಾಜ್ಯಗಳ ಹಾರಾಟ ಕಣ್ಣಿಗೆ ರಾಚುತ್ತದೆ.

ಇದೇ ಮೈದಾನದಲ್ಲಿ ಆಗಾಗ್ಗೆ ಕಾರು ರೇಸ್, ಸೈಕ್ಲಿಂಗ್ ಹಾಗೂ ಗಾಳಿಪಟ ಉತ್ಸವ ಸೇರಿದಂತೆ ನಾನಾ ಕಾರ್ಯಕ್ರಮ ಆಯೋ ಜಿಸುವ ಪರಿಪಾಠವಿದೆ. ಆದರೆ ಹೀಗೆ ಕಾರ್ಯಕ್ರಮ ಆಯೋಜಿಸುವ ಸಂದರ್ಭ ದಲ್ಲಿ ವಿವಿಧ ರೀತಿಯ ತಿನಿಸು ಮಾರಾಟವೂ ಜೋರಾಗಿರುತ್ತದೆ. ಇಂತಹ ಸಂದರ್ಭ ದಲ್ಲಿ ವಿವಿಧ ತಿನಿಸುಗಳನ್ನು ಸೇವಿಸಿ ಅವುಗಳ ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡುವು ದಕ್ಕೆ ಕಡಿವಾಣ ಹಾಕದ ಹಿನ್ನೆಲೆಯಲ್ಲಿ ಮೈದಾನಕ್ಕೆ ಪ್ಲಾಸ್ಟಿಕ್ ಕಂಟಕ ಎದುರಾಗಿದೆ.

ಅರಣ್ಯ ಇಲಾಖೆ ಸಹಯೋಗದಲ್ಲಿ ರಘು ಲಾಲ್ ಅಂಡ್ ಕಂಪನಿ ಮಾಲೀಕರಾದ ರಾಘವನ್ ಈ ಮೈದಾನದ ಸುತ್ತಮುತ್ತ ಸಾವಿರಾರು ವಿವಿಧ ಜಾತಿಯ ಗಿಡಗಳನ್ನು ನೆಟ್ಟು ರಕ್ಷಿಸುತ್ತಿದ್ದಾರೆ. ಇವುಗಳ ಬುಡಕ್ಕೂ ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಸುತ್ತಿಕೊಂಡಿವೆ. ಬೇವು, ಹತ್ತಿ, ಹೊಂಗೆ, ಮಹಾಘನಿ, ನೇರಳೆ, ಬಸವನ ಪಾದ, ಅರಳಿ, ಹಿಪ್ಪೆ, ನಂದಿ ಹಾಗೂ ಬಿಲ್ವಾರ ಜಾತಿಯ ಸಸಿಗಳು ಸೇರಿದಂತೆ ನಾನಾ ಬಗೆಯ ಗಿಡಗಳನ್ನು ನೆಟ್ಟು ಪ್ರತಿ ಯೊಂದಕ್ಕೂ ಟ್ರೀ ಗಾರ್ಡ್ ಅಳವಡಿಸಿ ರುವ ಹಿನ್ನೆಲೆಯಲ್ಲಿ ಗಿಡಗಳು ಉತ್ತಮ ವಾಗಿ ಬೆಳವಣಿಗೆ ಕಾಣುತ್ತಿವೆ. ಆದರೆ ಈ ಪ್ಲಾಸ್ಟಿಕ್ ತ್ಯಾಜ್ಯಗಳು ಇಲ್ಲಿನ ಪರಿಸರಕ್ಕೆ ಮಾರಕವಾಗುತ್ತಿವೆ.

 

 

Translate »