ಮೈಸೂರು, ಸೆ.24-ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನ ನೋವು ತರಿಸಿದ್ದು, ಅವರು ಸ್ನೇಹಜೀವಿಯಾಗಿದ್ದರು ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಸಂತಾಪ ಸೂಚಿಸಿದ್ದಾರೆ.
ನಾನು ಸಂಸದನಾಗಿದ್ದ ವೇಳೆ ಅವರೂ ಸಂಸದರಾಗಿ ಉತ್ತಮ ಸ್ನೇಹ ಬಾಂಧವ್ಯವಿತ್ತು. ಸರಳ ಸಜ್ಜನಿಕೆಯ ಸುರೇಶ್ ಅಂಗಡಿ ಇದೀಗ ಕೇಂದ್ರ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಾ ನಷ್ಟವಾಗಿದೆ ಎಂದಿದ್ದಾರೆ. ಅಲ್ಲದೆ, ಇಂದು ನಿಧನರಾದ ಉತ್ತರ ಕರ್ನಾಟಕ ಶಾಸಕ ನಾರಾಯಣ ರಾವ್ ಅವರಿಗೂ ಸಂಸದ ಆರ್.ಧ್ರುವನಾರಾಯಣ್ ಅತೀವ ಸಂತಾಪ ವ್ಯಕ್ತಪಡಿಸಿದ್ದಾರೆ.